ಕೌಶಲ್ಯಾಧಾರಿತ ಕಾರ್ಯಕ್ರಮದಿಂದ ಮನೋವಿಕಾಸ ಹೆಚ್ಚಳ: ಸಿಪಿಐ ಸುರೇಶ್

KannadaprabhaNewsNetwork |  
Published : Jul 21, 2024, 01:24 AM IST
ಫೋಟೋ 20ಪಿವಿಡಿ4ಪಾವಗಡ,ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ ವತಿಯಿಂದ  ತಾ,ದೊಮ್ಮತಮರಿ ಗ್ರಾಮದಲ್ಲಿ ಆಯೋಜಿಸಿದ್ದ ಎನ್‌ಎಸ್‌ಎಸ್‌ ಶಿಬಿರದಲ್ಲಿ ಗ್ರಾಮೀಣ ಮೌಲ್ಯದ ಬಗ್ಗೆ ಸಿಪಿಐ ಸುರೇಶ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಇದೇ ವೇಳೆ ಕಾಲೇಜಿನ ಪ್ರಾಂಶುಪಾಲ ಶ್ರೀಧರ್‌,ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕ ಪ್ರಹ್ಲಾದ್‌ ಇದ್ದಾರೆ.  | Kannada Prabha

ಸಾರಾಂಶ

ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳಿಂದ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದ ಜನತೆಯ ಜತೆ ಬೆರೆತು ಕಲಿಯಲು ಸಾಧ್ಯವಾಗುತ್ತದೆ ಎಂದು ಸಿಪಿಐ ಸುರೇಶ್ ತಿಳಿಸಿದರು. ಪಾವಗಡದಲ್ಲಿ 2023-24 ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಾತನಾಡಿದರು.

ವಾರ್ಷಿಕ ವಿಶೇಷ ಶಿಬಿರ ಆಯೋಜನೆ

ಕನ್ನಡಪ್ರಭ ವಾರ್ತೆ ಪಾವಗಡ

ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳಿಂದ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದ ಜನತೆಯ ಜತೆ ಬೆರೆತು ಕಲಿಯಲು ಸಾಧ್ಯವಾಗುತ್ತದೆ ಎಂದು ಸಿಪಿಐ ಸುರೇಶ್ ತಿಳಿಸಿದರು.

ತಾಲೂಕಿನ ದೊಮ್ಮತಮರಿ ಗ್ರಾಮದಲ್ಲಿ ವೈ ರಂಗಯ್ಯ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಶನಿವಾರ ಆಯೋಜಿಸಿದ್ದ 2023-24 ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಾತನಾಡಿದರು. ಈ ಒಂದು ಶಿಬಿರವನ್ನು ನೋಡುತ್ತಿದ್ದರೆ ನಮ್ಮ ಬಾಲ್ಯದ ನೆನಪುಗಳು ಮರುಕಳಿಸುತ್ತಿವೆ. ಕಾಲೇಜುಗಳಲ್ಲಿ ಬರಿ ಪಠ್ಯವನ್ನು ಪಠಿಸುವುದರ ಜತೆಗೆ ಈ ರೀತಿಯ ಪಠ್ಯೇತರ ಕೌಶಲ್ಯಾಧಾರಿತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಕಾರಣ ಮನೋವಿಕಾಸ ಹೆಚ್ಚಿಸುತ್ತದೆ ಎಂದು ಹೇಳಿದರು.

ಪ್ರಾಂಶುಪಾಲ ಡಾ.ವಿ.ಎನ್.ಮುರಳೀಧರ್ ಮಾತನಾಡಿ, ಇಂದಿನಿಂದ 7 ದಿನ ನಡೆಯುವಂತಹ ವಿಶೇಷ ಶಿಬಿರದಲ್ಲಿ ಗ್ರಾಮೀಣ ಭಾಗದ ಜನರಿಗೆ ಶಿಬಿರದ ಬಗ್ಗೆ ಅರಿವು ಮೂಡಿಸುವಂತಾಗುತ್ತದೆ. ಗ್ರಾಮೀಣ ನೈರ್ಮಲ್ಯ ಹಾಗೂ ಪ್ರಸ್ತುತ ವಿಷಯಗಳ ಬಗ್ಗೆ ಅರಿವು ಮೂಡಿಸುವಂತಾಗಬೇಕಿದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಶಿಬಿರಾಧಿಕಾರಿ ರಾಮಾಂಜನಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಎನ್ನುವುದು ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳಿಗೆ ಸಮಾಜ ಸೇವೆ ಬಗ್ಗೆ ವೃದ್ಧಿಪಡಿಸುವ ಉದ್ದೇಶದಿಂದ ಸ್ಥಾಪಿತವಾಗಿದೆ ಎಂದರು.

ಗ್ರಾಪಂ ಅಧ್ಯಕ್ಷೆ ಗಂಗಮ್ಮ, ಉಪಾಧ್ಯಕ್ಷೆ ರಶೀದ್ ಬಾನು, ನಿವೃತ್ತ ಮುಖ್ಯ ಶಿಕ್ಷಕ ನಾರಾಯಣಪ್ಪ, ಪತ್ರಾಂಕಿತ ವ್ಯವಸ್ಥಾಪಕ ಬಿ.ಪಿ.ಪ್ರಹ್ಲಾಲ್, ಶಿಬಿರಾಧಿಕಾರಿಗಳಾದ ಕೆ.ಬಿ. ರಾಘವೇಂದ್ರ, ವೆಂಕಟರಮಣಪ್ಪ, ಗಿರೀಶ್, ಪ್ರಾಧ್ಯಾಪಕರಾದ ಲಿಂಗರಾಜು, ಸತೀಶ್, ನಾಗರಾಜು, ಉಪನ್ಯಾಸಕರಾದ ಭವ್ಯ ಶಿಬಿರಾರ್ಥಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!