ಸಾಂಸ್ಕೃತಿಕ ಸಂಪತ್ತಿನಿಂದ ನೆಮ್ಮದಿ: ಡಾ.ಮಂಜುನಾಥ

KannadaprabhaNewsNetwork |  
Published : May 27, 2024, 01:03 AM IST
ಕ್ಯಾಪ್ಷನಃ25ಕೆಡಿವಿಜಿ31ಃದಾವಣಗೆರೆಯಲ್ಲಿ ನಮನ ಅಕಾಡೆಮಿಯಿಂದ ನಡೆದ ಇಂಡೋ ಶ್ರೀಲಂಕಾ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಎಚ್.ಬಿ.ಮಂಜುನಾಥ ಉದ್ಘಾಟಿಸಿದರು. | Kannada Prabha

ಸಾರಾಂಶ

ಆಸ್ತಿ, ಅಂತಸ್ತು, ಅಧಿಕಾರ, ಹಣದಿಂದ ಭೌತಿಕ ಸಂಪತ್ತು, ಸಂತೋಷ ಪಡೆಯಬಹುದೇ ಹೊರತು, ಮಾನಸಿಕ ನೆಮ್ಮದಿ ಪಡೆಯಲು ಸಾಧ್ಯವಿಲ್ಲ. ಶಾಸ್ತ್ರೀಯ ನೃತ್ಯ ಸಂಗೀತಗಳು ಮನಸಿಗೆ ನೆಮ್ಮದಿ, ಆತ್ಮಾನಂದ ನೀಡಬಲ್ಲವು ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಹಿರಿಯ ವ್ಯಂಗ್ಯಚಿತ್ರಕಾರ ಡಾ. ಎಚ್.ಬಿ. ಮಂಜುನಾಥ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಇಂಡೋ ಶ್ರೀಲಂಕಾ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ - - - ದಾವಣಗೆರೆ: ಆಸ್ತಿ, ಅಂತಸ್ತು, ಅಧಿಕಾರ, ಹಣದಿಂದ ಭೌತಿಕ ಸಂಪತ್ತು, ಸಂತೋಷ ಪಡೆಯಬಹುದೇ ಹೊರತು, ಮಾನಸಿಕ ನೆಮ್ಮದಿ ಪಡೆಯಲು ಸಾಧ್ಯವಿಲ್ಲ. ಶಾಸ್ತ್ರೀಯ ನೃತ್ಯ ಸಂಗೀತಗಳು ಮನಸಿಗೆ ನೆಮ್ಮದಿ, ಆತ್ಮಾನಂದ ನೀಡಬಲ್ಲವು ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಹಿರಿಯ ವ್ಯಂಗ್ಯಚಿತ್ರಕಾರ ಡಾ. ಎಚ್.ಬಿ. ಮಂಜುನಾಥ ಹೇಳಿದರು.

ಶನಿವಾರ ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿನ ಎಸ್‌ಎಸ್ ಮಲ್ಲಿಕಾರ್ಜುನ ಸಾಂಸ್ಕೃತಿಕ ಭವನದಲ್ಲಿ ನಗರದ ನಮನ ಅಕಾಡೆಮಿ ಹಾಗೂ ಶ್ರೀಲಂಕಾದ ಬೆಸಿಲಿಕ ಸ್ಪೋರ್ಟ್ಸ್ ಅಂಡ್ ಲೀಶರ್ ಜಂಟಿಯಾಗಿ ಏರ್ಪಾಡಿಸಿದ್ದ ಇಂಡೋ ಶ್ರೀಲಂಕಾ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಭಾರತ ಕೇವಲ ವಿಶ್ವದ ದೊಡ್ಡ ಆರ್ಥಿಕ ಶಕ್ತಿಯಷ್ಟೇ ಅಲ್ಲ. ಜಗತ್ತೇ ಪೂಜ್ಯ ಭಾವನೆಯಿಂದ ಗೌರವಿಸುವ ಶಾಸ್ತ್ರೀಯ ಕಲಾಸಂಪತ್ತು ನಮ್ಮಲ್ಲಿದೆ. ಆದರೂ ಬೇರೆ ದೇಶಗಳ ಕಲಾಪ್ರಕಾರಗಳನ್ನು ಗೌರವಿಸುವ ಔದಾರ್ಯತೆ ನಮ್ಮದು ಎಂದರು.

ಶ್ರೀಲಂಕಾದ ಬೆಸಿಲಿಕ ಸ್ಪೋರ್ಟ್ಸ್ ಅಂಡ್ ಲೀಶರ್‌ನ ರೋಷನ್ ಸಿಲ್ವ, ಹಿಮಾಲಿ ಉಪೇಕ್ಷಾ ಜಯತಿಲಕಾ, ಮರಿನಾ ಪೆರೇರಾ, ಅಕಾಡೆಮಿ ನಿರ್ದೇಶಕ ಅನಿಲ್ ಬಾರೆಂಗಳ ಸೇರಿದಂತೆ ಪದಾಧಿಕಾರಿಗಳು ಭಾಗವಹಿಸಿದ್ದರು. ಇತರರು ಭಾಗವಹಿಸಿದ್ದರು. ನಮನ ಅಕಾಡೆಮಿ ಅಧ್ಯಕ್ಷ ಕೆ.ಎನ್.ಗೋಪಾಲಕೃಷ್ಣ ಸ್ವಾಗತಿಸಿದರು. ನೃತ್ಯಗುರು ವಿದುಷಿ ಡಿ.ಕೆ.ಮಾಧವಿ ಗೋಪಾಲಕೃಷ್ಣ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಾನಸಿ, ಶ್ರೀಧರ್ ಕಾರ್ಯಕ್ರಮ ನಿರೂಪಿಸಿದರು. ಪಿ.ಸಿ.ರಾಮನಾಥ್ ವಂದಿಸಿದರು. ಶ್ರೀಲಂಕಾ ಹಾಗೂ ಭಾರತೀಯ ಶಾಸ್ತ್ರೀಯ, ಲಘು ಶಾಸ್ತ್ರೀಯ ನೃತ್ಯ ಪ್ರಸ್ತುತಿಗಳು ಎಲ್ಲರ ಮನಸೂರೆಗೊಳಿಸಿದವು.

- - -

(** ಈ ಫೋಟೋ ಕ್ಯಾಪ್ಷನ್‌ ಪ್ಯಾನೆಲ್‌ಗೆ ಬಳಸಿ)

-25ಕೆಡಿವಿಜಿ31ಃ:

ದಾವಣಗೆರೆಯಲ್ಲಿ ನಮನ ಅಕಾಡೆಮಿಯಿಂದ ನಡೆದ ಇಂಡೋ ಶ್ರೀಲಂಕಾ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಎಚ್.ಬಿ. ಮಂಜುನಾಥ ಉದ್ಘಾಟಿಸಿದರು. ರೋಷನ್ ಸಿಲ್ವ, ಹಿಮಾಲಿ ಉಪೇಕ್ಷಾ ಜಯತಿಲಕಾ, ಮರಿನಾ ಪೆರೇರಾ, ಅಕಾಡೆಮಿ ನಿರ್ದೇಶಕ ಅನಿಲ್ ಬಾರೆಂಗಳ ಇತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ