ವ್ಯಕ್ತಿತ್ವ ವಿಕಸನಕ್ಕೆ ಎನ್ನೆಸ್ಸೆಸ್‌ ಶಿಬಿರಗಳು ಪೂರಕ

KannadaprabhaNewsNetwork | Published : Jun 27, 2024 1:15 AM

ಸಾರಾಂಶ

ಕನಕಪುರ: ವ್ಯಕ್ತಿತ್ವದ ಬೆಳವಣಿಗೆಗೆ ಮೂಲ ಅಭ್ಯಾಸಗಳು ಕಾರಣವಾಗುತ್ತವೆ. ಶಿಬಿರದ ಉದ್ದೇಶಕ್ಕೆ ತಕ್ಕಂತೆ ನಮ್ಮ ಚಟುವಟಿಕೆಗಳನ್ನು ರೂಢಿಸಿಕೊಳ್ಳಬೇಕು. ಬದಲಾವಣೆ ಸಕಾರಾತ್ಮಕ ದಿಕ್ಕಿನಲ್ಲಿ ಸಾಗಲು ಶಿಬಿರ ಸಹಾಯಕಾರಿಯಾಗಿದ್ದು, ಯೋಗ ಮತ್ತು ಅಧ್ಯಾತ್ಮಿಕ ಚಿಂತನೆಗಳು ಒತ್ತಡ ಕಡಿಮೆ ಮಾಡುತ್ತದೆ. ಈ ನಿಟ್ಟಿನಲ್ಲಿ ಶಿಬಿರದ ಕೊಡುಗೆ ಅಪಾರ ಎಂದು ಆಶ್ರಮದ ವ್ಯವಸ್ಥಾಪಕ ಚಂದ್ರಶೇಖರ್ ತಿಳಿಸಿದರು.

ಕನಕಪುರ: ವ್ಯಕ್ತಿತ್ವದ ಬೆಳವಣಿಗೆಗೆ ಮೂಲ ಅಭ್ಯಾಸಗಳು ಕಾರಣವಾಗುತ್ತವೆ. ಶಿಬಿರದ ಉದ್ದೇಶಕ್ಕೆ ತಕ್ಕಂತೆ ನಮ್ಮ ಚಟುವಟಿಕೆಗಳನ್ನು ರೂಢಿಸಿಕೊಳ್ಳಬೇಕು. ಬದಲಾವಣೆ ಸಕಾರಾತ್ಮಕ ದಿಕ್ಕಿನಲ್ಲಿ ಸಾಗಲು ಶಿಬಿರ ಸಹಾಯಕಾರಿಯಾಗಿದ್ದು, ಯೋಗ ಮತ್ತು ಅಧ್ಯಾತ್ಮಿಕ ಚಿಂತನೆಗಳು ಒತ್ತಡ ಕಡಿಮೆ ಮಾಡುತ್ತದೆ. ಈ ನಿಟ್ಟಿನಲ್ಲಿ ಶಿಬಿರದ ಕೊಡುಗೆ ಅಪಾರ ಎಂದು ಆಶ್ರಮದ ವ್ಯವಸ್ಥಾಪಕ ಚಂದ್ರಶೇಖರ್ ತಿಳಿಸಿದರು.

ಗಬ್ಬಾಡಿಯ ಸ್ವಾಮಿ ವಿವೇಕಾನಂದ ಯೋಗವನ ಆಶ್ರಮದಲ್ಲಿ ರೂರಲ್ ಪದವಿ ಕಾಲೇಜು ವಿದ್ಯಾರ್ಥಿಗಳಿಂದ ಏರ್ಪಡಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ವಾರ್ಷಿಕ ಶಿಬಿರದಲ್ಲಿ ಅವರು ಮಾತನಾಡಿದರು.

ಸಂಸ್ಥೆಯ ಅಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿ, ಪುಟ್ಟಸ್ವಾಮಿ ಗಾಂಧೀಜಿ ತತ್ವದಂತೆ ದೇಶ ಅಭಿವೃದ್ಧಿ ಪಥದತ್ತ ಸಾಗಲು ಗ್ರಾಮೀಣ ಪ್ರದೇಶದ ಅಭಿವೃದ್ಧಿಯಿಂದ ಮಾತ್ರ ಸಾಧ್ಯ. ಆ ನಿಟ್ಟಿನಲ್ಲಿ ಈ ರೀತಿ ಶಿಬಿರಗಳು ಹಿಂದುಳಿದ ಗ್ರಾಮಗಳ ಅಭಿವೃದ್ಧಿಗೆ ಕೊಡುಗೆ ನೀಡಬೇಕಿದೆ. ಹುಟ್ಟು ಸಾವುಗಳ ನಡುವೆ ಸೇವೆ ಇಲ್ಲದಿದ್ದರೆ ಮಾನವನ ಬದುಕು ವ್ಯರ್ಥ ಎಂದರು.

ಜಂಟಿ ನಿರ್ದೇಶಕ ಸೂರ್ಯನಾರಾಯಣಗೌಡ ಮಾತನಾಡಿ, ಓದಿನ ಜೊತೆಗೆ ಸೇವಾಭಾವನೆ ಬೆಳೆಸಿಕೊಳ್ಳಲು ಎನ್ನೆಸ್ಸೆಸ್‌ ಶಿಬಿರ ಸಹಾಯಕಾರಿಯಾಗಲಿದೆ. ಮಕ್ಕಳಲ್ಲಿ ನಾಯಕತ್ವ ಗುಣ, ಶ್ರಮದಾನದ ಗುಣ, ಸೇವಾ ಗುಣಗಳನ್ನು ಬೆಳೆಸಲು ಹಾಗೂ ಧನಾತ್ಮಕ ಚಿಂತನೆಯತ್ತ ಬದುಕು ಸಾಗಿಸಲು ಈ ಶಿಬಿರ ಸಹಾಯಕವಾಗಿವೆ. ದೇಶದ ಸದೃಢತೆಗೆ ರಾಷ್ಟ್ರೀಯ ಸೇವಾ ಯೋಜನೆ ಮಹತ್ವ ಅಪಾರವಾಗಿದೆ ಎಂದರು.

ಸಂಸ್ಥೆ ಅಧ್ಯಕ್ಷ ಎಚ್.ಕೆ.ಶ್ರೀಕಂಠು ಮಾತನಾಡಿ, ವಿವೇಕಾನಂದರ ತತ್ವಗಳನ್ನು ಅಳವಡಿಸಿಕೊಂಡರೆ ಸಾಕು. ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಿರುವ ಕಾಲದಲ್ಲಿ ಇಂತಹ ಅಧ್ಯಾತ್ಮಿಕ ಚಿಂತನೆಗಳು ಸಾಮಾಜಿಕ ದೃಷ್ಟಿಯನ್ನು ಬದಲಾಯಿಸುತ್ತವೆ. ಗಾಂಧೀಜಿಯವರು ಸ್ವಾತಂತ್ರ್ಯಕ್ಕೆ ಶ್ರಮಿಸುವುದರ ಜೊತೆಗೆ ಸಾಮಾಜಿಕ ಸೇವೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು. ಅಂತಹ ಮಹಾತ್ಮರ ಚಿಂತನೆಗೆ ಅನುಗುಣವಾಗಿ ಶಿಬಿರ ಸಾಗಿರುವುದು ಸಂತಸ ತಂದಿದೆ. ಸಾಮಾಜಿಕ ಸಂಬಂಧಗಳ ಬೆಸುಗೆಗೆ ಎನ್ನೆಸ್ಸೆಸ್‌ ಶಿಬಿರ ಗಣನೀಯ ಕೊಡುಗೆ ನೀಡಲಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಕಿಂದರಿ ಜೋಗಿ ಪದ್ಯದ ಸಾಲುಗಳನ್ನು ಹಾಡಿದ್ದಕ್ಕಾಗಿ ಪ್ರಾಂಶುಪಾಲ ಎಂ.ಟಿ. ಬಾಲಕೃಷ್ಣ ರವೀಂದ್ರನಾಥ ಠಾಕೂರ್ ಅವರ ಕವನ ಸಂಕಲನಗಳನ್ನು ವಿದ್ಯಾರ್ಥಿಗಳಿಗೆ ನೀಡಿದರು.

ಕಾರ್ಯಕ್ರಮದಲ್ಲಿ ಆರ್‌ಇಎಸ್ ಸಂಸ್ಥೆಯ ಕಾರ್ಯದರ್ಶಿ ಪುಟ್ಟಸ್ವಾಮಿ, ಮಂಜುನಾಥ್, ಸೂರ್ಯನಾರಾಯಣಗೌಡ, ಕಾಲೇಜಿನ ಪ್ರೊ.ಕೆಂಪೇಗೌಡ, ಪ್ರೊ.ಜ್ಯೋತಿ, ಸುಷ್ಮಾ, ಮೋಹನ್ ಕುಮಾರ್, ಮಂಜುನಾಥ್, ಪ್ರಸನ್ನ, ಶಿಬಿರಾಧಿಕಾರಿಯಾದ ಜಗದೀಶ್ ಸೇರಿದಂತೆ ಗಬ್ಬಾಡಿಯ ಗ್ರಾಮಸ್ಥರು ಹಾಗೂ ಶಿಬಿರಾರ್ಥಿಗಳು ಹಾಜರಿದ್ದರು.

ಕೆ ಕೆ ಪಿ ಸುದ್ದಿ 02:

ಆರ್‌ಇಎಸ್‌ ಸಂಸ್ಥೆಯ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರದಲ್ಲಿ ಸ್ವಾಮಿ ವಿವೇಕಾನಂದ ಯೋಗವನ ಆಶ್ರಮದ ವ್ಯವಸ್ಥಾಪಕ ಚಂದ್ರಶೇಖರ್, ಸಂಸ್ಥೆಯ ಅಧ್ಯಕ್ಷ ಪುಟ್ಟಸ್ವಾಮಿ ಇತರರು ಪಾಲ್ಗೊಂಡಿದ್ದರು.

Share this article