ಶಿರಸಿ: ಶಾಸ್ತ್ರಗಳನ್ನು ಪುನಃ ಅವಲೋಕನ ಮಾಡುವುದರಿಂದ ಜ್ಞಾನವು ವೃದ್ಧಿಯಾಗುತ್ತದೆ ಎಂದು ಸೋಂದಾ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.ಸ್ವರ್ಣವಲ್ಲೀ ಮಠದಲ್ಲಿ ೭ ದಿನಗಳ ಕಾಲ ನಡೆಯಲಿರುವ ಶಾಂಕರ ಸರಸ್ವತೀ ಎಂಬ ವಿಶಿಷ್ಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತ್ಯಾಹಾರ, ಧ್ಯಾನ, ಸಮಾಧಿಯೇ ಮೊದಲಾದ ಯೋಗದ ಅಂಗಗಳನ್ನು ಇಟ್ಟುಕೊಂಡು ಯಾರು ಸಾಧನೆಯಲ್ಲಿ ತೊಡಗುತ್ತಾರೋ ಅವರಿಗೆ ದೇವರು ಮನಸ್ಸಿನಲ್ಲಿ ಆನಂದವನ್ನು ಉಂಟುಮಾಡುತ್ತಾನೆ. ಯಾರು ಯೋಗದ ಮೂಲಕ ತನ್ನ ಮನಸ್ಸನ್ನು ತೊಡಗಿಸುತ್ತಾನೋ ಅವನ ಮನಸ್ಸು ಶುದ್ಧವಾಗುತ್ತದೆ. ಇಂದ್ರಿಯಗಳು ವಶಕ್ಕೆ ಬರುತ್ತವೆ. ಶಾಸ್ತ್ರಗಳ ಚಿಂತನೆ ನಿರಂತರವಾಗಿ ಇರಬೇಕು ಎಂದರು.
ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವೇದಾಂತ ವಿಭಾಗದ ಪ್ರಾಧ್ಯಾಪಕರಾಗಿ ನಿವೃತ್ತರಾದ ಡಾ. ಶಂಕರ ಭಟ್ಟ ಬಾಲಿಗದ್ದೆ ಮಾರ್ಗದರ್ಶನ ಮಾಡಿದರು. ಡಾ. ವಿನಾಯಕ ಭಟ್ಟ ಗುಂಜಗೊಡ ನಿರ್ವಹಿಸಿದರು. ಶ್ರೀಮಠದ ಪಾಠಶಾಲೆಯ ಅಧ್ಯಾಪಕರು, ವಿದ್ಯಾರ್ಥಿಗಳು ವಿದ್ವಾಂಸರು, ಮಾತೆಯರು ಶಾಂಕರಸ್ತೋತ್ರ ಪಠಣವನ್ನು ಮಾಡಿದರು.ಇಂದು ಶ್ರೀರಾಮ ಮೂರ್ತಿಯ ಭವ್ಯ ಮೆರವಣಿಗೆಯಲ್ಲಾಪುರ: ಶ್ರೀರಾಮ ಮಂದಿರ ಪ್ರತಿಷ್ಠಾಪನೆಯ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀರಾಮನ ಮೂರ್ತಿಯ ಭವ್ಯ ಮೆರವಣಿಗೆಯು ವಿಶೇಷ ವಾದ್ಯದೊಂದಿಗೆ ಜ. ೨೨ರಂದು ಬೆಳಗ್ಗೆ ೯ಕ್ಕೆ ನಡೆಯಲಿದೆ.ಮೆರವಣಿಗೆಯು ಶ್ರೀಗ್ರಾಮದೇವಿ ದೇವಸ್ಥಾನದಿಂದ ಹೊರಟು ಅಂಬೇಡ್ಕರ್ ವೃತ್ತದಿಂದ ಸುತ್ತುವರಿದು, ಬಸವೇಶ್ವರ ವೃತ್ತದ ಆಟೋ ರಿಕ್ಷಾ ನಿಲ್ದಾಣದ ಹತ್ತಿರ ಪ್ರತಿಷ್ಠಾಪನೆಯಾಗಲಿದೆ. ನಂತರ ಪೂಜೆ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮ ನೆರವೇರಲಿದೆ.