ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ನಂತರ ಮಾತನಾಡಿದ ಡಾ.ಬೆಳಗಲಿ, ವೀರ ರಾಣಿ ಕಿತ್ತೂರು ಚೆನ್ನಮ್ಮ ದಿಟ್ಟ ಸ್ವಾತಂತ್ರ್ಯ ಸೇನಾನಿ. ತನ್ನ ಪರಿವಾರದ ರಕ್ಷಣೆ ಬದಿಗೊತ್ತಿ ದೇಶ, ನಾಡು ರಕ್ಷಣೆಯ ಹೊಣೆ ಹೊತ್ತು ಬಲಿಷ್ಠ ಬ್ರಿಟಿಷ್ ಸೈನಿಕರ ವಿರುದ್ಧ ಹೋರಾಡಿ ಥ್ಯಾಕರೆಯನ್ನು ಸದೆ ಬಡಿದ ಕರುನಾಡಿನ ವೀರ ಮಹಿಳೆ. ಆ ದಿನದ ಸ್ಮರಣೆಯಲ್ಲಿ ರಾಜ್ಯ ಸರ್ಕಾರ ಅ.23ರಂದು ಜಯಂತಿ ಮತ್ತು ವಿಜಯೋತ್ಸವ ಆಚರಿಸಲು ಆದೇಶ ಮಾಡಿದೆ. ಈ ಕಾರಣದಿಂದ ಈ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲು ಪುರಸಭೆ ಒತ್ತಾಯಿಸಿದರು.ಜನವರಿ 25, 2018 ರ ಪುರಸಭೆ ಸಾಮಾನ್ಯ ಸಭೆಯಲ್ಲಿ ವೃತ್ತಕ್ಕೆ ಅಧಿಕೃತವಾಗಿ ಚೆನ್ನಮ್ಮಾಜಿ ಹೆಸರನ್ನು ದೃಢೀಕರಿಸಲಾಗಿದ್ದು ಸೂಕ್ತ ಮತ್ತು ಸ್ವಾಗತಾರ್ಹ ಕ್ರಮ ಎರಡು ಮಾತಿಲ್ಲ. ಆದರೆ ಎರಡು ಶತಮಾನಗಳ ವೀರ ಇತಿಹಾಸ ಹೊಂದಿರುವ ಚೆನ್ನಮ್ಮಾಜಿ ಪುತ್ಥಳಿ ವೃತ್ತದಲ್ಲಿ ಇರದೆ ಇರುವುದು ಬೇಸರದ ಮತ್ತು ಅಗೌರವ ಸಂಗತಿಯಾಗಿದೆ. ಇದಕ್ಕೆ ಸೂಕ್ತ ಕ್ರಮ ಕೈಗೊಂಡು ವೀರ ರಾಣಿಗೆ ಗೌರವ ಸೂಚಕವಾಗಿ ಪುರಸಭೆಯಿಂದ 50 ಲಕ್ಷಗಳ ವೆಚ್ಚದ ಕುದುರೆ ಆರೋಹಿ ವೀರ ರಾಣಿ ಚೆನ್ನಮ್ಮ ಕಂಚಿನ ಪುತ್ಥಳಿ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದರು.ಇದೇ ಸಂದರ್ಭದಲ್ಲಿ ಡಾ ಎ.ಆರ್ ಬೆಳಗಲಿ, ಶ್ರೀಶೈಲಪ್ಪ ಉಳ್ಳಾಗಡ್ಡಿ, ಬಸಪ್ಪ ಕೊಪ್ಪದ, ಈರಪ್ಪ ದಿನ್ನಿಮನಿ, ಚೆನ್ನಪ್ಪ ಪಟ್ಟಣಶೆಟ್ಟಿ, ಹನಮಂತ ಶಿರೋಳ,ಮುತ್ತಪ್ಪ ದಲಾಲ, ಹನಮಂತ ಯರಗಟ್ಟಿ, ಚನ್ನಬಸು ಯರಗಟ್ಟಿ, ಪಂಡಿತ ಖೋತ, ಬಸಪ್ಪ ಅಮ್ಮಣಗಿ, ಮಹಾಲಿಂಗಪ್ಪ ಕಂಠಿ, ಆನಂದ ಖೋತ, ಲಕ್ಷ್ಮಣ ಅಮ್ಮಣಗಿ, ಯಲ್ಲಪ್ಪ ಬಾಗೋಜಿ, ಮಲ್ಲಪ್ಪ ಕುಳಲಿ, ರವಿ ದಲಾಲ, ಮುದುಕಪ್ಪ ಖೋತ, ವಿಜಯಕುಮಾರ ಕುಳಲಿ, ಸಿದ್ರಾಮ ದಲಾಲ, ಶ್ರೀಶೈಲ ರೊಡ್ಡಣ್ಣವರ, ದುಂಡಪ್ಪ ನಂದೆಪ್ಪನವರ, ಶ್ರೀಶೈಲ ಬಿರಾದಾರ, ರುದ್ರಪ್ಪ ಬೀರಣಗಡ್ಡಿ, ಸಿದ್ರಾಮ ದಲಾಲ, ಸಂಗಪ್ಪ ಮಟಗಾರ ಇನ್ನು ಹಲವಾರು ಸಮಾಜದ ಮುಖಂಡರು ಭಾಗಿಯಾಗಿದ್ದರು.