- ಹೆಮ್ಮನಬೇತೂರು, ಹುಲಿಕಟ್ಟೆಯಲ್ಲಿ ''''ಸಂಸದರ ನಡೆ ಗ್ರಾಮಗಳ ಕಡೆ'''', ಪ್ರಜಾಸ್ಪಂದನ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಜಗಳೂರು
ಜನಸಾಮಾನ್ಯರು ಮತ್ತು ಅಧಿಕಾರಿಗಳ ನಡುವಿನ ಆಡಳಿತಾತ್ಮಕ ಅಂತರವನ್ನು ಕಡಿಮೆ ಮಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನಾ ಸೌಲಭ್ಯಗಳು ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ತಲುಪಿಸುವ ಉದ್ದೇಶದಿಂದ ನೇರವಾಗಿ ಗ್ರಾಮಗಳಿಗೆ ಭೇಟಿ ನೀಡಿ ಜನರ ಅಹವಾಲುಗಳನ್ನು ಸ್ವೀಕರಿಸುತ್ತಿದ್ದೇನೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ತಿಳಿಸಿದರು.ಮಾಯಕೊಂಡ ಕ್ಷೇತ್ರದ ಹೆಮ್ಮನಬೇತೂರು ಹಾಗೂ ಹುಲಿಕಟ್ಟೆ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ''''ಸಂಸದರ ನಡೆ ಗ್ರಾಮಗಳ ಕಡೆ'''' ಹಾಗೂ ‘ಪ್ರಜಾ ಸ್ಪಂದನ’ ಕಾರ್ಯಕ್ರಮವನ್ನು ದಾವಣಗೆರೆ ತಾಲೂಕಿನ ಕಡೆಯ ಹಾಗೂ ಜಗಳೂರು ತಾಲೂಕಿನ ಗಡಿಗ್ರಾಮ ಹೆಮ್ಮನಬೇತೂರಿನಲ್ಲಿ ಉದ್ಪಾಟಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪ್ರಜಾಸೇವಾ ಕಾರ್ಯಕ್ರಮದ ಮಾದರಿಯಲ್ಲಿ, ಗ್ರಾಮೀಣ ಬಡವರು ಹಾಗೂ ವಿಕಲಚೇತನರಿಗೆ ಸರ್ಕಾರದ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಬಿಪಿಎಲ್ ಕಾರ್ಡ್, ಪಿಂಚಣಿ, ಅಂಗವಿಕಲರ ಮಾಶಾಸನ ಹಾಗೂ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ತಕ್ಷಣಕ್ಕೆ ಸಾಧ್ಯವಾಗುವ ದೂರುಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಲಾಗುವುದು. ಕಾಲಾವಕಾಶ ಬೇಕಾಗುವ ಕೆಲಸಗಳಿಗೆ ನಿಗದಿತ ಗಡುವು ನೀಡಿ ಅಧಿಕಾರಿಗಳಿಂದ ಕೆಲಸ ಮಾಡಿಸಲಾಗುವುದು ಎಂದರು.
ಬಡ ನಿವಾಸಿ ಮನೆಗೆ ಭೇಟಿ:
ಪಿಎಂ ಫಂಡ್‌ನಿಂದ ಈಗಾಗಲೇ ₹1.25 ಕೋಟಿಯನ್ನು ಸುಮಾರು 60 ಲಕ್ಷ ಫಲಾನುಭವಿಗಳಿಗೆ ವಿತರಿಸಲಾಗಿದೆ. ಎಸ್‌ಎಸ್ ಕೇರ್ ಟ್ರಸ್ಟ್ ವತಿಯಿಂದ ಉಚಿತ ಡಯಾಲಿಸಿಸ್ ಹಾಗೂ ಕಣ್ಣಿನ ಪರೀಕ್ಷೆ ಸೌಲಭ್ಯ ಕಲ್ಪಿಸಲಾಗುತ್ತಿದೆ. ಎಸ್‌ಎಸ್ ಜನಕಲ್ಯಾಣ ಟ್ರಸ್ಟ್ ಮೂಲಕ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಬಿಪಿಎಲ್ ಕಾರ್ಡ್, ಪಿಂಚಣಿ, ಅಂಗವಿಕಲರ ಮಾಶಾಸನ ಹಾಗೂ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ತಕ್ಷಣಕ್ಕೆ ಸಾಧ್ಯವಾಗುವ ದೂರುಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಲಾಗುವುದು ಎಂದರು.
ಹೆಮ್ಮನಬೇತೂರು ಗ್ರಾಮ ಪಂಚಾಯಿತಿಯ ವಿವಿಧ ಹಳ್ಳಿಗಳ ನೂರಾರು ಮಹಿಳೆಯರು, ಪುರುಷರು, ಮನೆ ಇಲ್ಲಾ, ಬಿಪಿಎಲ್ ಕಾರ್ಡ ಇಲ್ಲಾ, ನಕಾಶೆ ದಾರಿ ಇದ್ದರೂ ಹೊಲಗಳಿಗೆ ಸಂಚರಿಸಲು ಬಿಡುತ್ತಿಲ್ಲ, ವಿದ್ಯುತ್ ಸಂಪರ್ಕ ಕಲಿಸುವುದು ಸೇರಿದಂತೆ ಹಲವಾರು ಸಮಸ್ಯೆಗಳನ್ನು ಸಂಸದರು 1 ಗಂಟೆ ಆಲಿಸಿ, ಕಾಲಮಿತಿಯೊಳಗೆ ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
- - -
-17ಜೆ.ಜಿ.ಎಲ್.ಆರ್ ಚಿತ್ರ2: ಹೆಮ್ಮನಬೇತೂರಲ್ಲಿ ನಿವಾಸಿ ಎ.ಕೆ. ಮಹಾಂತೇಶ ಮನೆಗೆ ಭೇಟಿ ನೀಡಿದ ಸಂಸದೆ ಡಾ.ಪ್ರಭಾ ವಾಸ್ತವ ಪರಿಸ್ಥಿತಿ ಪರಿಶೀಲಿಸಿ, ನೆರವು ಕಲ್ಪಿಸುವ ಭರವಸೆ ನೀಡಿದರು.