ಕನ್ನಡ ಪ್ರಭ ವಾರ್ತೆ , ಬಾಳೆಹೊನ್ನೂರು
ಪಟ್ಟಣದ ವಿದ್ಯಾಗಣಪತಿ ಮಹೋತ್ಸವದ ಪೆಂಡಾಲ್‌ನಲ್ಲಿ ಗುರುವಾರ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ ಸಿಎಂ ಭೇಟಿ ಹಿನ್ನೆಲೆಯಲ್ಲಿ ಪಟ್ಟಣದ ಕಲಾರಂಗ ಕ್ರೀಡಾಂಗಣದಲ್ಲಿ ಈಗಾಗಲೇ ಪ್ರತ್ಯೇಕ ವೇದಿಕೆ ನಿರ್ಮಾಣಕ್ಕೆ ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಿದ್ದು, ಚುರುಕಾಗಿ ಕೆಲಸ ನಿರ್ವಹಿಸುವಂತೆ ಸೂಚಿಸಲಾಗಿದೆ. ಬಂದೋಬಸ್ತ್ ಗಾಗಿ ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ. ಅಗತ್ಯ ಸ್ಥಳಗಳಿಗೆ ಪೊಲೀಸ್ ಸಿಬ್ಬಂದಿ ನಿಯೋಜಿಸಲು ಕ್ರಮವಹಿಸಲಾಗಿದೆ.
ವಿಐಪಿ ಪಾರ್ಕಿಂಗ್, ಸಾರ್ವಜನಿಕರ ವಾಹನಗಳ ಪಾರ್ಕಿಂಗ್‌ಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗದಂತೆ ಹಾಗೂ ಹೆಲಿಪ್ಯಾಡ್ ಬಳಿ ಹಾಗೂ ಸಿಎಂ ಸಂಚಾರ ರಸ್ತೆಯಲ್ಲಿ ಸಾರ್ವಜನಿಕರ ಪ್ರವೇಶ ವಿರದಂತೆ ಕ್ರಮಕ್ಕೆ ಸೂಚಿಸಿದರು.ವೇದಿಕೆ ಹಾಗೂ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಇಲಾಖೆಯವರು ಸೂಕ್ತ ಪ್ರಥಮ ಚಿಕಿತ್ಸಾ ವ್ಯವಸ್ಥೆ ಗಳನ್ನು ಹಾಗೂ ಹೆಚ್ಚು ಬಿಸಿಲಿರುವ ಕಾರಣ ಸಾರ್ವಜನಿಕರು ಸುಸ್ತಾಗದಂತೆ ಗ್ಲೋಕೋಸ್ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.
ವಾರ್ತಾ ಇಲಾಖೆ ಜಿಲ್ಲೆಯ ಎಲ್ಲಾ ಗ್ರಾಪಂಗಳಿಗೂ ಸಿಎಂ ಸಭೆ ಕುರಿತು ತುರ್ತು ಮಾಹಿತಿ ನೀಡಿ ಜನರಿಗೆ ಕಾರ್ಯ ಕ್ರಮ ಉದ್ದೇಶ ತಲುಪಿಸಬೇಕು. ಮಾಧ್ಯಮದವರಿಗೆ ಪ್ರತ್ಯೇಕ ಗ್ಯಾಲರಿ ಇದ್ದು, ಅವರಿಗೆ ಅಗತ್ಯ ಪಾಸ್, ಊಟೋಪಚಾರದ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದರು.
ಸಾರ್ವಜನಿಕರು ಅಹವಾಲು ಸಲ್ಲಿಸಲು ಈಗಾಗಲೇ ಕ್ರಮಕೈಗೊಂಡಿದ್ದು, ಸ್ಥಳೀಯ ನಾಡಕಚೇರಿಯಲ್ಲಿ ಕೌಂಟರ್ ತೆರೆಯಲಾಗಿದೆ. ಕಾರ್ಯಕ್ರಮದ ದಿನ ಸಹ ವೇದಿಕೆ ಬಳಿ ಒಂದು ಪ್ರತ್ಯೇಕ ಕೌಂಟರ್ ತೆರೆದು ಸ್ವೀಕರಿಸಿದ ಅಹವಾಲು ಗಳನ್ನು ಮುಖ್ಯಮಂತ್ರಿಗಳಿಗೆ ತಲುಪಿಸಲಾಗುವುದು. ಮುಖ್ಯಮಂತ್ರಿಗೆ ನೇರವಾಗಿ ಮನವಿ ಸಲ್ಲಿಸುವ ಕುರಿತು ಪಟ್ಟಿ ಮಾಡಿ ಆಯ್ದ ವ್ಯಕ್ತಿಗಳಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
ಅಡಿಷನಲ್ ಎಸ್ಪಿ ಜಯಕುಮಾರ್, ಮೇಘ ಅಗರ್‌ವಾಲ್, ಡಿಎಫ್‌ಓ ಶಿವಶಂಕರ್, ತಹಸೀಲ್ದಾರ್ ಡಾ.ನೂರುಲ್ ಹುದಾ, ಸಿಪಿಐ ಗುರು ಕಾಮತ್, ತಾಪಂ ಇಓ ನವೀನ್‌ಕುಮಾರ್, ಪ್ರಮುಖರಾದ ಎಂ.ಎಸ್.ಚನ್ನಕೇಶವ್, ಮಹಮ್ಮದ್ ಹನೀಫ್, ಬಿ.ಕೆ.ಮಧುಸೂದನ್, ಕೆ.ಆರ್.ದೀಪಕ್ ಕೊಳಲೆ, ಜಾನ್ ಡಿಸೋಜಾ, ಹೇಮಲತ, ಚಂದ್ರಮ್ಮ, ಇಬ್ರಾಹಿಂ ಶಾಫಿ, ಕೆ.ಟಿ.ಗೋವಿಂದೇಗೌಡ ಮತ್ತಿತರರು ಇದ್ದರು.೧೭ಬಿಹೆಚ್‌ಆರ್ ೩: