ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನ ಸದ್ಬಳಕೆಯಾಗಲಿ: ಹರಿರಾಮ್

KannadaprabhaNewsNetwork |  
Published : Oct 12, 2026, 01:45 AM IST
ಚೇಳೂರು ಪಟ್ಟಣದ ಸವಿತಾ ಸಮಾಜ ಕಲ್ಯಾಣ ಮಂಟಪದ ಮುಂಬಾಗ ಶನಿವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅನುದಾನ ದುರ್ಬಳಕೆ ಖಂಡಿಸಿ ಕರ್ನಾಟಕ ಹೈಕೋರ್ಟ್ ವಕೀಲ ಪ್ರೊ. ಹರಿ ರಾಮ್ ಆಕ್ರೋಶ ವ್ಯಕ್ತಪಡಿಸಿದರು. | Kannada Prabha

ಸಾರಾಂಶ

2014ರಿಂದ ಈ ಯೋಜನೆಗಳಡಿ ಅನುದಾನ ಮೀಸಲಿಡಲಾಗುತ್ತಿದ್ದು, ಅದರ ಬಳಕೆ ಮತ್ತು ಸಮುದಾಯಗಳಿಗೆ ದೊರೆತ ಪ್ರಯೋಜನಗಳ ಕುರಿತು ಪಾರದರ್ಶಕತೆ ಇರಬೇಕು.

ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನದ ಸದ್ಬಳಕೆ ಕುರಿತು ಆಯೋಜಿಸಿದ್ದ ಜಾಗೃತಿ ಸಭೆಯಲ್ಲಿ ಪ್ರೊ. ಹರಿರಾಮ್

ಕನ್ನಡಪ್ರಭ ವಾರ್ತೆ ಚೇಳೂರು

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿಡುವ ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನವನ್ನು ಶಿಕ್ಷಣ, ಉದ್ಯೋಗ, ಆರೋಗ್ಯ, ವಸತಿ ಹಾಗೂ ಆರ್ಥಿಕ ಸ್ವಾವಲಂಬನೆಗೆ ಪರಿಣಾಮಕಾರಿಯಾಗಿ ಬಳಸಬೇಕು ಎಂದು ಹೈಕೋರ್ಟ್ ವಕೀಲ ಪ್ರೊ. ಹರಿರಾಮ್ ಹೇಳಿದರು.ಚೇಳೂರು ಪಟ್ಟಣದ ಬಾಗೇಪಲ್ಲಿ ರಸ್ತೆಯಲ್ಲಿರುವ ಸವಿತಾ ಸಮಾಜ ಕಲ್ಯಾಣ ಮಂಟಪದಲ್ಲಿ ಶನಿವಾರ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನದ ಸದ್ಬಳಕೆ ಕುರಿತು ಆಯೋಜಿಸಿದ್ದ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, 2014ರಿಂದ ಈ ಯೋಜನೆಗಳಡಿ ಅನುದಾನ ಮೀಸಲಿಡಲಾಗುತ್ತಿದ್ದು, ಅದರ ಬಳಕೆ ಮತ್ತು ಸಮುದಾಯಗಳಿಗೆ ದೊರೆತ ಪ್ರಯೋಜನಗಳ ಕುರಿತು ಪಾರದರ್ಶಕತೆ ಇರಬೇಕು ಎಂದರು.ಕಳೆದ 13 ವರ್ಷಗಳಲ್ಲಿ ಸುಮಾರು 3.85 ಲಕ್ಷ ಕೋಟಿ ರು.ಗೂ ಅಧಿಕ ಅನುದಾನ ಮೀಸಲಿಡಲಾಗಿದೆ. ಅನುದಾನವು ಉದ್ದೇಶಿತ ಸಮುದಾಯಗಳ ಅಭಿವೃದ್ಧಿಗೆ ಎಷ್ಟರಮಟ್ಟಿಗೆ ಬಳಕೆಯಾಗಿದೆ ಎಂಬುದರ ಕುರಿತು ಸಮರ್ಪಕ ಲೆಕ್ಕಪತ್ರ ಹಾಗೂ ಮಾಹಿತಿ ಸಾರ್ವಜನಿಕರಿಗೆ ಲಭ್ಯವಾಗಬೇಕು ಎಂದು ಅಭಿಪ್ರಾಯಪಟ್ಟರು.ಗ್ಯಾರಂಟಿ ಯೋಜನೆಗಳಿಗೆ ಅನುದಾನ ಬಳಕೆಯಾಗಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಅವರು, ಎಸ್‌ಸಿಎಸ್‌ಪಿ, ಟಿಎಸ್‌ಪಿ ಹಣದ ವಿನಿಯೋಗದಲ್ಲಿ ಕಾಯ್ದೆಯ ಉದ್ದೇಶ ಪಾಲನೆಯಾಗಬೇಕು. ಅನುದಾನವನ್ನು ಹಲವು ಇಲಾಖೆಗಳ ನಡುವೆ ಚದುರಿಸುವ ಬದಲು ಶಿಕ್ಷಣ, ಉದ್ಯೋಗ, ಆರೋಗ್ಯ, ವಸತಿ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.ಕಾರ್ಯಕ್ರಮದಲ್ಲಿ ಬಿಪಿಎಸ್ ಸಂಘದ ಮುಖಂಡರು ಕೆವಿ ವೆಂಕಟರವಣ, ಟಿಒ ಆಂಜನೇಯಪ್ಪ, ಪೋಸ್ಟ್ ನರಸಿಂಹಪ್ಪ,ದಲಿತ ಮುಖಂಡರು ಜಿ ನರಸಿಂಹಪ್ಪ,ರಾಮಚಂದ್ರ,ಪ್ರೇಮ್ ಕುಮಾರ್,ಕಲಾವಿದ ರವಿಚಂದ್ರ,ರಾಮಕೃಷ್ಣ,ಶಿಕ್ಷಕರು ನಾರಾಯಣಸ್ವಾಮಿ,ಶ್ರೀ ರಾಮ ಕೆ ವೈ,ಹೊಸಹುಡ್ಯ ರಮೇಶ್ ಸೇರಿದಂತೆ ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಯಾನ್ಸಿರಾಂ ತತ್ವಾದರ್ಶಗಳ ಆದರ್ಶಗಳ ಪಾಲಿಸಿ: ಅಂದಾನಪ್ಪ
ಚಂದ್ರಶೇಖರ್ ನಿಸ್ವಾರ್ಥ ರಾಜಕಾರಣಿ,ಪಟೇಲರು ಶ್ರೇಷ್ಠರು: ಬಿಎಲ್‌ ಶಂಕರ್‌