ಕನ್ನಡಪ್ರಭ ವಾರ್ತೆ ಗುಬ್ಬಿ
ನಂತರ ಮೋರಾರ್ಜಿ ವಸತಿ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ನೀರಿಗಾಗಿ ಹೊಸದಾಗಿ ಕೊರೆಸಿದ್ದ ಬೋರ್ ವೆಲ್ ನಲ್ಲಿ ನೀರು ಬರದ ಕಾರಣ ಬೇರೆ ವ್ಯವಸ್ಥೆ ಮಾಡಿಕೊಂಡು ನನಗೆ ವರದಿ ಕಳಿಸಬೇಕೆಂದು ತಿಳಿಸಿದರು. ಮೋರಾರ್ಜಿ ವಸತಿ ಶಾಲೆಗೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಸಿಇಒ ಅಶ್ವಿಜ ಅವರು ಕಂಪ್ಯೂಟರ್ ಲ್ಯಾಬ್ ಗೆ ಭೇಟಿ ನೀಡಿ ಮಕ್ಕಳಿಗೆ ಕಂಪ್ಯೂಟರ್ ಬಗ್ಗೆ ಮಾಹಿತಿ ನೀಡಿದರು. ಮಕ್ಕಳು ವಿದ್ಯಾಭ್ಯಾಸದ ಕಡೆ ಗಮನ ಹರಿಸಬೇಕು. ನಿಮಗೆ ಯಾವುದೇ ತೊಂದರೆಗಳು ಇದ್ದಾರೆ ನಮ್ಮ ಗಮನಕ್ಕೆ ತನ್ನಿ ಎಂದರು. ಹೂವಿನಕಟ್ಟೆಯಲ್ಲಿ ನಡೆಯುತ್ತಿರುವ ಜೆಜೆಎಂ ಕಾಮಗಾರಿ ವೀಕ್ಷಣೆ ಮಾಡಿ ಅದಷ್ಟು ಬೇಗ ಕಾಮಗಾರಿಯನ್ನು ಮುಗಿಸಬೇಕು. ಮನೆಗಳಿಗೆ ಭೇಟಿ ನೀಡಿ ಜೆಜೆಎಂ ಬಗ್ಗೆ ಮಾಹಿತಿ ನೀಡಿ ಗ್ರಾಮದ ಮನೆಗಳಲ್ಲಿ ನಲ್ಲಿ ಹಾಕಿದರೆ ಅನುಕೂಲವಾಗುತ್ತದೆ ಜಲ ಜೀವನ್ ಮಿಷನ್ ಯೋಜನೆಯ ನಲ್ಲಿಗಳನ್ನು ಅದಷ್ಟು ಬೇಗನೆ ಮಾಡುತ್ತೇವೆ ಎಂದು ಭರವಸೆ ನೀಡಿದರು.ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೈಟ್ ಅಂಚಿಕೆಯನ್ನು ಶೀಘ್ರವಾಗಿ ಅಂಚಿಕೆ ಮಾಡಬೇಕು ಎಂದು ಪಿಡಿಒ ರೇಖಾ ಅವರಿಗೆ ತಿಳಿಸಿದರು. ಸೈಟ್ ಅಂಚಿಕೆ ವಿಚಾರದಲ್ಲಿ ಪಾರದರ್ಶಕವಾಗಿ ಇರಬೇಕು. ಮನೆ ಇಲ್ಲದವರಿಗೆ ಕಡುಬಡವರಿಗೆ ಸೈಟ್ ಅಂಚಿಕೆ ಮಾಡಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಪುಟ್ಟರಾಜು ಎಇಇ ಎಂಜಿನಿಯರ್ ನಾಗೇಂದ್ರಪ್ಪ ಮೋರಾರ್ಜಿ ಪ್ರಾಶುಪಾಲರಾದ ಮಲಗೌಡ , ಸುರೇಶ್ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.