
ಕನ್ನಡಪ್ರಭ ವಾರ್ತೆ ಮಡಿಕೇರಿ
ಶಿಬಿರವನ್ನು ಮಡಿಕೇರಿಯ ಮೈತ್ರಿ ಸಭಾಂಗಣದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ದಿನೇಶ್ ಬಿ. ಉದ್ಘಾಟಿಸಿದರು. ಕಾರ್ಯಕ್ರಮವನ್ನು ಮೈಸೂರಿನಲ್ಲಿರುವ ವಾಕ್ , ಶ್ರವಣ ಮತ್ತು ಇಂಪ್ಲಾಂಟ್ ಕ್ಲಿನಿಕ್ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ತಜ್ಞ ವೈದ್ಯ ಡಾ. ರಾಧಾ ಸಿಂಹಾದ್ರಿ ಶಿಬಿರದ ನೇತೃತ್ವ ವಹಿಸಿದ್ದರು. ಭಾರತೀಯ ವಿದ್ಯಾ ಭವನದ ಕೊಡಗು ಘಟಕ ಕಾರ್‍ಯದರ್ಶಿ ಬಾಲಾಜಿ ಕಾಶ್ಯಪ್ ಉಪಸ್ಥಿತರಿದ್ದರು. ಪೊಲೀಸ್ ಸಿಬ್ಬಂದಿ ಅಧಿಕ ಸಂಖ್ಯೆಯಲ್ಲಿ ಶಿಬಿರದ ಪ್ರಯೋಜನ ಪಡೆದರು.