ಕನ್ನಡಪ್ರಭ ವಾರ್ತೆ ಕೋಲಾರಪರಿಶಿಷ್ಟ ಒಳ ಮೀಸಲಾತಿ ಸಮೀಕ್ಷೆಯ ನೋಂದಣಿಯಲ್ಲಿ ಹೊಲೆಯ ಎಂದು ದಾಖಲಿಸಿದಾಗ ಮಾತ್ರ ಸಾಮಾಜಿಕ ನ್ಯಾಯ ಸಿಗಲು ಸಾಧ್ಯ ಎಂದು ಜಿಪಂ ಮಾಜಿ ಸದಸ್ಯ ಬಾಲಾಜಿ ಚೆನ್ನಯ್ಯ ಪ್ರತಿಪಾದಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮುದಾಯದವರು ಯಾವುದೇ ಗೊಂದಲಕ್ಕೆ ಒಳಗಾಗದೆ ಯಾವುದೇ ರೀತಿ ಮುಜುಗರಕ್ಕೆ ಒಳಗಾಗದೆ ಉಪಜಾತಿಯ ಕಾಲಂನಲ್ಲಿ ಹೊಲಯ ಎಂದು ನೋಂದಾಯಿಸುವುದರಿಂದ ನಮ್ಮ ಮುಂದಿನ ಪೀಳಿಗೆಗೆ ಸಾಮಾಜಿಕ ನ್ಯಾಯ ಸಿಗಲು ಸಾಧ್ಯಏಕ ಸದಸ್ಯತ್ವ ಆಯೋಗ
ಸುಪ್ರೀಂ ಕೋಟ್ ಆದೇಶದಂತೆ ಪರಿಶಿಷ್ಟ ಸಮುದಾಯದ ಸಮೀಕ್ಷೆಗೆ ಸಂಬಂಧಿಸಿದಂತೆ ಆಯಾಯಾ ರಾಜ್ಯದ ನಿರ್ಧಾರಗಳಿಗೆ ಅಧಿಕಾರ ನೀಡಿದ ಹಿನ್ನೆಲೆಯಲ್ಲಿ ರಾಜ್ಯದ ಸಿಎಂ ಸಿದ್ದರಾಮಯ್ಯ ಈ ಹಿಂದಿನ ಸದಾಶಿವಯ್ಯ ಆಯೋಗದ ವರದಿಯು ಅವೈಜ್ಞಾನಿಕವಾಗಿರುವ ಹಿನ್ನಲೆಯಲ್ಲಿ ಪರಿಶಿಷ್ಟ ಜಾತಿಯಲ್ಲಿ ೧೦೧ ಉಪಜಾತಿಗಳ ಗೊಂದಲ ಬಗೆ ಹರಿಸಲು ಹೊಸದಾಗಿ ನಿವೃತ್ತ ನ್ಯಾಯಾಧೀಶರಾದ ಎಚ್.ಎನ್.ನಾಗಮೋಹನ್ ದಾಸ್ ಏಕ ಸದಸ್ಯತ್ವ ಆಯೋಗದ ನೇತೃತ್ವದಲ್ಲಿ ಸಮೀಕ್ಷಾ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದರು. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಔದ್ಯೋಗಿಕವಾಗಿ ಮನೆ ಮನೆ ನಡೆಸುತ್ತಿರುವ ಸಮೀಕ್ಷಾ ಕಾರ್ಯದಲ್ಲಿ ಚಿಕ್ಕತಾಳಿ, ದೊಡ್ಡ ತಾಳಿ, ಎಡ ಬಲ ಎಂಬುವುದನ್ನು ಪರಿಗಣಿಸಬಾರದು ಪರಿಶಿಷ್ಟರಲ್ಲಿ ನಮ್ಮದು ಹೊಲೆಯ ಜಾತಿ ಎಂದು ನಮೂದಿಸಬೇಕು ಎಂದು ಅವರು ಸಮುದಾಯಕ್ಕೆ ಮನವಿ ಮಾಡಿದರು.ಯಾರು ಮುಜುಗರ ಪಡಬೇಡಿ
ಹೊಲಯ ಎಂದು ನಮೂದಿಸಲು ಯಾರು ಮುಜುಗರ ಪಡಬಾರದು ಈ ಹಿಮದೆ ಹೊಲಯ ಎಂದು ನಿಂದಿಸಿದರೆ ಜಾತಿ ನಿಂದನೇ ಪ್ರಕರಣ ದಾಖಲಾಗುತ್ತಿತ್ತು, ಆದರೆ ಇಂದು ಜಾತಿಯ ಹೆಸರನ್ನು ನಮೂದಿಸುವ ಮೂಲಕ ಸಮರ್ಪಕವಾದ ಮೀಸಲಾತಿ ದತ್ತಾಂಶ ಸಿಗಬೇಕಾದರೆ ಜಾತಿ ಹೆಸರನ್ನು ನೊಂದಾಯಿಸ ಬೇಕಾಗಿರುವುದು ಅನಿವಾರ್ಯವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಆವನಿ ಕೃಷ್ಣಪ್ಪ, ಉಮಾಶಂಕರ್, ಕಲ್ವಮಂಜಲಿ ಶಿವಣ್ಣ ಇದ್ದರು.