ಉಪಜಾತಿ ಕಾಲಂನಲ್ಲಿ ಹೊಲೆಯ ಎಂದು ನಮೂದಿಸಿ

KannadaprabhaNewsNetwork |  
Published : Apr 28, 2025, 11:50 PM IST
೨೮ಕೆಎಲ್‌ಆರ್-೯ಕೋಲಾರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಬಲಗೈ ಒಳ ಮೀಸಲಾತಿ ಜಿಲ್ಲಾ ಜಾಗೃತಿ ಸಮಿತಿಯ ಅಧ್ಯಕ್ಷ ಎಸ್.ಬಿ.ಮುನಿವೆಂಕಟಪ್ಪ ಮಾತನಾಡುತ್ತಿರುವುದು. | Kannada Prabha

ಸಾರಾಂಶ

ಒಳ ಮೀಸಲಾತಿಗಾಗಿ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಆಯೋಗ ನಡೆಸುತ್ತಿರುವ ಸಮೀಕ್ಷೆಯಲ್ಲಿ ಬಲಗೈಗೆ ಸಂಬಂಧಿಸಿದ ೩೭ ಉಪಜಾತಿಗಳವರು ಉಪಜಾತಿ ಕಾಲಂನಲ್ಲಿ ಕಡ್ಡಾಯವಾಗಿ ಹೊಲೆಯ ಎಂದು ನಮೂದಿಸಬೇಕು ಎಂದು ಬಲಗೈ ಒಳ ಮೀಸಲಾತಿ ಜಿಲ್ಲಾ ಜಾಗೃತಿ ಸಮಿತಿಯ ಅಧ್ಯಕ್ಷ ಎಸ್.ಬಿ.ಮುನಿವೆಂಕಟಪ್ಪ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕೋಲಾರಒಳ ಮೀಸಲಾತಿಗಾಗಿ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಆಯೋಗ ನಡೆಸುತ್ತಿರುವ ಸಮೀಕ್ಷೆಯಲ್ಲಿ ಬಲಗೈಗೆ ಸಂಬಂಧಿಸಿದ ೩೭ ಉಪಜಾತಿಗಳವರು ಉಪಜಾತಿ ಕಾಲಂನಲ್ಲಿ ಕಡ್ಡಾಯವಾಗಿ ಹೊಲೆಯ ಎಂದು ನಮೂದಿಸಬೇಕು ಎಂದು ಬಲಗೈ ಒಳ ಮೀಸಲಾತಿ ಜಿಲ್ಲಾ ಜಾಗೃತಿ ಸಮಿತಿಯ ಅಧ್ಯಕ್ಷ ಎಸ್.ಬಿ.ಮುನಿವೆಂಕಟಪ್ಪ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಯಲ್ಲಿರುವ ೧೦೧ ಜಾತಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ಪ್ರಮಾಣ ಹಂಚಿಕೆಗಾಗಿ ಸಮೀಕ್ಷೆ ನಡೆಸಲಾಗುತ್ತಿದೆ. ಸದಾಶಿವ ಆಯೋಗ ಹಾಗೂ ಜೆ.ಸಿ.ಮಾಧುಸ್ವಾಮಿ ಸಮಿತಿಯ ವರದಿಗಳಲ್ಲಿನ ನ್ಯೂನತೆಗಳನ್ನು ಸರಿಪಡಿಸಿ, ವೈಜ್ಞಾನಿಕವಾಗಿ ಮಾಹಿತಿ ಸಂಗ್ರಹಿಸಲು ಹೊಸದಾಗಿ ಸಮೀಕ್ಷೆ ನಡೆಸಲಾಗುತ್ತಿದೆ ಎಂದರು.ಹೊಲೆಯ ಎಂದು ನಮೂದಿಸಲು ಬಲಗೈ ಜನಾಂಗಕ್ಕೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಜಾಗೃತಿ ಸಮಿತಿಯು ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಭೇಟಿ ನೀಡಿ ಅರಿವು ಮೂಡಿಸಲು ಮುಂದಾಗಿದ್ದೇವೆ, ಏ.೨೮ ರಂದು ಮಾಲೂರು, ಶ್ರೀನಿವಾಸಪುರ ತಾಲೂಕಿಗೆ, ಏ.೨೯ ಕೆಜಿಎಫ್, ಬಂಗಾರಪೇಟೆ ಹಾಗೂ ಏ.೩೦ ರಂದು ಕೋಲಾರ, ಮುಳಬಾಗಲಿಗೆ ನಮ್ಮ ತಂಡವು ಭೇಟಿ ನೀಡಿ ಜಾಗೃತಿ ಮೂಡಿಸುತ್ತೇವೆ ಎಂದು ಮಾಹಿತಿ ನೀಡಿದರು.ಮಾಜಿ ಶಾಸಕ ಹಾಗೂ ಜಾಗೃತಿಯ ಪ್ರಧಾನ ಪೋಷಕ ಬಿ.ಪಿ.ವೆಂಕಟಮುನಿಯಪ್ಪ ಮಾತನಾಡಿ, ಜಿಲ್ಲೆಯಲ್ಲಿರುವ ಪರಿಶಿಷ್ಟ ಜಾತಿಗಳಲ್ಲಿ ಬಲಗೈನವರೇ ಹೆಚ್ಚಾಗಿದ್ದಾರೆ. ಸಮೀಕ್ಷೆಯಲ್ಲಿ ನಮ್ಮ ಸಂಖ್ಯೆ ನಿಖರವಾಗಿ ಗೊತ್ತಾಗಬೇಕಾದರೆ ಎಲ್ಲರೂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು ಎಂದರು.ಉಪ ಜಾತಿಗೆ ಸೇರಿದವರ ಸಂಖ್ಯೆಯಲ್ಲಿ ಏರುಪೇರಾದರೆ, ಸರ್ಕಾರದಿಂದ ಸಿಗುವ ರಾಜಕೀಯ ಪ್ರಾತಿನಿಧ್ಯ, ಶಿಕ್ಷಣ, ಉದ್ಯೋಗ ಸೇರಿದಂತೆ ಎಲ್ಲ ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ ಎಂದರು. ಪ್ರತಿ ಗ್ರಾಮದಲ್ಲಿಯೂ ಜಾಗೃತಿ ಮೂಡಿಸಲಾಗುವುದು. ಶಿಕ್ಷಕರು ಬಂದಾಗ ಮನೆಯಲ್ಲಿರದಿದ್ದರೆ, ಕಚೇರಿಗೆ ಹೋಗಿ ಮಾಹಿತಿ ನೀಡಬಹುದು. ಮೊಬೈಲ್ ಆ್ಯಪ್ ಮೂಲಕವೂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದು ಎಂದು ತಿಳಿಸಿದರು.

ಬಲಗೈ ಮುಖಂಡರಾದ ಟಿ.ವಿಜಯಕುಮಾರ್, ವಕ್ಕಲೇರಿ ರಾಜಪ್ಪ, ಸತೀಶ್ ರಾಜಣ್ಣ, ಬುಸನಹಳ್ಳಿ ಆಂಜನಪ್ಪ, ಹೂವಳ್ಳಿ ಪ್ರಕಾಶ್, ಪ್ರತಾಪ್, ಹನುಮಂತಪ್ಪ, ಗಾಂಧಿನಗರ ವೆಂಕಟೇಶ್, ಲಕ್ಕೂರು ನಾರಾಯಣಸ್ವಾಮಿ, ಯಲವಾರ ರವಿ, ಗೋವಿಂದರಾಜು, ರಮೇಶ್, ವಿ.ವೆಂಕಟಾಚಲಪತಿ ಇದ್ದರು.

ಪದಾಧಿಕಾರಿಗಳ ಆಯ್ಕೆಹೊಲೆಯ ಜಿಲ್ಲಾ ಜಾಗೃತಿ ಸಮಿತಿ ಅಧ್ಯಕ್ಷರಾಗಿ ಎಸ್.ಬಿ.ಮುನಿವೆಂಕಟಪ್ಪ, ಸಮಿತಿಯ ಮಹಾ ಪೋಷಕರಾಗಿ ಮಾಜಿ ಸಂಸದ ಎಸ್.ಮುನಿಸ್ವಾಮಿ, ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಮಾಜಿ ಶಾಸಕ ಬಿ.ಪಿ.ವೆಂಕಟಮನಿಯಪ್ಪ, ಮುಳಬಾಗಲು ಶಾಸಕ ಸಮೃದ್ಧಿ ಮಂಜುನಾಥ್, ಕೆಜಿಎಫ್ ಮಾಜಿ ಶಾಸಕ ವೈ.ಸಂಪಂಗಿರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಗಳಾಗಿ ಸತೀಶ್ ರಾಜಣ್ಣ, ಮಹೇಶ್.ಬಿ.ವಿ, ಆರ್.ಎನ್.ಹನುಮಂತಪ್ಪ, ವಕ್ಕಲೇರಿ ರಾಜಪ್ಪ, ಪ್ರತಾಪ್, ಚಂದ್ರಕಳಾ, ಉಪಾಧ್ಯಕ್ಷರಾಗಿ ಜಯದೇವ್, ಸುಂದರ್ ಸೀಗೇಹಳ್ಳಿ, ಹೂವಳ್ಳಿ ಪ್ರಕಾಶ್, ಮುನಿರಾಜು ಸಂಪಗೆರೆ, ಜೆ.ಶ್ರೀನಿವಾಸ್, ರವಿಕುಮಾರ್ ಯಲವಾರ, ರಮೇಶ್ ಮುಳಬಾಗಿಲು, ವೆಂಕಟೇಶ್ ಗಾಂಧಿನಗರ, ಸಿಂಗೊಂಡಹಳ್ಳಿ ಗೋವಿಂದರಾಜು, ನಾರಾಯಣಸ್ವಾಮಿ (ಅಪ್ಪಿ), ರಾಮಾಂಜನಮ್ಮ, ಡಿ.ಪಿ.ಎಸ್ ಮುನಿರಾಜು, ಸಂಘಟನಾ ಕಾರ್ಯದರ್ಶಿಗಳಾಗಿ ಅಗ್ರಿನಾರಾಯಣಸ್ವಾಮಿ, ಕಪಾಲಿ ಶಂಕರ್, ಜೆಡ್.ಪಿ.ಅರುಣ್ ಕುಮಾರ್, ರಾಧಾಕೃಷ್ಣ, ಕೂತಂಡಹಳ್ಳಿ ಸೋಮಶೇಖರ್, ಕೆ.ಜಿ.ಎಫ್ ಕೃಷ್ಣಮೂರ್ತಿ, ಕಾಳಹಸ್ತಿಪುರ ಅಂಬರೀಶ್, ತಿಮ್ಮಯ್ಯ, ಬಾಬಿ ಸುರೇಶ್, ಸಿದ್ದಾರ್ಥ್ ಆನಂದ, ಮಹೇಶ್, ಸುಬ್ರಮಣಿ, ಮಾರ್ಜೆನಹಳ್ಳಿ ನಾಗೇಂದ್ರ ಬಾಬು, ಕಾನೂನು ವಕ್ತಾರರಾಗಿ ಹೆಚ್.ವಿ.ಸುಬ್ರಮಣಿ, ವೆಂಕಟಾಚಲಪತಿ ಆಯ್ಕೆಯಾಗಿದ್ದಾರೆ.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌