ಜಾತಿಗಣತಿಯಲ್ಲಿ ಕಾಡುಗೊಲ್ಲ ಎಂದು ನಮೂದಿಸಿ: ಗೊಲ್ಲರಹಟ್ಟಿಯ ಎ.ಚಿತ್ತಪ್ಪ

KannadaprabhaNewsNetwork | Published : May 11, 2025 11:51 PM
Follow Us

ಸಾರಾಂಶ

ಸರ್ಕಾರದಿಂದ ನಡೆಯುತ್ತಿರುವ ಜಾತಿ ಗಣತಿಯಲ್ಲಿ ಕಾಡುಗೊಲ್ಲ ಸಮುದಾಯದವರು ಜಾತಿ ಕಾಲಂ ನಲ್ಲಿ ಕಾಡುಗೊಲ್ಲ ಎಂದು ನಮೂದಿಸಬೇಕೆಂದು ಕಾಡುಗೊಲ್ಲ ಸಂಘದ ತಾಲೂಕು ಅಧ್ಯಕ್ಷ ದುಮ್ಮಿ ಗೊಲ್ಲರಹಟ್ಟಿ ಗ್ರಾಮದ ಎ.ಚಿತ್ತಪ್ಪ ಮನವಿ ಮಾಡಿದರು.

ಸರ್ಕಾರದ ವಿವಿಧ ಯೋಜನೆ ಪಡೆಯಲು ಸಹಕಾರಿ

ಕನ್ನಡಪ್ರಭ ವಾರ್ತೆ ಹೊಳಲ್ಕೆರೆ

ಸರ್ಕಾರದಿಂದ ನಡೆಯುತ್ತಿರುವ ಜಾತಿ ಗಣತಿಯಲ್ಲಿ ಕಾಡುಗೊಲ್ಲ ಸಮುದಾಯದವರು ಜಾತಿ ಕಾಲಂ ನಲ್ಲಿ ಕಾಡುಗೊಲ್ಲ ಎಂದು ನಮೂದಿಸಬೇಕೆಂದು ಕಾಡುಗೊಲ್ಲ ಸಂಘದ ತಾಲೂಕು ಅಧ್ಯಕ್ಷ ದುಮ್ಮಿ ಗೊಲ್ಲರಹಟ್ಟಿ ಗ್ರಾಮದ ಎ.ಚಿತ್ತಪ್ಪ ಮನವಿ ಮಾಡಿದರು.

ಹೊಳಲ್ಕೆರೆ ಪಟ್ಟಣದಲ್ಲಿ ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಕಾಡುಗೊಲ್ಲರನ್ನು ಪತ್ಯೇಕ ಜಾತಿ ಎಂದು ಗುರುತಿಸಿ ಕಾಡುಗೊಲ್ಲ ಜಾತಿಪಟ್ಟಿ ನೀಡಲಾಗುತ್ತಿದೆ. ಅಲ್ಲದೆ ಸಮುದಾಯದ ಅಭಿವೃದ್ಧಿಗಾಗಿ ಕಾಡುಗೊಲ್ಲ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಗಿದೆ. ಜೊತೆಗೆ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಕಡತವನ್ನು ಶಿಫಾರಸು ಮಾಡಿದೆ. ಈ ನಿಟ್ಟಿನಲ್ಲಿ ಸಮುದಾಯದ ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆ, ವಸತಿ, ನೇರ ಸಾಲ, ವಿದ್ಯಾರ್ಥಿಗಳ ಪ್ರೋತ್ಸಾಹಧನ ಸೇರಿದಂತೆ ವಿವಿಧ ಯೋಜನೆಗಳನ್ನು ಪಡೆಯಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಅಲೆಮಾರಿ ಮತ್ತು ಅರೆ ಅಲೆಮಾರಿ ಯೋಜನೆಗಳಿಗೂ ಇದರಿಂದಾಗಿ ಸಹಯವಾಗಲಿದೆ. ಹಾಗಾಗಿ ಕಾಡುಗೊಲ್ಲ ಸಮುದಾಯದವರು ಜಾತಿ ಕಾಲಂನಲ್ಲಿ ಕಾಡುಗೊಲ್ಲ ಎಂದು ಬರೇಸಬೇಕು. ತಮ್ಮ ಮನೆಗಳಿಗೆ ಜಾತಿಗಣತಿ ಸರ್ವೆಗೆ ಬಂದಾಗ ಕಾಡುಗೊಲ್ಲರ ಹಟ್ಟಿಗಳಲ್ಲಿನ ಮುಖಂಡರು ವಿದ್ಯಾಭ್ಯಾಸ ಪಡೆದಂತಹವರು, ವಿದ್ಯಾರ್ಥಿಗಳು ಹಾಗೂ ಸಮುದಾಯದ ಯುವಕರು ಮುಂದೆ ನಿಂತು ಈ ಕೆಲಸವನ್ನು ಮಾಡಬೇಕೇಂದು ಮನವಿ ಮಾಡಿದರು.

ಗೌಡಿಹಳ್ಳಿ ಆನಂದಪ್ಪ, ಗೊಲ್ಲರಹಳ್ಳಿಯ ರಂಗಸ್ವಾಮಿ, ಅಗ್ರಹಾರ ಗ್ರಾಮದ ಬಸವರಾಜು, ತಿರುಮಲಾಪುರ ಗ್ರಾಮದ ಅಜ್ಜಪ್ಪ, ತಿಮ್ಮಪ್ಪ, ಲೋಕೇಶ್, ಆವಿನಹಟ್ಟಿ ಗ್ರಾಮದ ಮೋಹನ್ ನಾಗರಾಜ್, ರಂಗಸ್ವಾಮಿ, ರವಿಕುಮಾರ್, ಸುರೇಶ್, ಶಶಿಕುಮಾರ್, ಸಚ್ಚಿನ್, ನೀರನಾಗಪ್ಪ, ಹಳೇಹಳ್ಳಿ ಗೊಲ್ಲರಹಟ್ಟಿ ಲೋಕೇಶ್, ಅವಳಿಹಟ್ಟಿ ಗ್ರಾಮದ ಅವಳೇಶ್, ಗಂಗಸಮುದ್ರ ಗ್ರಾಮದ ದೇವೇಂದ್ರಪ್ಪ, ಅಮೃತಾಪುರ ಗ್ರಾಮದ ತಿಪ್ಪಣ್ಣ, ದಾಸರಹಳ್ಳಿ ಗ್ರಾಮದ ತಿಪ್ಪೇಸ್ವಾಮಿ ದುಮ್ಮಿ ರೇವಣ್ಣ, ವೀರನಾಗಪ್ಪ, ಚೌಡಗುಂಡನಹಳ್ಳಿ ಗ್ರಾಮದ ಚಂದ್ರಪ್ಪ, ಕರಲಗಲಹಳ್ಳಿ ನಾಗರಾಜ್, ಕಂಬದೇವರಹಟ್ಟಿ ಗ್ರಾಮದ ರಮೇಶ್, ರಾಮಗಿರಿ ಸಿದ್ದಪ್ಪ, ಗುಂಜಿಗನೂರು ಗ್ರಾಮದ ಉಮೇಶ್, ಉಲೇಮಳಲಿ ತಿಪ್ಪೇಸ್ವಾಮಿ, ಬಿದರಕೇರೆ ಗ್ರಾಮದ ದಾನವೇಂದ್ರ ದಾನೇಶ್, ಆವಿನಹಟ್ಟಿ ಬಂಗಾರಪ್ಪ, ಚಿತ್ರಹಳ್ಳಿ ಚಿತ್ರಲಿಂಗಪ್ಪ, ಗೊಲ್ಲರಹಳ್ಳಿ ವೀರನಾಗಪ್ಪ, ವಕೀಲರಾದ ನರಸಿಂಹಪ್ಪ, ಗುಂಡಿ ಮಡು ವೀರಭದ್ರಪ್ಪ, ಕೋಳಾಳು ನಿಜಲಿಂಗಪ್ಪ, ಸಮುದಾಯದ ಯುವಕರು ಇದ್ದರು.