ಧರ್ಮದ ಕಾಲಂನಲ್ಲಿ ‘ಲಿಂಗಾಯತ’ ಎಂದು ನಮೂದಿಸಿ: ಶ್ರೀಕಾಂತ ಸ್ವಾಮಿ

KannadaprabhaNewsNetwork |  
Published : Sep 20, 2025, 01:00 AM IST
ಚಿತ್ರ 19ಬಿಡಿಆರ್59 | Kannada Prabha

ಸಾರಾಂಶ

ಧರ್ಮದ ಕಾಲಂನಲ್ಲಿ ಹಿಂದೂ ಬದಲು ಲಿಂಗಾಯತ ಎಂದು ಬರೆಸುವಂತೆ ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕ ಶ್ರೀಕಾಂತ ಸ್ವಾಮಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೀದರ್

ಧರ್ಮದ ಕಾಲಂನಲ್ಲಿ ಹಿಂದೂ ಬದಲು ಲಿಂಗಾಯತ ಎಂದು ಬರೆಸುವಂತೆ ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕ ಶ್ರೀಕಾಂತ ಸ್ವಾಮಿ ತಿಳಿಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮದ ಕಾಲಂನಲ್ಲಿ 11ನೇ ಕಾಲಂನಲ್ಲಿರುವ ಇತರೆ ಧರ್ಮ ಎಂಬ ಕಾಲಂನಲ್ಲಿ ಲಿಂಗಾಯತ ಎಂದು ಬರೆಸಬೇಕು. ನಿಮ್ಮ ಮೂಲ ಕಸುಬಿರುವ ಲಿಂಗಾಯತರು ಜಾತಿ ಕಾಲಂನಲ್ಲಿ ತಮ್ಮ ತಮ್ಮ ಜಾತಿಯನ್ನು ಮತ್ತು ಉಪಜಾತಿಯನ್ನು ಬರೆಸಬೇಕೆಂದು ಕರೆ ನೀಡಿದರು.

1994ರಲ್ಲಿಯೇ ಲಿಂ.ಮಾತೆ ಮಹಾದೇವಿಯವರು ಆ ಸಂದರ್ಭದಲ್ಲಿಯೇ ಲಿಂಗಾಯತ ಧರ್ಮಕ್ಕೆ ಪ್ರಾಧಾನ್ಯತೆ ನೀಡಬೇಕೆಂದು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. 1999-2000ನೇ ಇಸವಿಯಲ್ಲಿ ಲಿಂಗಾಯತ ಧರ್ಮದ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ದೊಡ್ಡ ಪ್ರಮಾಣದ ಹೋರಾಟ ಸಹ ಮಾಡಿ ದ್ದೆವು. ನಂತರ 2017ರಲ್ಲಿ ಮಾತಾಜಿಯವರ ನೇತೃತ್ವದಲ್ಲಿಯೇ ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಬೃಹತ್ ಹೋರಾಟ ಬೀದರ್‌ನಲ್ಲಿ ಜರುಗಿತ್ತು. ಪ್ರಸ್ತುತದಲ್ಲಿ ರಾಜ್ಯದಲ್ಲಿ ಎರಡು ಕೋಟಿಗೂ ಅಧಿಕ ಲಿಂಗಾಯತ ಸಮುದಾಯವಿದ್ದರೂ ಕಾಂತರಾಜು ವರದಿಯಲ್ಲಿ ಕೇವಲ 60 ರಿಂದ 75 ಲಕ್ಷ ಮಾತ್ರ ಲಿಂಗಾಯತರಿದ್ದಾರೆ ಎಂದು ಗುರುತಿಸಲಾಗಿದೆ. ನಮ್ಮಲ್ಲಿನ ಭಿನ್ನಾಭಿಪ್ರಾಯಗಳಿಂದ ಹಾಗೂ ಅರಿವಿನ ಕೊರತೆಯಿಂದ ಬೇರೆ ಬೇರೆ ರೀತಿಯಲ್ಲಿ ಬರೆಸಿದ್ದರಿಂದ ಸಮುದಾಯದ ಜನಸಂಖ್ಯೆ ಕ್ಷೀಣಿಸಿದೆ ಎಂದರು.

ಲಿಂಗಾಯತ ಧರ್ಮದ ಅಸ್ಮಿತೆ ಮತ್ತು ಅಸ್ತಿತ್ವ ಕಾಪಾಡಿಕೊಂಡು ಅದನ್ನು ಉಳಿಸಿ ಬೆಳೆಸೋಣ, ಭವಿಷ್ಯದಲ್ಲಿ ಲಿಂಗಾಯತ ಧರ್ಮದ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ ಎಂದರು.

ಇದೇ ವೇಳೆ ಬಸವ ಮಂಟಪದ ಸದ್ಗುರು ಮಾತೆ ಸತ್ಯಾದೇವಿ, ಪ್ರಮುಖರಾದ ಶಿವರಾಜ ಪಾಟೀಲ ಅತಿವಾಳ, ಬಸವಂತರಾವ ಬಿರಾದಾರ, ರವಿಕಾಂತ ಬಿರಾದಾರ, ಮಲ್ಲಿಕಾರ್ಜುನ ಬುಕ್ಕಾ, ವಿಶ್ವನಾಥ ಪಾಟೀಲ ಗೊಂದೆಗಾಂವ, ಓಂಪ್ರಕಾಶ ರೊಟ್ಟೆ, ಸತೀಶ ಪಾಟೀಲ ಹಾಗೂ ಇತರರು ಇದ್ದರು.

ಅ.11,12ರಂದು ಸ್ವಾಭಿಮಾನ ಕಲ್ಯಾಣ ಪರ್ವ

ಅ.11 ಮತ್ತು 12ರಂದು ಎರಡು ದಿವಸಗಳ ಕಾಲ ಬಸವಕಲ್ಯಾಣದ ಸಸ್ತಾಪುರ ಬಂಗ್ಲಾ ಹತ್ತಿರದ ಬಸವೇಶ್ವರ ಕಮಾನ್ ಹತ್ತಿರ ಇರುವ ಎಂ.ಎಂ.ಬೇಗ್ ಕಲ್ಯಾಣ ಮಂಟಪದಲ್ಲಿ 4ನೇ ಸ್ವಾಭಿಮಾನಿ ಕಲ್ಯಾಣ ಪರ್ವ ಹಮ್ಮಿಕೊಳ್ಳಲಾಗಿದ್ದು, ದೇಶದ ವಿವಿಧ ಕಡೆಗಳಿಂದ ಸುಮಾರು 25 ಸಾವಿರ ಸಾವಿರಕ್ಕೂ ಅಧಿಕ ಬಸವ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಸ್ವಾಭಿಮಾನಿ ಕಲ್ಯಾಣ ಪರ್ವ ಉತ್ಸವ ಸಮಿತಿಯ ಅಧ್ಯಕ್ಷರು ಪೂಜ್ಯ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು. ಅ. 11 ರಂದು ಬೆ. 11 ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದ್ದು, ಅಂದು ಬೆಳಿಗ್ಗೆ 5 ಗಂಟೆಗೆ ಸುಪ್ರಭಾತ ಸಮಯದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ, ಬಸವ ಚಿಂತನ ಪ್ರಭೆಯ ಮೂಲಕ ವೇದಿಕೆಯ ಕಾರ್ಯಕ್ರಮ ನಡೆಯಲಿದೆ ಎಂದರು.

PREV

Recommended Stories

ಶಿವಯೋಗಿ ಸೊಸೈಟಿಗೆ 20.97 ಲಕ್ಷ ಲಾಭ
ಯುವಜನತೆಗೆ ರಕ್ತದಾನದ ಮಹತ್ವ ತಿಳಿಸಿಕೊಡಿ