ಕನ್ನಡಪ್ರಭ ವಾರ್ತೆ ಕೋಲಾರ‘ಸಮುದಾಯದ ಕೆಲವರಿಗೆ ಒಳ ಮೀಸಲಾತಿ ಬೇಕು, ಸೌಲಭ್ಯ ಬೇಕು. ಆದರೆ ಜಾತಿ ಹೆಸರು ಹೇಳಲು ಆಗಲ್ಲ. ಉಪಜಾತಿಗಳ ಗಣತಿಗೆ ಬಂದಾಗ ಮಾದಿಗ ಎಂದು ಜಾತಿ ನಮೂದಿಸಬೇಕು. ಇದು ಎರಡು ತಿಂಗಳು ನಡೆಯಲಿದ್ದು, ಅಂತಿಮ ಘಟ್ಟವಾಗಿದೆ ಎಂದು ಮಾಜಿ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.ನಗರದ ಹಾರೋಹಳ್ಳಿಯಲ್ಲಿ ನಡೆದ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿ, ‘ಕೋಲಾರದಲ್ಲಿ ಮಾದಿಗರ ಸಂಖ್ಯೆ ಹೆಚ್ಚಿದೆ. ನಮ್ಮ ಮಕ್ಕಳಿಗೆ ಸೌಲಭ್ಯ, ಅವಕಾಶ ಸಿಗಲು ನಾವು ಹೋರಾಟ ನಡೆಸಬೇಕು. ಜಾತಿಗಣತಿ ವರದಿಯಲ್ಲಿ ಮಾದಿಗರ ಜನಸಂಖ್ಯೆ ಕೇವಲ೧೯ ಲಕ್ಷ ಎಂದಿದೆ. ಈ ಬಗ್ಗೆ ಸಮುದಾಯದ ಮುಖಂಡರಿಗೆ ಮಾತನಾಡಲು ಧೈರ್ಯವಿಲ್ಲದಾಗಿದೆ ಎಂದರು.ಮಾದಿಗ ಎಂದೇ ನಮೂದಿಸಿ
ರಾಜ್ಯದ ೧೫ ಜಿಲ್ಲೆಗಳಲ್ಲಿ ಈ ರೀತಿಯ ಗೊಂದಲಗಳು ಇರುವುದರಿಂದಾಗಿ ಮುಂದಿನ ಎರಡು ತಿಂಗಳು ಸಂಬಂಧಿಸಿದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮಾಡುವ ಮೂಲಕ ಮಾದಿಗ ಎಂದೇ ಬರೆಸಲು ಜನಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತದೆ. ಯಾವುದೇ ಕಾರಣಕ್ಕೂ ಉಪಜಾತಿಗಳನ್ನು ಬರೆಸಬಾರದು. ಮಕ್ಕಳನ್ನು ವಿದ್ಯಾವಂತರನ್ನಾಗಿಸಿ ಮೀಸಲಾತಿ ಸೌಲಭ್ಯವನ್ನು ಕೊಡಿಸಿ ಉತ್ತಮ ಭವಿಷ್ಯ ಕಲ್ಪಿಸಬೇಕು ಎಂದು ಶ್ರೀಗಳು ತಿಳಿಸಿದರು.
ಮಾದಿಗ ಒಳಮೀಸಲಾತಿ ಹೋರಾಟಗಾರ ಎಂ.ಶಂಕರಪ್ಪ, ಮಾದಿಗ ದಂಡೋರದ ಸಾಹುಕಾರ್ ಶಂಕರಪ್ಪ,ಹಾರೋಹಳ್ಳಿ ವಕೀಲ ಎಚ್.ವೆಂಕಟೇಶ್, ವೇಣು,ಸುರೇಶ್, ಮಾರ್ಕೋಂಡಪ್ಪ, ಕೆ.ನಾರಾಯಣಪ್ಪ, ಮುನಿವೆಂಕಟಪ್ಪ, ಮುನಿಯಪ್ಪಗುರುಸ್ವಾಮಿ, ರವಿಕುಮಾರ್, ಶ್ರೀನಿವಾಸ್, ಸಿಂಗರ್ ಶ್ರೀನಿವಾಸ್, ಮಂಜುನಾಥ್, ಎನ್.ದೇವರಾಜ್, ರಾಜಪ್ಪ ಮತ್ತಿತರರು ಇದ್ದರು.