ಯುವಕರು, ಮಹಿಳೆಯರಲ್ಲಿ ಮತದಾನ ಹಬ್ಬದ ಉತ್ಸಾಹ

KannadaprabhaNewsNetwork |  
Published : Apr 27, 2024, 01:01 AM IST
ಪೋಟೋ೨೬ಸಿಎಲ್‌ಕೆ೧ಎ ಚಳ್ಳಕೆರೆ ನಗರದ ಪಿಎಲ್‌ಡಿ ಬ್ಯಾಂಕ್‌ನ ಮತಗಟ್ಟೆ ಸಂಖ್ಯೆ ೧೨೨ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಪತ್ನಿ ಹರ್ಷಿಣಿಯೊಂದಿಗೆ ಮತದಾನ ಮಾಡಿದರು.  | Kannada Prabha

ಸಾರಾಂಶ

ಚಿತ್ರದುರ್ಗ ಲೋಕಸಭಾ ಚುನಾವಣೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಶುಕ್ರವಾರ ನಡೆದ ಮತದಾನ ಪ್ರಾರಂಭದಲ್ಲೇ ಚುರುಕುಗೊಂಡಿದ್ದು, ಮಧ್ಯಾಹ್ನ ಸಮಯದಲ್ಲಿ ಹೆಚ್ಚಿನ ಮತದಾರರು ಬಾರದೆ ಮಂದಗತಿಯಲ್ಲಿ ಸಾಗಿದ ಮತದಾನ ಸಂಜೆ ೪ ಗಂಟೆ ವೇಳೆಗೆ ಚುರುಕುಗೊಂಡಿತು.

ಚಳ್ಳಕೆರೆ: ಚಿತ್ರದುರ್ಗ ಲೋಕಸಭಾ ಚುನಾವಣೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಶುಕ್ರವಾರ ನಡೆದ ಮತದಾನ ಪ್ರಾರಂಭದಲ್ಲೇ ಚುರುಕುಗೊಂಡಿದ್ದು, ಮಧ್ಯಾಹ್ನ ಸಮಯದಲ್ಲಿ ಹೆಚ್ಚಿನ ಮತದಾರರು ಬಾರದೆ ಮಂದಗತಿಯಲ್ಲಿ ಸಾಗಿದ ಮತದಾನ ಸಂಜೆ ೪ ಗಂಟೆ ವೇಳೆಗೆ ಚುರುಕುಗೊಂಡಿತು.

ಚಳ್ಳಕೆರೆ ವಿಧಾನಸಭಾ ವ್ಯಾಪ್ತಿಯ ೨೬೦ ಮತಗಟ್ಟೆಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಯಿತು. ಗ್ರಾಮೀಣ ಭಾಗದಲ್ಲೂ ಸಹ ಮತದಾರರು ಮಧ್ಯಾಹ್ನ ಬಿಸಿಲಿಗೆ ಹೆದರಿ ಬೆಳಗ್ಗೆಯೇ ಮತಗಟ್ಟೆಗಳತ್ತ ಹೆಜ್ಜೆ ಹಾಕಿದರು. ವಿಶೇಷವಾಗಿ ಮಹಿಳೆಯರು, ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಲ್ಲಿ ಕಂಡುಬಂದರು. ಮೊದಲ ಬಾರಿಗೆ ಮತದಾನ ಮಾಡುವ ಅವಕಾಶ ಪಡೆದಿದ್ದ ಕೆಲ ಯುವಕರು ಮತದಾನ ಮಾಡಿದ ನಂತರ ಗೆಳೆಯರೊಂದಿಗೆ ತಮ್ಮ ಸಂತಸ ಹಂಚಿಕೊಂಡರು.

ನಗರದ ಚಿತ್ರದುರ್ಗ ರಸ್ತೆಯ ಬಿಇಒ ಕಚೇರಿ ಆವರಣದಲ್ಲಿರುವ ಸರ್ಕಾರಿ ಮಾದರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ ೮೯ ಸಖಿ ಬೂರ್‌ ಆಗಿದ್ದು, ಚುನಾವಣೆಗೆ ನಿಯುಕ್ತಿಗೊಂಡ ಎಲ್ಲಾ ಮಹಿಳಾ ಸಿಬ್ಬಂದಿ ಪಿಂಕ್ ಸೀರೆಯಲ್ಲಿ ಕಂಡುಬಂದರು. ಹೆಚ್ಚಿನ ಸಂಖ್ಯೆ ಮಹಿಳೆಯರು ಬೆಳಗ್ಗಿನ ಸಮಯದಲ್ಲೇ ಸಾಲಿನಲ್ಲಿ ನಿಂತು ಮತಚಲಾಯಿಸಿದರು.

ಗಾಂಧಿ ನಗರದ ಮತಗಟ್ಟೆ ಸಂಖ್ಯೆ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಜನತಾ ಕಾಲೋನಿಯಲ್ಲಿ ಹೆಚ್ಚಿನ ಸಂಖ್ಯೆ ಮತದಾರರು ಕಂಡುಬಂದರು. ಮತ ಚಲಾಯಿಸಲು ಬಂದ ವೃದ್ಧೆಗೆ ಮಗಳು ಸಹಕರಿಸಿ ಮತದಾನ ಮಾಡಿಸಿದರು.

ನಗರದ ಹಳೇಟೌನ್‌ನ ಮತಗಟ್ಟೆ ಸಂಖ್ಯೆ ೧೧೮ರಲ್ಲಿ ೭೪೧ ಮತದಾರರಿದ್ದು, ಈ ವೇಳೆ ಮತಯಂತ್ರ ಕೈಕೊಟ್ಟಿದ್ದು, ಸುಮಾರು ೨೦ ನಿಮಿಷಗಳ ಕಾಲ ಮತದಾರರು ಹಕ್ಕು ಚಲಾಯಿಸಲು ಕಾದುಕುಳಿತರು ಸಂಬಂಧಪಟ್ಟ ತಾಂತ್ರಿಕಾಧಿಕಾರಿ ಆಗಮಿಸಿ ಮತಯಂತ್ರವನ್ನು ಬದಲಿಸಿದ ನಂತರ ಮತದಾನ ಸೂಸುತ್ರವಾಗಿ ನಡೆಯಿತು.

ಜಿಲ್ಲಾ ಉಸ್ತುವಾರಿ ಸಚಿವ, ಹಿರಿಯೂರು ಕ್ಷೇತ್ರದ ಶಾಸಕ ಡಿ.ಸುಧಾಕರ ನಗರದ ಮತಗಟ್ಟೆ ಸಂಖ್ಯೆ ೧೨೨ರಲ್ಲಿ ಪತ್ನಿ ಹರ್ಷಿಣಿಸುಧಾಕರ ಜೊತೆಗೆ ಆಗಮಿಸಿ ಮತದಾನ ಮಾಡಿದರು. ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಕಡುಬನಕಟ್ಟೆಯ ಮತಗಟ್ಟೆ ಸಂಖ್ಯೆ-೪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ ಒಂದರಲ್ಲಿ ಪತ್ನಿ ಗಾಯಿತ್ರಮ್ಮನೊಂದಿಗೆ ಆಗಮಿಸಿ ಮತ ಚಲಾಯಿಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ