ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಪುರಪ್ರವೇಶ

KannadaprabhaNewsNetwork |  
Published : Jul 10, 2025, 12:49 AM IST
ಕ್ಯಾಪ್ಷನ9ಕೆಡಿವಿಜಿ44 ದಾವಣಗೆರೆಗೆ ಇಂದು ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮಿಗಳ ಪುರಪ್ರವೇಶ ಮಾಡಿದ ಹಿನ್ನಲೆಯಲ್ಲಿ ಆರ್ಯವೈಶ್ಯ ಸಮಾಜ ಬಾಂಧವರು ಬೈಕ್ ರ‍್ಯಾಲಿ ಮೂಲಕ ಸ್ವಾಗತ ಕೋರಿದರು...........ಕ್ಯಾಪ್ಷನ9ಕೆಡಿವಿಜಿ45 ದಾವಣಗೆರೆಗೆ ಇಂದು ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮಿಗಳ ಪುರಪ್ರವೇಶ ಮಾಡಿದ ಹಿನ್ನಲೆಯಲ್ಲಿ ಆರ್ಯವೈಶ್ಯ ಸಮಾಜ ಬಾಂಧವರು ಬೈಕ್ ರ‍್ಯಾಲಿ ನಡೆಸಿದರು........ಕ್ಯಾಪ್ಷನ9ಕೆಡಿವಿಜಿ46 ದಾವಣಗೆರೆಯಲ್ಲಿನ ಆವರಗೆರೆ ಗೋಶಾಲೆಗೆ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮಿಗಳು ಭೇಟಿ ನೀಡಿ ಗೋಮಾತೆಗೆ ಪೂಜೆ ಸಲ್ಲಿಸಿದರು. ಆರ್.ಎಲ್.ಪ್ರಭಾಕರ್, ಆರ್.ಜಿ. ನಾಗೇಂದ್ರ ಪ್ರಕಾಶ್ ಇತರರು ಇದ್ದರು. | Kannada Prabha

ಸಾರಾಂಶ

ವಿಶ್ವ ವಾಸವಿ ಜಗದ್ಗುರು ಮಹಾಸಂಸ್ಥಾನ, ಶ್ರೀ ವಾಸವಿ ಪೀಠಂನ ಪೀಠಾಧಿಪತಿ ಶ್ರೀ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿ ಅವರ 4ನೇ ಪೀಠಾರೋಹಣ ಕಾರ್ಯಕ್ರಮ ಅಂಗವಾಗಿ ದಾವಣಗೆರೆ ಜಿಲ್ಲಾ ಆರ್ಯವೈಶ್ಯ ಬಂಧುಗಳು ಜು.10ರಂದು 'ಭಕ್ತಿ ಸಿಂಚನ' ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಪ್ರಯುಕ್ತ ಬುಧವಾರ ದಾವಣಗೆರೆಗೆ ಆಗಮಿಸಿದ ಸಮಾಜದ ಗುರುಗಳಾದ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅವರನ್ನು ಮುಖಂಡರು, ಸಮಾಜ ಬಾಂಧವರು ಬೈಕ್ ರ‍್ಯಾಲಿ ಮೂಲಕ ಭಕ್ತಿಯಿಂದ ಸ್ವಾಗತಿಸಿದ್ದಾರೆ.

- ಆರ್ಯವೈಶ್ಯ ಸಮಾಜ ಬಾಂಧವರಿಂದ ಬೈಕ್ ರ‍್ಯಾಲಿ ಮೂಲಕ ಸ್ವಾಗತ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ವಿಶ್ವ ವಾಸವಿ ಜಗದ್ಗುರು ಮಹಾಸಂಸ್ಥಾನ, ಶ್ರೀ ವಾಸವಿ ಪೀಠಂನ ಪೀಠಾಧಿಪತಿ ಶ್ರೀ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿ ಅವರ 4ನೇ ಪೀಠಾರೋಹಣ ಕಾರ್ಯಕ್ರಮ ಅಂಗವಾಗಿ ದಾವಣಗೆರೆ ಜಿಲ್ಲಾ ಆರ್ಯವೈಶ್ಯ ಬಂಧುಗಳು ಜು.10ರಂದು ''''''''ಭಕ್ತಿ ಸಿಂಚನ'''' ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಪ್ರಯುಕ್ತ ಬುಧವಾರ ದಾವಣಗೆರೆಗೆ ಆಗಮಿಸಿದ ಸಮಾಜದ ಗುರುಗಳಾದ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅವರನ್ನು ಮುಖಂಡರು, ಸಮಾಜ ಬಾಂಧವರು ಬೈಕ್ ರ‍್ಯಾಲಿ ಮೂಲಕ ಭಕ್ತಿಯಿಂದ ಸ್ವಾಗತಿಸಿದರು.

ಸ್ವಾಮೀಜಿ ಅವರನ್ನು ಬಾಡಾ ಕ್ರಾಸ್ ಬಳಿ ಮಹಿಳೆಯರು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು. ಅನಂತರ ಬೈಕ್‌ ರ‍್ಯಾಲಿ ಮೂಲಕ ಅವರಗೆರೆಯ ಗೋಶಾಲೆ ತಲುಪಿದ ಬಳಿಕ ಶ್ರೀಗಳು ಗೋಮಾತೆಗೆ ವಸ್ತ್ರ ಸಮರ್ಪಿಸಿ, ಗೋಪೂಜೆ ನೆರವೇರಿಸಿದರು. ಗೋವುಗಳಿಗೆ ಗೋಗ್ರಾಸ ನೀಡಲಾಯಿತು. ಗೋಶಾಲೆ ಆವರಣದಲ್ಲಿ ಶ್ರೀಗಳಿಗೆ ಪಾದಪೂಜೆ ನೆರವೇರಿಸಲಾಯಿತು.

ಸುಮಾರು 250ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಹಾಗೂ 20ಕ್ಕೂ ಹೆಚ್ಚು ಕಾರುಗಳು ಪಾಲ್ಗೊಂಡಿದ್ದ ರ‍್ಯಾಲಿ ಅವರಗೆರೆಯಿಂದ ಪಿ.ಬಿ. ರಸ್ತೆ ಮೂಲಕ ಸಾಗಿ ಶ್ರೀಗಳು ತಂಗುವ ಆರ್.ಜಿ. ಶ್ರೀನಿವಾಸಮೂರ್ತಿ ನಿವಾಸದ ಬಳಿ ಮುಕ್ತಾಯವಾಯಿತು. ಆರ್ಯವೈಶ್ಯ ಕುಲದೇವತೆ ಶ್ರೀ ಕನ್ಯಕಾಪರಮೇಶ್ವರಿ ಮಾತೆಯನ್ನು ಸ್ತುತಿಸಲಾಯಿತು.

ಈ ಸಂದರ್ಭ ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಜಿಲ್ಲಾ ಸಮಿತಿ ಹಾಗೂ ಭಕ್ತಿ ಸಿಂಚನ ಸಮಿತಿಯ ಅಧ್ಯಕ್ಷ ಆರ್.ಎಲ್. ಪ್ರಭಾಕರ್, ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್.ಜಿ. ನಾಗೇಂದ್ರ ಪ್ರಕಾಶ್, ಕಾರ್ಯದರ್ಶಿ ಎಂ. ನಾಗರಾಜ ಗುಪ್ತ, ಆರ್ಯವೈಶ್ಯ ಮುಖಂಡರಾದ ಎಸ್.ಟಿ. ಕುಸುಮ ಶ್ರೇಷ್ಠಿ, ಡಾ. ಬಿ.ಎಸ್.ನಾಗಪ್ರಕಾಶ್, ಕೆ.ಎಸ್. ರುದ್ರಶ್ರೇಷ್ಠಿ, ಆರ್.ಜಿ. ಶ್ರೀನಿವಾಸಮೂರ್ತಿ, ಕೆ.ಎನ್. ಅನಂತರಾಮ ಶೆಟ್ಟಿ, ಎಚ್.ಟಿ. ಶ್ರೀನಿವಾಸ್, ಬಿ.ಎಚ್.ಅಶೋಕ್, ಎಸ್.ಸುನೀಲ್, ಟಿ.ಎಸ್. ಕಿರಣ್ ಕುಮಾರ್, ಕೆ.ಎಸ್.ದರ್ಶನ್, ಜೆ.ರವೀಂದ್ರ ಗುಪ್ತ, ಎಚ್.ವೆಂಕಟೇಶ್, ಡಿ.ಎಚ್. ಅಂಬಿಕಾಪತಿ ಶೆಟ್ಟಿ, ಸಾಯಿಪ್ರಸಾದ್, ಬದರಿನಾಥ್, ಟಿ.ಸುರೇಶ್ ಉಪಸಮಿತಿಗಳ ಚೇರ್ಮನ್ನರು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.

- - -

-9ಕೆಡಿವಿಜಿ44, 45:

ದಾವಣಗೆರೆಗೆ ಬುಧವಾರ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮಿಗಳ ಪುರಪ್ರವೇಶ ಮಾಡಿದ ಹಿನ್ನೆಲೆ ಆರ್ಯವೈಶ್ಯ ಸಮಾಜ ಬಾಂಧವರು ಬೈಕ್ ರ‍್ಯಾಲಿ ಮೂಲಕ ಸ್ವಾಗತ ಕೋರಿದರು.

-9ಕೆಡಿವಿಜಿ46: ದಾವಣಗೆರೆಯ ಆವರಗೆರೆ ಗೋಶಾಲೆಗೆ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮಿಗಳು ಭೇಟಿ ನೀಡಿ, ಗೋಮಾತೆಗೆ ಪೂಜೆ ಸಲ್ಲಿಸಿದರು. ಆರ್.ಎಲ್.ಪ್ರಭಾಕರ್, ಆರ್.ಜಿ. ನಾಗೇಂದ್ರ ಪ್ರಕಾಶ್ ಇತರರು ಇದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ