ಕನ್ನಡಪ್ರಭ ವಾರ್ತೆ ಕಲಬುರಗಿ
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವವಿದ್ಯಾಲಯ ಸ್ವಾಯತ್ತವಾದ ಸಂಸ್ಥೆಯಾಗಿದ್ದು ರಾಜಕೀಯ ಹಸ್ತಕ್ಷೇಪ ರಹಿತವಾಗಿ ಕೆಲಸ ಮಾಡಬೇಕು. ಹೊರಗಿನ ವ್ಯಕ್ತಿಗಳು, ಸಂಘಟನೆಗಳು ಮಧ್ಯ ಪ್ರವೇಶ ಮಾಡಿದರೆ ಭಯದ ವಾತಾವರಣ ಉಂಟು ಮಾಡುತ್ತದೆ ಎಂದರು.
ಇದಕ್ಕೆ ನಿದರ್ಶನವಾಗಿ ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕೆಲವು ದಿನಗಳ ಹಿಂದೆ ಖಾಸಗಿ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ ಸಚಿವರಾದ ಪ್ರಿಯಾಂಕ ಖರ್ಗೆಯವರು ವಿಶ್ವವಿದ್ಯಾಲಯದ ಕುಲಪತಿಗಳು, ಕುಲ ಸಚಿವರು ಹಾಗೂ ಎಬಿವಿಪಿ ಕಾರ್ಯಕರ್ತರ ವಿರುದ್ಧ ನೀವು ಪ್ರಕರಣ ದಾಖಲಿಸಿ ನಾನು ನಿಮ್ಮ ಹಿಂದೆ ಇರುತ್ತೇನೆ ಎಂದು ಪೊಲೀಸರಿಗೆ ಹೇಳಿರುವ ಮಾತುಗಳು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ. ಇದನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತೀವ್ರವಾಗಿ ಖಂಡಿಸುತ್ತದೆ ಎಂದು ಸಚೀನ್ ಹೇಳಿದ್ದಾರೆ.ಹೊರಗಿನ ವ್ಯಕ್ತಿಗಳ / ಸಂಘಟನೆಗಳ ಒತ್ತಾಯಕ್ಕೆ ಮಣಿದು ಎಬಿವಿಪಿ ಕಾರ್ಯಕ್ರಮಗಳಿಗೆ ತಡೆ ಹಾಕುವುದು, ಬೆದರಿಸುವುದು ಇದಕ್ಕೆ ಪೊಲೀಸ್ ಇಲಾಖೆಯು ಸಹಿತ ಕೈಜೋಡಿಸುತ್ತಿರುವುದು ಅವರ ಬೆಂಬಲಕ್ಕೆ ನಿಂತಿರುವುದು ಕಂಡು ಬರುತ್ತಿದೆ. ಈ ರೀತಿಯ ವ್ಯವಸ್ಥೆಯನ್ನ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ನಿರ್ಮಾಣ ಮಾಡುತ್ತಿರುವುದು ಖಂಡನಿಯ ಸಂಗತಿ.
ಸುದ್ದಿಗೋಷ್ಠಿಯಲ್ಲಿ ಎಂಎಲ್‌ಸಿ ಶಶಿಲ್ ನಮೋಶಿ ಎಬಿವಿಪಿಯ ರಾಜ್ಯ ಸಹ ಸಂಘಟನಾ ಕಾರ್ಯದರ್ಶಿ ಗಂಗಾಧರ್ ಪಿಡಿಎ ಎಂಜಿನಿಯರಿಂಗ್ ಕಾಲೇಜ್ ಪ್ರಾಂಶುಪಾಲರಾದ ಜಿಬಿ ಮಿಸ್ಸೆ, ಜಿಲ್ಲಾ ಪ್ರಮುಖರಾದ ಪ್ರಮೋದ್ ನಾಗರ್ ಕರ್, ಹನುಮಂತ ಬಗಲಿ ಶಾಂತಕುಮಾರ್, ಕೇಂದ್ರೀಯ ಕಾರ್ಯಸಮಿತಿ ಸದಸ್ಯ ನರೆಂದ್ರಕುಮಾರ, ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ಹಣಮಂತ ಬಗಲಿ, ನಾಗಶ್ರೀ ಇದ್ದರು.