ಗಿಡ ನೆಟ್ಟು ಪರಿಸರ ಪ್ರೇಮ ಮೆರೆದ ವಿದ್ಯಾರ್ಥಿ, ಶಿಕ್ಷಕರು । ವಿವಿಧೆಡೆ ಪರಿಸರ ಸಂರಕ್ಷಣೆ ಜಾಗೃತಿ ಅಭಿಯಾನ
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶುಕ್ರವಾರ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಸರ್ಕಾರಿ, ಖಾಸಗಿ ಶಾಲಾ ಕಾಲೇಜು, ಸರ್ಕಾರಿ ಕಚೇರಿ, ಸಂಘ ಸಂಸ್ಥೆಗಳ ಕಚೇರಿ ಆವರಣದಲ್ಲಿ ಗಿಡ ನೆಟ್ಟು ಪರಿಸರ ಪ್ರೇಮ ಮೆರೆಯುವುದರೊಂದಿಗೆ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಅಭಿಯಾನಗಳನ್ನು ನಡೆಸಲಾಯಿತು.
ಶಾಲಾ ಕಾಲೇಜುಗಳಲ್ಲಿ ಮಕ್ಕಳು, ಶಿಕ್ಷಕರು ಸೇರಿ ಗಿಡ ನೆಟ್ಟು ನೀರುಣಿಸಿ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದು ವಿಶೇಷ ವಾಗಿತ್ತು. ಜಿಲ್ಲೆಯ ಪ್ರತಿ ಗ್ರಾಪಂ ಆವರಣದಲ್ಲಿ ಅಧಿಕಾರಿ ಸಿಬ್ಬಂದಿ ಗ್ರಾಪಂ ಆವರಣದಲ್ಲಿ ಗಿಡನೆಟ್ಟರು.ಪರಿಸರ ಜಾಗೃತಿ ಜಾಥಕ್ಕೆ ಚಾಲನೆ
ಈ ವೇಳೆ ಮಾತನಾಡಿದ ಶಾಸಕ ಎಚ್.ಡಿ.ತಮ್ಮಯ್ಯ, ಮನುಷ್ಯನ ದುರಾಸೆಯಿಂದ ಪ್ರಕೃತಿ ನಾಶವಾಗುತ್ತಿದೆ. ಕಾಂಕ್ರಿಟ್ ಮನೆಗಳ ನಿರ್ಮಾಣ ಮಾಡುತ್ತಿದ್ದರೆ ಪರಿಸರ ಉಳಿಸುವುದು ಹೇಗೆ, ಪ್ರಕೃತಿಯೇ ನಮ್ಮ ದೇವರು, ಹಾಗಾಗಿ ಪರಿಸರ ಉಳಿಸಿ ಬೆಳೆಸಬೇಕು. ಪ್ರಕೃತಿಯಿಂದ ಅಗತ್ಯದಷ್ಟು ಮಾತ್ರ ನಾವು ಪಡೆಯಬೇಕು ಎಂದರು.ಮಾನವನ ಜೀವನಕ್ಕೆ ಅತಿ ಅವಶ್ಯಕವಾದ ಆಮ್ಲಜನಕ ನೀಡುವುದೇ ಪರಿಸರ. ಆದರೆ, ಅರಣ್ಯ ನಾಶ, ವಾಯು ಮಾಲಿನ್ಯ, ಅತಿ ಹೆಚ್ಚು ಪ್ಲಾಸ್ಟಿಕ್ ಬಳಕೆ, ಮಣ್ಣಿನ ಸವಕಳಿ, ಇಂತಹ ಹಲವು ಸಮಸ್ಯೆಗಳನ್ನು ನಾವುಗಳು ಎದುರಿಸುತ್ತಿದ್ದೇವೆ ಎಂದು ಹೇಳಿದರು.ಪ್ರಕೃತಿ ಮೇಲೆ ಹೆಚ್ಚು ಒತ್ತಡ ಬೀಳುತ್ತಿದೆ. ಹಾಗಾಗಿ ಮಳೆಗಾಲ, ಬೇಸಿಗೆ ಹಾಗೂ ಚಳಿಗಾಲದಲ್ಲೂ ಕೂಡ ಬದಲಾವಣೆ ಆಗಿದೆ. ಪ್ರಕೃತಿಯ ಏರುಪೇರು ಕಾಣುತ್ತಿದ್ದೇವೆ. ನಮ್ಮ ಪೂರ್ವಜರು ಪರಿಸರ ಪ್ರಕೃತಿ ದೇವರೆಂದು ಪೂಜೆ ಮಾಡುತ್ತಿದ್ದರು. ಅದನ್ನು ಉಳಿಸುವ ಕೆಲಸ ನಮ್ಮದಾಗಬೇಕು ಎಂದರು.ಪ್ರಪಂಚದಲ್ಲಿ ಇದೇ ರೀತಿಯಲ್ಲಿ ತಾಪಮಾನ ಮುಂದುವರಿದರೆ ನಮ್ಮ ಮುಂದಿನ ಪೀಳಿಗೆಗೆ ಹಸಿರು ಉಳಿಸುವುದು ಹೇಗೆ ಎಂಬ ಬಗ್ಗೆ 1972 ರಲ್ಲಿ ವಿಶ್ವ ಸಂಸ್ಥೆಯಲ್ಲಿ ನಡೆದ ಸಭೆಯಲ್ಲಿ ಚಿಂತನೆ ಮಾಡಿದಾಗ ಪರಿಸರ ಸಂರಕ್ಷಣೆ ಅನಿವಾರ್ಯ ಎಂಬ ಕಾರಣಕ್ಕಾಗಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಗುತ್ತಿದೆ. ಇದು, ಜೂನ್ 5ಕ್ಕೆ ಮಾತ್ರ ಸೀಮಿತ ಆಗಬಾರದು ಎಂದು ಹೇಳಿದರು.
-ಸಿ.ಟಿ. ರವಿ, ಸದಸ್ಯರು, ವಿಧಾನ ಪರಿಷತ್ -ಫೋಟೋ
ಗಾಂಧಿ ಪಾರ್ಕ್‌ನಲ್ಲಿ ಸ್ವಚ್ಛತಾ ಕಾರ್ಯ ನಗರದ ಗಾಂಧಿ ಪಾರ್ಕ್‌ನಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಚಿಕ್ಕಮಗಳೂರಿನ ಟೌನ್ ಮಹಿಳಾ ಸಮಾಜ ಇಂಗ್ಲಿಷ್ ಮಾಧ್ಯಮ ಶಾಲೆ ಶಿಕ್ಷಕರು ಶಿಕ್ಷಕಿಯರು, ಮಕ್ಕಳು ಸ್ವಚ್ಛತಾ ಅಭಿಯಾನ ನಡೆಸಿ, ಗಿಡನೆಟ್ಟರು.