ಬ್ಯಾಡಗಿ: ಪರಿಸರ ದಿನ ಆಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಿದೆ. ಇಂತಹ ಮನಸ್ಥಿತಿಯಿಂದ ಮನುಷ್ಯ ಹೊರಬರದೆ ಇದ್ದಲ್ಲಿ ನೀರಿನಂತೆ ಗಾಳಿಯನ್ನು ಕೊಂಡು ಬದುಕುವ ಕಾಲ ದೂರವಿಲ್ಲ ಎಂದು ಪರಿಸರಸ್ನೇಹಿ ಬಳಗದ ಅಧ್ಯಕ್ಷ ಮೋಹನಕುಮಾರ ಹುಲ್ಲತ್ತಿ ತಿಳಿಸಿದರು.ಸ್ವಾಮಿ ವಿವೇಕಾನಂದ ಸೇವಾ ಬಳಗ ಮತ್ತು ಬ್ಯಾಡಗಿಯ ಪರಿಸರಸ್ನೇಹಿ ಬಳಗದ ಸಹಯೋಗದಲ್ಲಿ ತಾಲೂಕಿನ ಹೆಡಿಗೊಂಡ ಗ್ರಾಮದ ಮುಕ್ತಿಧಾಮದಲ್ಲಿ ಸ್ವಚ್ಛತಾ ಕಾರ್ಯ ಹಾಗೂ ಗಿಡ ನೆಡುವ ಮೂಲಕ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಾವೇರಿ: ತಾಲೂಕಿನ ನಾಗನೂರ ಗ್ರಾಮದ ವರದಾ ನದಿ ದಡದಲ್ಲಿ ವೃದ್ಧರೊಬ್ಬರು ನೀರು ಕುಡಿಯುತ್ತಿರುವಾಗ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.
ಹಾನಗಲ್ಲ ತಾಲೂಕಿನ ಜಕ್ಕನಾಯಕನಕೊಪ್ಪ ಗ್ರಾಮದ ಕಲ್ಲಪ್ಪ ಶಿವಪ್ಪ ಹುರಳಿಕುಪ್ಪಿ(85) ಮೃತ ದುರ್ದೈವಿ. ಈತ ನಾಗನೂರ ಗ್ರಾಮದ ವ್ಯಾಪ್ತಿಯಲ್ಲಿರುವ ವರದಾ ನದಿ ದಂಡೆಯಲ್ಲಿ ನೀರು ಕುಡಿಯುತ್ತಿರುವಾಗ ಆಕಸ್ಮಿಕವಾಗಿ ಬಿದ್ದು ನದಿಯಲ್ಲಿ ತೇಲಿಹೋಗಿ ಮುಳುಗಿ ಮೃತಪಟ್ಟಿದ್ದಾನೆ. ಕೋಳೂರ ಗ್ರಾಮದ ವರದಾ ನದಿ ದಂಡೆಯಲ್ಲಿ ಮೃತದೇಹ ಸಿಕ್ಕಿದೆ ಎಂದು ಪೊಲೀಸರ ದೂರಿನಲ್ಲಿ ತಿಳಿಸಲಾಗಿದೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.