ಅಂತಾರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜೈವಿಕ ಇಂಧನ ಬಳಸುವುದರಿಂದ ಪರಿಸರ ಮಾಲಿನ್ಯ ತಡೆಗಟ್ಟಬಹುದು. ಅಲ್ಲದೇ ಜಾಗತಿಕ ತಾಪಮಾನ ನಿಯಂತ್ರಿಸಿ ಪರಿಸರದ ಸಮತೋಲನ ಕಾಪಾಡಬಹುದು ಎಂದು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ.ಬೋರಯ್ಯ ಹೇಳಿದರು.ನಗರದ ಎಐಟಿ ಕಾಲೇಜು ಸಭಾಂಗಣದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಿಂದ ವಿದ್ಯಾರ್ಥಿ ಗಳಿಗೆ ಏರ್ಪಡಿಸಿದ್ಧ ಅಂತಾರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ದೇಶದ ಸುಸ್ಥಿರ ಮತ್ತು ಸ್ವಾವಲಂಬಿ ಅಭಿವೃದ್ಧಿಗೆ ಜೈವಿಕ ಇಂಧನದ ಉತ್ಪಾದನೆ ಅತ್ಯಗತ್ಯ. ತ್ಯಾಜ್ಯ ಮೂಲ ಗಳಿಂದ ಜೈವಿಕ ಇಂಧನ ತಯಾರಿಕೆಗೆ ವಿಪುಲ ಅವಕಾಶಗಳಿವೆ. ಆ ನಿಟ್ಟಿನಲ್ಲಿ ಕಾರ್ಯೋನ್ಮು ಕರಾದಲ್ಲಿ ಆತ್ಮ ನಿರ್ಭರತೆ ಸಾಧ್ಯವಿದೆ ಎಂದು ತಿಳಿಸಿದರು.ಪ್ರಸ್ತುತ ಹೆಚ್ಚುತ್ತಿರುವ ಇಂಧನ ಬಳಕೆಯಿಂದ ಭೂಮಿ ಒಡಲೋಳಗಿನ ಸಾಂಪ್ರದಾಯಿಕ ಇಂಧನ ಮೂಲ ಗಳು ಬರಿದಾಗುತ್ತಿದೆ. ಕಚ್ಚಾ ತೈಲ ಆಮದು ಹೆಚ್ಚುತ್ತಿರುವ ಕಾರಣ ಅರ್ಥಿಕ ವ್ಯವಸ್ಥೆ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿ ಪರ್ಯಾಯ ಇಂಧನ ಬಳಕೆ ಹೆಚ್ಚಾಗಬೇಕಿದೆ ಎಂದು ಹೇಳಿದರು.ಹವಾಮಾನ ಮತ್ತು ಅದರ ಬದಲಾವಣೆಯಿಂದಾಗುವ ಪರಿಣಾಮಗಳಾದ ಜೀವಿಗಳ ನಷ್ಟ, ಆವಾಸ ಸ್ಥಾನಗಳ ನಾಶ, ವಾಯು ಮಾಲಿನ್ಯ ಸೇರಿದಂತೆ ಪರಿಸರ ಸಂರಕ್ಷಣೆಯಲ್ಲಿ ಹಲವಾರು ಸಮಸ್ಯೆ ಪರಿಹರಿಸಲು ಜೈವಿಕ ಇಂಧನದ ಅಗತ್ಯವಿದೆ ಎಂದು ತಿಳಿಸಿದರು.ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್.ಮಹೇಶ್ ಮಾತನಾಡಿ, ಭೂಮಿಯಿಂದ ತೆಗೆಯುವ ಪೆಟ್ರೋಲ್, ಡೀಸೆಲ್ ಮುಂದಿನ ತಲೆಮಾರಿಗೆ ಮುಗಿಯಬಹುದು. ದೇಶದ ಸುಸ್ಥಿರ ಅಭಿವೃದ್ಧಿ ದೃಷ್ಟಿಯಿಂದ ಸ್ವಾವಲಂಬನೆಗೆ ಜೈವಿನ ಇಂಧನ ಉತ್ಪಾದನೆ ಸಂಪನ್ಮೂಲಗಳಾದ ಸಸಿಗಳನ್ನು ಬೆಳೆಸುವುದು ಮುಖ್ಯ ಎಂದರು.ಎಐಟಿ ಕಾಲೇಜು ಪ್ರಾಂಶುಪಾಲ ಡಾ. ಸಿ.ಟಿ.ಜಯದೇವ್ ಮಾತನಾಡಿ, ಇಂದಿನ ಜಾಗತಿಕ ಬದಲಾವಣೆ ಯಿಂದ ಕಚ್ಚಾ ತೈಲಗಳು ಮುಗಿದು ಹೋಗುತ್ತಿದ್ದು, ಭವಿಷ್ಯದಲ್ಲಿ ಇಂಧನದ ಕೊರತೆ ಉಂಟಾಗಲಿದೆ. ಈ ದಿಸೆಯಲ್ಲಿ ನಾವು ನೈಸರ್ಗಿಕ ಸಂಪನ್ಮೂಲ ಉಳಿಸುವುದರೊಂದಿಗೆ ಪರ್ಯಾಯ ಜೈವಿಕ ಇಂಧನ ಬಳಕೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಅವಶ್ಯಕತೆವಿದೆ ಎಂದರು.ಇದೇ ವೇಳೆ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಜಿ.ಎಂ.ಸತ್ಯನಾರಾಯಣ್ ಜೈವಿಕ ಇಂಧನ ಬಳಕೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಪ್ರೊ.ಬಸವರಾಜ್ ಉಪಸ್ಥಿತರಿದ್ದರು. 28 ಕೆಸಿಕೆಎಂ 3ಚಿಕ್ಕಮಗಳೂರಿನ ಎಐಟಿ ಕಾಲೇಜು ಸಭಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆಯನ್ನು ಬೋರಯ್ಯಉದ್ಘಾಟಿಸಿದರು. ಡಾ. ಸಿ.ಟಿ. ಜಯದೇವ್, ಎ.ಎನ್. ಮಹೇಶ್, ಡಾ. ಜಿ.ಎಂ. ಸತ್ಯನಾರಾಯಣ್ ಇದ್ದರು.