ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ ಶಾಂತಿ ಮತ್ತು ಸೌಹಾರ್ದತೆಯ ಮನೋಭಾವವನ್ನು ಹೆಚ್ಚಿಸುವ ಉದ್ದೇಶದಿಂದ, ಅರಸೀಕೆರೆ ನಗರ ಪೊಲೀಸ್ ಠಾಣೆಯ ವತಿಯಿಂದ ಶಾಂತಿಸೌಹಾರ್ದದ ಪಥಸಂಚಲನವನ್ನು ಆಯೋಜಿಸಲಾಯಿತು. ಪಥಸಂಚಲನದ ಸಂದರ್ಭ ಮಾತನಾಡಿದ ಪಿಎಸ್ಐ ರಾಘವೇಂದ್ರ ನಮ್ಮ ಸಮಾಜದಲ್ಲಿ ವಿವಿಧ ಧರ್ಮ, ಸಂಸ್ಕೃತಿಗಳ ಜನರು ಸಹಬಾಳ್ವೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಹಬ್ಬಗಳ ವೇಳೆ ಈ ಸಾಮರಸ್ಯ ಮತ್ತಷ್ಟು ಬಲಗೊಳ್ಳಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ, ನಗುಮುಖದ ವಾತಾವರಣದಲ್ಲಿ ಹಬ್ಬಗಳನ್ನು ಆಚರಿಸುವದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ನಗರದಲ್ಲಿ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ ಶಾಂತಿ ಮತ್ತು ಸೌಹಾರ್ದತೆಯ ಮನೋಭಾವವನ್ನು ಹೆಚ್ಚಿಸುವ ಉದ್ದೇಶದಿಂದ, ಅರಸೀಕೆರೆ ನಗರ ಪೊಲೀಸ್ ಠಾಣೆಯ ವತಿಯಿಂದ ಶಾಂತಿಸೌಹಾರ್ದದ ಪಥಸಂಚಲನವನ್ನು ಆಯೋಜಿಸಲಾಯಿತು.ಪಥಸಂಚಲನದ ಸಂದರ್ಭ ಮಾತನಾಡಿದ ಪಿಎಸ್ಐ ರಾಘವೇಂದ್ರ ನಮ್ಮ ಸಮಾಜದಲ್ಲಿ ವಿವಿಧ ಧರ್ಮ, ಸಂಸ್ಕೃತಿಗಳ ಜನರು ಸಹಬಾಳ್ವೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಹಬ್ಬಗಳ ವೇಳೆ ಈ ಸಾಮರಸ್ಯ ಮತ್ತಷ್ಟು ಬಲಗೊಳ್ಳಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ, ನಗುಮುಖದ ವಾತಾವರಣದಲ್ಲಿ ಹಬ್ಬಗಳನ್ನು ಆಚರಿಸುವದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಬೇರಾವುದೇ ಮಾಧ್ಯಮಗಳಲ್ಲಿ ಭಾವನೆಗಳಿಗೆ ಧಕ್ಕೆ ತರುವ ವಿಷಯಗಳನ್ನು ಹಂಚಿಕೊಳ್ಳಬಾರದು. ಬೇರೆಯವರ ಧರ್ಮ ಅಥವಾ ಆಚರಣೆಯ ಬಗ್ಗೆ ಅವಮಾನ ಅಥವಾ ಅಪಪ್ರಚಾರ ನಡೆಯದಂತೆ ನೋಡಿಕೊಳ್ಳುವುದು ಮುಖ್ಯ. ಪೊಲೀಸ್ ಇಲಾಖೆಯು ಸದಾ ಸಾರ್ವಜನಿಕರ ಸೇವೆಯಲ್ಲಿ ನಿಂತಿದ್ದು, ಸಹಕಾರ ನೀಡಿದರೆ ಶ್ರೇಷ್ಠ ಹಬ್ಬದ ಆಚರಣೆ ಸಾಧ್ಯವಾಗುತ್ತದೆ.ಸಮಾಜಿಕ ಭದ್ರತೆ, ಸಾರ್ವಜನಿಕ ಶಿಸ್ತಿನ ಪಾಲನೆ ಮತ್ತು ಸಂವೇದನಾಶೀಲತೆ ಈ ಹಬ್ಬಗಳ ಸಂದರ್ಭದಲ್ಲಿ ಮುಖ್ಯವಾಗಿವೆ ಎಂದು ಅವರು ಹೇಳಿದರು.ಈ ಶಾಂತಿಸೌಹಾರ್ದ ಪಥಸಂಚಲನದಲ್ಲಿ ಡಿವೈಎಸ್ಪಿ ಗೋಪಿ, ಎಸ್.ಐ ದಿಲೀಪ್, ಠಾಣಾ ಸಿಬ್ಬಂದಿ, ಪೊಲೀಸ್ ಕಾನ್ಸ್ಟೆಬಲ್ಸ್ ಹಾಗೂ ಹೋಂ ಗಾರ್ಡ್ಸ್‌ಗಳು ಪಾಲ್ಗೊಂಡಿದ್ದರು. ಪಥಸಂಚಲನವು ಅರಸೀಕೆರೆ ಪೊಲೀಸ್ ಠಾಣೆಯಿಂದ ಪ್ರಾರಂಭವಾಗಿ ಹುಳಿಯಾರ್ ಸರ್ಕಲ್, ಸಾಯಿನಾಥ್ ರಸ್ತೆ, ಬಿಎಚ್‌ರೋಡ್ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ನಡೆಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.