ಮಾನವ ಚಟುವಟಿಕೆಗಳಿಂದಾಗೇ ಪರಿಸರ ನಾಶ: ಪ್ರೊ.ಡಾ.ಬಿ.ಶಂಭುಲಿಂಗಪ್ಪ

KannadaprabhaNewsNetwork |  
Published : Jul 29, 2025, 01:00 AM IST
ಚಿತ್ರ 28ಬಿಡಿಆರ್54 | Kannada Prabha

ಸಾರಾಂಶ

ಜಿಎನ್‌ಡಿ ಇಂಜಿನೀಯರಿಂಗ್ ಕಾಲೇಜಿನಲ್ಲಿ ಎಂಬಿಎ ವಿಭಾಗವು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳವನ್ನು ಹೈಬ್ರೇಡ್ ಮೋಡ್‌ನಲ್ಲಿ ಹಸಿರು ಹಣಕಾಸಿನ ಮೂಲಕ ಸುಸ್ಥಿರ ಆರ್ಥಿಕತೆ ಕುರಿತು ರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಬೀದರ್‌

ಜಿಎನ್‌ಡಿ ಇಂಜಿನೀಯರಿಂಗ್ ಕಾಲೇಜಿನಲ್ಲಿ ಎಂಬಿಎ ವಿಭಾಗವು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳವನ್ನು ಹೈಬ್ರೇಡ್ ಮೋಡ್‌ನಲ್ಲಿ ಹಸಿರು ಹಣಕಾಸಿನ ಮೂಲಕ ಸುಸ್ಥಿರ ಆರ್ಥಿಕತೆ ಕುರಿತು ರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಳ್ಳಲಾಗಿತ್ತು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ಕಛೇರಿ ಕಲಬುರ್ಗಿಯ ಪ್ರೊ.ಡಾ.ಬಿ.ಶಂಭು ಲಿಂಗಪ್ಪ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಮಾನವ ಚಟುವಟಿಕೆಗಳಿಂದಾಗಿ ಪರಿಸರ ನಾಶವಾಗುತ್ತಿದೆ, ಪರಿಸರದ ಉಳಿವಿಗಾಗಿ ಇಂಧನದ ನವೀನ ಆಯ್ಕೆಗಳಾದ ಸೌರಶಕ್ತಿ, ವಾಯುಶಕ್ತಿ ಮತ್ತು ಜಲಶಕ್ತಿಯಂತಹ ನವೀಕರಿಸಬಹುದಾದ ಅಗತ್ಯತೆಯನ್ನು ಹೊರಹಾಕಿ, ಇವುಗಳು ಇಂದಿನ ದಿನಗಳಲ್ಲಿ ಪೆಟ್ರೋಲಿಯಂ ಹಾಗೂ ಕಲ್ಲಿದ್ದಲಿಗಿಂತ ಕಡಿಮೆ ವೆಚ್ಚದಲ್ಲಿ ಲಭ್ಯವಿರುವ ಶಕ್ತಿಯ ಮೂಲ ಗಳಾಗಿವೆ ಎಂಬುದನ್ನು ವಿವರಿಸಿದರು.

ಕೇಂದ್ರ ವಿಶ್ವವಿದ್ಯಾಲಯದ ವ್ಯವಹಾರ ಅಧ್ಯಯನಗಳ ಡೀನ್ ಆಗಿರುವ ಪ್ರೊ. ಪಾಂಡುರಂಗ ವಿ. ಮಾತನಾಡಿ, ಪ್ಲಾಸ್ಟಿಕ್ ಮುಕ್ತ ಭಾರತ ಮಾಡಲು ವರ್ಷಗಳು ಬೇಕಾಗುತ್ತದೆ ಎಂಬ ಗಂಭೀರ ವಿಷಯವನ್ನು ಉಲ್ಲೇಖಿಸಿ ನೈಸರ್ಗಿಕ ಸಂಪತ್ತುಗಳನ್ನು ಭವಿಷ್ಯ ಪೀಳಿಗೆಗಾಗಿ ಉಳಿಸಿ ಕೊಡುವ ಜವಾಬ್ದಾರಿ ಇಂದಿನ ಯುವಪೀಳಿಗೆಯ ಮೇಲಿದೆ ಎಂದು ತಿಳಿಸಿದರು.

2015ರಿಂದ ಸ್ಥಿರ ಅಭಿವೃದ್ಧಿಯ ಕುರಿತಾಗಿ ಜಾಗತಿಕ ಮಟ್ಟದಲ್ಲಿ ತೀವ್ರ ಚರ್ಚೆಗಳು ನಡೆದಿವೆ.ಇಂದಿನ ಯುವಕರು ‘ವಿಕಸಿತ ಭಾರತ’ದ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಕರೆ ಕೊಟ್ಟರು.

ಸಂಸ್ಥೆಯ ಉಪಾಧ್ಯಕ್ಷೆ ಡಾ.ರೇಷ್ಮಾ ಕೌರ್‌ ಮಾತನಾಡಿ, ಈಗಾಗಲೇ ಜೂನ್ ತಿಂಗಳಲ್ಲಿ 500 ಸಸಿಗಳನ್ನು ನೆಡಲಾಗಿದೆ. ಪ್ಲಾಸ್ಟಿಕ ವಸ್ತುಗಳನ್ನು ಬಳಕೆ ಮಾಡದಂತೆ ವಿದ್ಯಾರ್ಥಿ ಗಳಿಗೆ ಪ್ರತಿಜ್ಞೆ ಮಾಡಿಸಲಾಗಿದೆ ಎಂದರು.

ಎಂಬಿಎ ವಿಭಾಗದ ಮುಖ್ಯಸ್ಥೆ ಡಾ.ಜ್ಯೋತಿ ಐನಾಪುರ ಸ್ವಾಗತ ಕೋರಿದರೆ ಪ್ರಾಂಶುಪಾಲ ಡಾ.ಎಂ.ಧನಂಜಯ್, ಡಾ.ಮಹೇಶ್ ಕುಮಾರ, ಡಾ.ಶಶಿಧರ್ ಪಾಟೀಲ್, ಡಾ. ವಿಜಯರಾಜ್ ಸಾಹು ಮತ್ತು ಡಾ.ಹೂರ್ ಉನ್ನಿಸಾ ಉಪಸ್ಥಿತರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ