ಪಟ್ಟಣದ ನೈರ್ಮಲ್ಯ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಸುತ್ತ ಮುತ್ತಲಿನ ಪರಿಸರ ಎಷ್ಟು ಆರೋಗ್ಯವಾಗಿರುತ್ತೋ ಅಷ್ಟೇ ನಾವು ಕೂಡ ಆರೋಗ್ಯದಿಂದ ಇರುತ್ತೇವೆ. ನಿಯಮ ಮೀರಿ ಎಲ್ಲೆಂದರಲ್ಲಿ ಕಸ ಸುರಿದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಪ್ರೋಜ ಅಹ್ಮದ ಪಟೇಲ ಹೇಳಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಪಟ್ಟಣದ ನೈರ್ಮಲ್ಯ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಸುತ್ತ ಮುತ್ತಲಿನ ಪರಿಸರ ಎಷ್ಟು ಆರೋಗ್ಯವಾಗಿರುತ್ತೋ ಅಷ್ಟೇ ನಾವು ಕೂಡ ಆರೋಗ್ಯದಿಂದ ಇರುತ್ತೇವೆ. ನಿಯಮ ಮೀರಿ ಎಲ್ಲೆಂದರಲ್ಲಿ ಕಸ ಸುರಿದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಪ್ರೋಜ ಅಹ್ಮದ ಪಟೇಲ ಹೇಳಿದರು.

ಪಪಂಯಿಂದ ಸ್ವಚೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪಟ್ಟಣದ ಪ್ರತಿಯೊಂದು ವಾರ್ಡ್ ಸ್ವಚ್ಛ, ಸುಂದರ, ಆರೋಗ್ಯಯುತ ಹಾಗೂ ತ್ಯಾಜ್ಯ ಮುಕ್ತವಾಗಿಸುವ ಉದ್ದೇಶದಿಂದ ಪಟ್ಟಣದಲ್ಲಿ ಪ್ರತಿನಿತ್ಯ ಸಾರ್ವಜನಿಕರು ಕಸ ಸುರಿಯುವ ಇಂತಹ ಸುಮಾರು 8 ತ್ಯಾಜ್ಯ ತುಂಬಿದ ಜಾಗಗಳನ್ನು ಗುರುತಿಸಲಾಗಿದ್ದು, ಇದೇ ಮಾದರಿಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುವುದು. ಸ್ಥಳೀಯ ನಿವಾಸಿಗಳಿಗೆ, ಜನರಿಗೆ ತ್ಯಾಜ್ಯ ಎಸೆಯುವ ರೂಢಿ ತಪ್ಪುವವರೆಗೂ ಪ್ರತಿವಾರ ಪಟ್ಟಣದ ಖಾಲಿ ಜಾಗಗಳಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಕಸವನ್ನು ಎಲ್ಲೆಂದರಲ್ಲಿ ಎಸೆಯಬೇಡಿ, ಸ್ವಚ್ಛಗೊಳಿಸಿದ ಪ್ರತಿ ಸ್ಥಳಗಳಲ್ಲಿ ವಾಟರ್ ಮೆನ್, ಸೂಪರ್‌ವೈಸರ್ ಗಳನ್ನು ತಿಂಗಳುಗಳ ಕಾಲ ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲಾಗುತ್ತಿದೆ. ಪಟ್ಟಣದಲ್ಲಿ ಏಕಬಳಕೆ ಪ್ಲಾಸ್ಟಿಕ್ ಮಾರುವ, ಬಳಸುವುದನ್ನು ದಂಡ ಪ್ರಯೋಗ ಮೂಲಕ ಮುಕ್ತವಾಗಿಸುವ ಕಾರ್ಯ ಮಾಡಲಾಗುವುದು ಎಂದರು.

ಪ್ರತಿನಿತ್ಯ ಕಸದ ರಾಶಿಯಿಂದ ತುಂಬಿ ಗಬ್ಬೆದ್ದು ನಾರುತ್ತಿದ್ದ ಪಟ್ಟಣದ ರಾಷ್ಟ್ರೀಯ ಹೆದ್ದಾರಿ-50ರ ಪಕ್ಕ ಪೊಲೀಸ್ ಠಾಣೆ ಮುಂಭಾಗದಲ್ಲಿ ಭಾನುವಾರ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯ ಕೈಗೊಂಡು ಸುತ್ತಲಿನ ನಿವಾಸಿಗಳು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಕಾಂಪೌಂಡ್ ಮೇಲೆ ಸ್ವಚ್ಛತೆಯ ಕುರಿತು ಅರಿವು ಮೂಡಿಸುವ ಗೋಡೆ ಬರಹಗಳು, ಚಿತ್ರಗಳನ್ನು ಬಿಡಿಸಿ ಕಸವಿದ್ದ ಜಾಗದಲ್ಲಿ ಗಿಡಗಳನ್ನು ನೆಟ್ಟು ಸುತ್ತಮುತ್ತಲಿನ ನಿವಾಸಿಗಳಿಗೆ ಸ್ವಚ್ಛತೆ ಮಹತ್ವ, ಕಸ ಸಂಗ್ರಹಣೆ, ತ್ಯಾಜ್ಯ ನಿರ್ವಹಣೆ ಕುರಿತು ಜಾಗೃತಿ ಮೂಡಿಸಲಾಯಿತು.ಪಪಂ ಸಿಬ್ಬಂದಿ ಮುತ್ತುರಾಜ ಹಿರೇಮಠ, ಸೋಮು ಭೋವಿ, ಮಾರ್ತುಂಡ ಗುಡಿಮನಿ, ಶ್ಯಾನಿಟರಿ ಸೂಪರ ವೈಜರ ಶಿಲಾಧರ ಘತ್ತರಗಿ, ಕಮ್ಯುನಿಟಿ ಮೋಗಲೈಜರ ಅಂಬಿಕಾ ಕುಲಕರ್ಣಿ,ಕಿರಿಯ ಆರೋಗ್ಯ ನಿರೀಕ್ಷಕರು ಹಾಗೂ ನೈರ್ಮಲ್ಯ ಸಿಬ್ಬಂದಿ ಇದ್ದರು.