ಜಾತ್ರೆಗಳು ಜಾತಿ, ಮತ ಮತ್ತು ಧರ್ಮದ ಬೇಲಿಗಳನ್ನು ಮೀರಿ ಜನರನ್ನು ಒಂದೆಡೆ ಸೇರಿಸುವ ಮೂಲಕ ಭಾರತದ ಸಾಂಸ್ಕತಿಕ ಭಾವ್ಯಕ್ಯೆತೆಯ ಸಂಕೇತಗಳಾಗಿವೆ ಎಂದು ಗಂಗಾವತಿ ಕಲ್ಮಠದ ಡಾ. ಕೊಟ್ಟೂರು ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಕಮತಗಿ

ಜಾತ್ರೆಗಳು ಜಾತಿ, ಮತ ಮತ್ತು ಧರ್ಮದ ಬೇಲಿಗಳನ್ನು ಮೀರಿ ಜನರನ್ನು ಒಂದೆಡೆ ಸೇರಿಸುವ ಮೂಲಕ ಭಾರತದ ಸಾಂಸ್ಕತಿಕ ಭಾವ್ಯಕ್ಯೆತೆಯ ಸಂಕೇತಗಳಾಗಿವೆ ಎಂದು ಗಂಗಾವತಿ ಕಲ್ಮಠದ ಡಾ. ಕೊಟ್ಟೂರು ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿನ ಹುಚ್ಚೇಶ್ವರ ರಥಬೀದಿ ಆವರಣದಲ್ಲಿ ಹೊಳೆ ಹುಚ್ಚೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಕಮತಪುರ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯದಲ್ಲಿ ವೀರಶೈವ ಲಿಂಗಾಯತ ಮಠಗಳು ಹಿಂದಿನಿಂದಲೂ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಮೂಲಕ ಅವರ ಪಾಲಿನ ಆಶಾ ದೀಪಗಳಾಗಿ ಪ್ರಜ್ವಲಿಸುತ್ತಿವೆ. ಇಂದಿನ ದಿನಗಳಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿದ್ದು, ಶಿಕ್ಷಕರು, ಪಾಲಕರು ಮಕ್ಕಳಲ್ಲಿ ಆಚಾರ, ವಿಚಾರ, ಸಮಾಜಮುಖಿ ಕಾರ್ಯಗಳ ಬಗ್ಗೆ ಹಾಗೂ ಸಂಸ್ಕಾರಗಳ ಬಗ್ಗೆ ತಿಳಿಸಿಕೊಡುವುದು ಅವಶ್ಯಕ. ಜಾತ್ರೆಗಳು ಸಾಂಸ್ಕತಿಕ ಪರಂಪರೆಯ ಅವಿಭಾಜ್ಯ ಅಂಗಗಳಾಗಿದ್ದು, ಇವು ಧಾರ್ಮಿಕ ವಿಧಿವಿಧಾನಗಳು, ಸಾಮಾಜಿಕ ಸಮ್ಮಿಲನವಾಗಿಸಲು ಪ್ರೋತ್ಸಾಹಿಸುತ್ತವೆ. ಜಾತಿ, ಮತ ಮತ್ತು ಧರ್ಮದ ಬೇಲಿಗಳನ್ನು ಮೀರಿ ಜನರನ್ನು ಒಂದೆಡೆ ಸೇರಿಸುವ ಮೂಲಕ ಭಾರತದ ಸಾಂಸ್ಕತಿಕ ಭಾವೈಕ್ಯತೆಯ ಸಂಕೇತಗಳಾಗಿವೆ ಎಂದು ಹೇಳಿದರು.

ಉಪ್ಪಿನಬೆಟಗೇರಿ ಕುಮಾರ ವೀರೂಪಾಕ್ಷ ಶ್ರೀ, ಮುನವಳ್ಳಿ ಮುರುಘೇಂದ್ರ ಶ್ರೀ, ಹೊಸಹಳ್ಳಿ ಬೂದಿಶ್ವರ ಶ್ರೀ, ಕಮತಗಿ ಹೊಳೆ ಹುಚ್ಚೇಶ್ವರ ಶ್ರೀ, ಗುಳೇದಗುಡ್ಡ ಕಾಶೀನಾಥ ಶ್ರೀ, ಅಗಡಿ ಗುರುಲಿಂಗ ಶ್ರೀ, ಕಮತಗಿ ಶಿವಕುಮಾರ ಶಿವಾಚಾರ್ಯ ಶ್ರೀ, ಕುಂದರಗಿ ಅಮರಸಿದ್ದೇಶ್ವರ ಶ್ರೀ, ಕೋಟೆಕಲ್ ನೀಲಕಂಠ ಶಿವಾಚಾರ್ಯ ಶ್ರೀ, ಗುಳೇದಗುಡ್ಡ ಅಭಿನವ ಕಾಡಸಿದ್ದೇಶ್ವರ ಶ್ರೀ, ಮಾತೋಶ್ರೀ ಬಸವಣ್ಣೆಮ್ಮತಾಯಿ ಬಸರಕೋಡ ಸೇರದಂತೆ ಗಣ್ಯರು, ಸುತ್ತ ಮುತ್ತಲಿನ ಗ್ರಾಮಗಳ ಅಪಾರ ಭಕ್ತರು ಇದ್ದರು.