ಕನ್ನಡಪ್ರಭ ವಾರ್ತೆ ಶಿಕಾರಿಪುರ
ಬುಧವಾರ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಅಂಗವಾಗಿ ಪಟ್ಟಣದ ಅರಣ್ಯ ಇಲಾಖೆ ಆವರಣದ ಲ್ಲಿರುವ ಹುತಾತ್ಮ ಎಚ್.ಬಸವಣ್ಣಿ ರವರ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು
ಮನುಷ್ಯ ಕಾನೂನನ್ನು ಉಲ್ಲಂಘಿಸಿದಲ್ಲಿ ಶಿಕ್ಷೆ ಆಗಬಹುದು ಅಥವಾ ಸಾಕ್ಷಿಗಳ ಲಭ್ಯತೆವಿಲ್ಲದೆ ಶಿಕ್ಷೆಯಿಂದ ಖುಲಾಸೆ ಆಗಬಹುದು,ಆದರೆ ಅರಣ್ಯ ಮತ್ತು ಪರಿಸರ ನಾಶದಂತಹ ನೈಸರ್ಗಿಕ ನಿಯಮದ ವಿರುದ್ಧ ಮನುಷ್ಯ ಹೋದಾಗ ಅದರ ಪರಿಣಾಮ ತುಂಬಾ ಭೀಕರವಾಗಿರುತ್ತದೆ.ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದ ಅವರು ಮನುಷ್ಯನ ಅತಿಯಾದ ದುರಾಸೆಯಿಂದಾಗಿ ಪರಿಸರ ನಾಶ ವಿಪರೀತವಾಗಿದ್ದು ಸಮತೋಲನ ಕಳೆದುಕೊಂಡ ಪ್ರಕೃತಿ ವಿಕೋಪಕ್ಕೆ ಕೇರಳ ವಯನಾಡು ಘಟನೆ ತಾಜಾ ಉದಾಹರಣೆಯಾಗಿದೆ.ಇಂತಹ ಘಟನೆಗಳಿಂದ ಸಮಸ್ತ ಮನುಕುಲ ಪಾಠ ಕಲಿತು ಎಚ್ಚೆತ್ತು ಕೊಳ್ಳಬೇಕಿದೆ ಎಂದರು.ಪರಿಸರದ ರಕ್ಷಣೆಗಾಗಿ ಹುತಾತ್ಮರಾದವರು ಪ್ರಾತಃಸ್ಮರಣೀಯರಾಗಿದ್ದು,ಅವರ ಪರಿಸರದ ಬಗೆಗಿನ ಕಾಳಜಿ ಆದರ್ಶಗಳನ್ನು ನಾವು ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ಮಾತ್ರ ನಿಜವಾಗಿ ನಾವು ಹುತಾತ್ಮರಿಗೆ ಕೊಡುವ ಗೌರವವಾಗಿದೆ ಹಾಗೂ ಪ್ರಕೃತಿಯನ್ನು ಉಳಿಸಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ನಮನ ಸಲ್ಲಿಸಿ ಕ್ಷಣ ಕಾಲ ಮೌನಾಚರಣೆ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕಾರಿಪುರ ಉಪ ವಿಭಾಗದ ಎ.ಸಿ.ಎಫ್.ಎಸ್ ವಿ ರವೀಂದ್ರ ನಾಯ್ಕ್ ವಹಿಸಿದ್ದರು. ವಲಯ ಅರಣ್ಯ ಸಂರಕ್ಷಣಾಧಿಕಾರಿ ರೇವಣಸಿದ್ದಯ್ಯ ಬಿ ಹಿರೇಮಠ,ಶಾಂತಪ್ಪ ಪೂಜಾರ್,ಶಗುಫ್ತ್ ಶೇಕ್,ಅಶ್ವಿನ್ ಕುಮಾರ್ ಎಸ್ ವಿ,ತಾ.ಕಾ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಲ್.ರಾಜು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ವರ್ಗದವರು ಹಾಜರಿದ್ದರು.