ಪರಿಸರ ನಾಶದಿಂದ ಮನುಷ್ಯ ಸಂಕುಲಕ್ಕೆ ಹಾನಿ: ಉಮಾ

KannadaprabhaNewsNetwork |  
Published : Jun 08, 2025, 02:17 AM ISTUpdated : Jun 08, 2025, 02:18 AM IST
ಕಾರ್ಯಕ್ರಮವನ್ನು ಉಮಾ.ಎನ್.ಜಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಪರಿಸರವನ್ನು ನಾವು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ. ಪಂಚ ಬೂತಗಳಲ್ಲೂ ದೇವರನ್ನು ಕಾಣುವ ಸಂಸ್ಕೃತಿ ನಮ್ಮದು. ತೆಂಗು ಆಲದಮರ, ಬನ್ನಿ ಮರ ಇನ್ನಿತರ ಮರಗಳನ್ನು ದೈವ ಸ್ವರೂಪಿಯಾಗಿ ಕಂಡರೂ ಪರಿಸರವನ್ನು ನಾಶ ಮಾಡುವುದು ಬಿಟ್ಟಿಲ್ಲ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಉಮಾ ಎನ್.ಜಿ. ಹೇಳಿದರು.

ಗದಗ: ಪರಿಸರವನ್ನು ನಾವು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ. ಪಂಚ ಬೂತಗಳಲ್ಲೂ ದೇವರನ್ನು ಕಾಣುವ ಸಂಸ್ಕೃತಿ ನಮ್ಮದು. ತೆಂಗು ಆಲದಮರ, ಬನ್ನಿ ಮರ ಇನ್ನಿತರ ಮರಗಳನ್ನು ದೈವ ಸ್ವರೂಪಿಯಾಗಿ ಕಂಡರೂ ಪರಿಸರವನ್ನು ನಾಶ ಮಾಡುವುದು ಬಿಟ್ಟಿಲ್ಲ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಉಮಾ ಎನ್.ಜಿ. ಹೇಳಿದರು. ಇಲ್ಲಿಯ ಶಿವಾನಂದ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಡೆದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದಿನ ದಿನಗಳಲ್ಲಿ ರಸ್ತೆಗಳ ಅಗಲೀಕರಣ, ಕೆರೆಗಳ ಮುಚ್ಚುವಿಕೆ, ಕಾಡಿನ ನಾಶ ಇದೇ ರೀತಿ ಮುಂದುವರೆದರೆ ಪ್ರಾಣಿ ಸಂಕುಲ ಮನುಷ್ಯ ಸಂಕುಲದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದನ್ನು ತಪ್ಪಿಸಬೇಕಾದರೆ ಗಿಡಗಳನ್ನು ನಾಟಿ ಮಾಡಿ ಸಂರಕ್ಷಣೆ ಮಾಡುವುದು ಅಗತ್ಯವಾಗಿದೆ ಎಂದರು.

ಹಿರಿಯ ಸಾಹಿತಿ ಮಲ್ಲಿಕಾರ್ಜುನ ಪೂಜಾರ ಮಾತನಾಡಿ, ವಿಶ್ವ ಪರಿಸರ ದಿನವು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕಲು ಮತ್ತು ಜಾಗತಿಕ ತಾಪಮಾನ ಏರಿಕೆಯ ವಿರುದ್ಧ ಹೋರಾಡುವ ಅಗತ್ಯವನ್ನು ನಮಗೆ ಕಲಿಸುತ್ತದೆ. ಈ ದಿನದಂದು ನಾವೆಲ್ಲರೂ ನಮ್ಮ ಭೂಮಿಯನ್ನು ರಕ್ಷಿಸುತ್ತೇವೆ. ಈ ನಿಟ್ಟಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕ್ರಮ ಶ್ಲಾಘನೀಯವಾಗಿದೆ ಎಂದು ಹೇಳಿದರು.

ಶಾಲೆಯ ಮುಖ್ಯ ಶಿಕ್ಷಕರಾದ ಎಂ.ಎಂ. ಜೋಗಿನ ಮಾತನಾಡಿ, ಈ ದಿನವನ್ನು ಸಸಿ ನೆಟ್ಟು ಆಚರಿಸುವುದು ಜಾಗತಿಕವಾಗಿ ಇರುವ ವಾಡಿಕೆಯಾಗಿದೆ. ಆದರೆ ಇದರ ಹೊರತಾಗಿ ಪರಿಸರಕ್ಕೆ ಅಥವಾ ಭೂಮಿಗೆ ಸವಾಲಾಗಿರುವ ಹವಾಮಾನ ಬದಲಾವಣೆ, ಪ್ಲಾಸ್ಟಿಕ್‌ನಂತಹ ಗಂಭೀರ ಸಮಸ್ಯೆಗಳ ಬಗ್ಗೆ ನಾವು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಿದೆ. ನಮ್ಮ ಮಕ್ಕಳಿಗೆ ಇಂದಿನಿಂದಲೇ ಪರಿಸರ ಮಾಲಿನ್ಯ, ಪ್ಲಾಸ್ಟಿಕ್ ಬಳಕೆ, ಪರಿಸರ ಸ್ವಚ್ಛತೆಯ ಜಾಗೃತಿ ಮೂಡಿಸಿ ವಿಶ್ವ ಪರಿಸರ ದಿನಕ್ಕೆ ತಮ್ಮದೇ ಕೊಡುಗೆ ನೀಡಬಹುದು ಎಂದು ತಿಳಿಸಿದರು.

ಈ ವೇಳೆ ಸುಷ್ಮಾ, ಕೃಷಿ ಮೇಲ್ವಿಚಾರಕ ಕಿರಣ ಮಹೇಂದ್ರಕರ, ದ್ಯಾಮವ್ವ ವಡ್ಡರ ಸೇರಿದಂತೆ ಮುಂತಾದವರು ಇದ್ದರು. ಇದಕ್ಕೂ ಮುನ್ನ ಮಕ್ಕಳಿಗೆ ಪರಿಸರ ಕಾರ್ಯಕ್ರಮ ಕುರಿತು ಪ್ರಬಂಧ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ, ವಿವಿಧ ಜಾತಿ ಎಲೆಗಳ ಗುರುತಿಸುವಿಕೆ, ವಿವಿಧ ಜಾತಿ ಸಸಿ ಬೀಜಗಳ ಗುರುತಿಸುವಿಕೆ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ