ಅವೈಜ್ಞಾನಿಕ ಯೋಜನೆಯಿಂದ ಪರಿಸರದಲ್ಲಿ ಅಸಮತೋಲನ

KannadaprabhaNewsNetwork |  
Published : May 08, 2026, 01:15 AM IST
೭ಕೆಎಲ್‌ಆರ್-೭ಪಿಯುಸಿ ಪರೀಕ್ಷೆಯಲ್ಲಿ ಶೇ.೯೦ಕ್ಕೂ ಹೆಚ್ಚು ಅಂಕಗಳಿಸಿದ ವಿಶೇ? ಚೇತನ ವಿದ್ಯಾರ್ಥಿ ಸಿ.ಸಿ.ಚರಣ್‌ರನ್ನು ಸನ್ಮಾನಿಸುತ್ತಿರುವುದು. | Kannada Prabha

ಸಾರಾಂಶ

ಪರಿಸರ ರಕ್ಷಣೆ ಎನ್ನುವುದು ಕೇವಲ ತೋರಿಕೆಯ ಫ್ಯಾಷನ್ ಆಗಬಾರದು. ನಾವು ಹಾಕುವ ಪ್ರತಿಯೊಂದು ಸಸಿಯೂ ಮರವಾಗಿ ಬೆಳೆಯುವವರೆಗೂ ಅದರ ಜವಾಬ್ದಾರಿ ಹೊರಬೇಕು, ನಾವು ನಮ್ಮ ಮಕ್ಕಳನ್ನು ವಿದ್ಯಾವಂತರಾಗಿ ಮಾಡುತ್ತಿದ್ದೇವೆ. ಆದರೆ, ಅವರನ್ನು ಬುದ್ಧಿವಂತರಾಗಿ ಮಾಡಬೇಕಾದ ಹೊಣೆ ನಮ್ಮೆಲ್ಲರ ಮೇಲಿದೆ

ಕನ್ನಡಪ್ರಭ ವಾರ್ತೆ ಕೋಲಾರಸಸಿ ಕೊಡುವ, ಸಸಿ ನೆಡುವ ಕಾರ್ಯಕ್ರಮ ಒಂದು ಫ್ಯಾಷನ್ ಆಗಿದೆ. ಅವುಗಳಲ್ಲಿ ಎಷ್ಟು ಸಸಿಗಳು ಹೆಮ್ಮರಗಳಾಗಿವೆ ಎಂಬ ವೈಜ್ಞಾನಿಕ ಅವಲೋಕನ ಮಾಡುತ್ತಿಲ್ಲ, ಪ್ರತಿಯೊಬ್ಬ ಮನುಷ್ಯ ನಿಸರ್ಗದೊಂದಿಗೆ ಹೇಗೆ ಅನುಸಂಧಾನ ಮಾಡಬೇಕೆಂಬುದನ್ನು ಸಣ್ಣ ಮಕ್ಕಳಿಂದಲೇ ಕಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅಭಿಪ್ರಾಯಪಟ್ಟರು.ಗುರುವಾರ ನಗರದಲ್ಲಿ ಮನ್ವಂತರ ಪ್ರಕಾಶನ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಿಜಯ ಉನ್ನತಿ ಸೇವಾ ಟ್ರಸ್ಟ್‌ನಿಂದ ಜಾಗತಿಕ ತಾಪಮಾನ ಕುರಿತ ಸಂವಾದ ಹಾಗೂ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಪರಿಸರ ರಕ್ಷಣೆ ಎನ್ನುವುದು ಕೇವಲ ತೋರಿಕೆಯ ಫ್ಯಾಷನ್ ಆಗಬಾರದು. ನಾವು ಹಾಕುವ ಪ್ರತಿಯೊಂದು ಸಸಿಯೂ ಮರವಾಗಿ ಬೆಳೆಯುವವರೆಗೂ ಅದರ ಜವಾಬ್ದಾರಿ ಹೊರಬೇಕು, ನಾವು ನಮ್ಮ ಮಕ್ಕಳನ್ನು ವಿದ್ಯಾವಂತರಾಗಿ ಮಾಡುತ್ತಿದ್ದೇವೆ. ಆದರೆ, ಅವರನ್ನು ಬುದ್ಧಿವಂತರಾಗಿ ಮಾಡಬೇಕಾದ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು.

ಕೆರೆಕಟ್ಟೆಗಳೇ ಮೂಲ: ಜಿಲ್ಲೆಯ ತಾಪಮಾನ ಏರಿಕೆ ಕುರಿತು ಆತಂಕ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ಕಳೆದ ಐದು ವರ್ಷಗಳಲ್ಲಿ ಕೋಲಾರದ ಉಷ್ಣಾಂಶವು ೩೦ ಡಿಗ್ರಿ ಸೆ.ನಿಂದ ಸುಮಾರು ೪೦ಡಿಗ್ರಿ ಸೆ.ವರೆಗೆ ಏರಿದೆ ಎಂದು ಅಂಕಿಅಂಶಗಳ ಸಮೇತ ವಿವರಿಸಿದರು. ನಮ್ಮ ಜಿಲ್ಲೆಯಲ್ಲಿ ಕೆರೆಕಟ್ಟೆಗಳೇ ಬದುಕಿನ ಆಧಾರ. ಆದರೆ ಅತಿಯಾದ ನಗರೀಕರಣ ಮತ್ತು ಅವೈಜ್ಞಾನಿಕ ಯೋಜನೆಗಳಿಂದಾಗಿ ಪರಿಸರದ ಸಮತೋಲನ ತಪ್ಪುತ್ತಿದೆ ಎಂದು ವಿಷಾದಿಸಿದರು.

ಸರ್ಕಾರದ ಸಮಸ್ಯೆಯಲ್ಲ: ಸುವರ್ಣ ಗಂಗೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ. ರವಿ ಮಾತನಾಡಿ, ಜಾಗತಿಕ ತಾಪಮಾನ ಎನ್ನುವುದು ಕೇವಲ ಸರ್ಕಾರದ ಸಮಸ್ಯೆಯಲ್ಲ, ಅದು ಮನುಕುಲದ ಅಸ್ತಿತ್ವದ ಪ್ರಶ್ನೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಶೇ.೯೦ಕ್ಕೂ ಹೆಚ್ಚು ಅಂಕ ಗಳಿಸಿದ ವಿಶೇಷಚೇತನ ವಿದ್ಯಾರ್ಥಿ ಸಿ.ಸಿ. ಚರಣ್‌ರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್. ಗಣೇಶ್, ಪಾ.ಶ್ರೀ. ಅನಂತರಾಮ್, ಎಸ್. ಮಂಜುನಾಥ್, ಎಂ. ಮುರಳಿ, ಮಾಮಿ ಪ್ರಕಾಶ್, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ. ಮುನಿರಾಜು, ಜಿಲ್ಲಾ ಅಧ್ಯಕ್ಷ ಎಸ್.ಕೆ. ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಎ.ಜಿ. ಸುರೇಶ್ ಕುಮಾರ್, ಖಜಾಂಚಿ ರಾಜೇಂದ್ರ ಸಿಂಹ, ಉಪಾಧ್ಯಕ್ಷ ಎಸ್. ರವಿಕುಮಾರ್, ಕಾರ್ಯದರ್ಶಿ ಶಮ್ಗರ್, ಉಪನ್ಯಾಸಕ ಹರೀಶ್, ಶಸಾಪ ಅಧ್ಯಕ್ಷ ಬಿ. ಸುರೇಶ್, ಗಮನ ಶಾಂತಮ್ಮ, ಸ್ಫೂರ್ತಿ, ಮಹಿಳಾ ಸಂಚಾಲಕಿ ಮಂಜುಳಾ ಸಿ.ವಿ. ನಾಗರಾಜ್, ತಿರುಮಲೇಶ್, ಎನ್. ಸತೀಶ್ ಗೌಡ, ಮಂಜುಳಾ, ರೇಷ್ಮೆ ಇಲಾಖೆ ಡಿಡಿ ಆಂಜನೇಯ ರೆಡ್ಡಿ, ಮನ್ವಂತರ ಮೀಡಿಯಾ ಟೀಂ ಆಸಿಫ್‌ಪಾಷ ಇದ್ದರು.

ಫೋಟೋ..

೭ಕೆಎಲ್‌ಆರ್-೭

ಪಿಯುಸಿ ಪರೀಕ್ಷೆಯಲ್ಲಿ ಶೇ.೯೦ಕ್ಕೂ ಹೆಚ್ಚು ಅಂಕ ಗಳಿಸಿದ ವಿಶೇಷಚೇತನ ವಿದ್ಯಾರ್ಥಿ ಸಿ.ಸಿ. ಚರಣ್‌ರನ್ನು ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ ಮಮತೆಯ ಮಡಿಲಿಗಿದು ಗೀತ ನಮನ
ಸಂವಿಧಾನದ ಆಶಯ ಕಗ್ಗೊಲೆ ಮಾಡುತ್ತಿರುವ ಸಿಎಂ