ಕೊಪ್ಪಳ: ಪರಿಸರ ಸಂರಕ್ಷಣೆ ನಮ್ಮ ಕರ್ತವ್ಯ ಮಾತ್ರ ಅಲ್ಲ, ಅದು ನಮ್ಮ ನೈತಿಕೆ ಹೊಣೆ ಎಂದು ಎಂಎಸ್ಪಿಎಲ್ ಸಂಸ್ಥೆಯ ಸಿಎಸ್ಆರ್ ವಿಭಾಗದ ಉಪಾಧ್ಯಕ್ಷ ಎಚ್.ಕೆ. ರಮೇಶ್ ಹೇಳಿದ್ದಾರೆ.
ಹಸಿರು ಪರಿಸರವು ಕೇವಲ ನೈಸರ್ಗಿಕ ಸೌಂದರ್ಯವನ್ನಷ್ಟೆ ನೀಡುವುದಿಲ್ಲ, ಅದು ಮಾನಸಿಕ ಶಾಂತಿ, ಶಾರೀರಿಕ ಆರೋಗ್ಯ ಮತ್ತು ಸಮತೋಲನಯುತ ಜೀವನ ಶೈಲಿ ಕಟ್ಟಿಕೊಡುವ ಶಕ್ತಿ ಹೊಂದಿದೆ ಎಂದು ಹೇಳಿದರು.
ಗ್ರಾಮಸ್ಥರ ಅನೇಕ ವರ್ಷಗಳ ಆಸೆಯಂತೆ ಹಾಲವರ್ತಿ ಗ್ರಾಮದಲ್ಲಿ ಸುಸಜ್ಜಿತ ಉದ್ಯಾನವನ ನಿರ್ಮಾಣಕ್ಕಾಗಿ ಎಂಎಸ್ಪಿಎಲ್ ಸಂಸ್ಥೆ ತನ್ನ ಸಿಎಸ್ಆರ್ ಚಟುವಟಿಕೆಯ ಅಡಿಯಲ್ಲಿ ಮುಂದಾಗಿದೆ. ಈ ಉದ್ಯಾನವನದಲ್ಲಿ ಹಿರಿಯರು ಬೆಳಗಿನ ನಡಿಗೆ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು, ಮಕ್ಕಳು ಆಟದ ಮೈದಾನದಲ್ಲಿ ಸಂತೋಷದಿಂದ ಸಮಯ ಕಳೆಯಬಹುದು, ಯುವಕರು ಕ್ರೀಡೆ ಮತ್ತು ವ್ಯಾಯಾಮದ ಮೂಲಕ ಶಕ್ತಿಯುತ ಜೀವನಕ್ಕೆ ಪ್ರೇರಿತರಾಗಬಹುದು ಎಂದರು.ಪರಿಸರ ಸ್ನೇಹಿ ಚಟುವಟಿಕೆ ಉತ್ತೇಜಿಸುವುದು ನಮ್ಮ ಸಂಸ್ಥೆಯ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ. ಗ್ರಾಪಂ ಮತ್ತು ಸ್ಥಳೀಯ ಸಮುದಾಯದ ಸಹಕಾರದಿಂದ ಈ ಯೋಜನೆ ಸ್ಥಳೀಯ ಜನರಿಗೆ ಸಮರ್ಪಕವಾಗಿ ಸದುಪಯೋಗವಾಗಲಿದೆ ಎಂಬ ವಿಶ್ವಾಸವಿದೆ ಎಂದರು.
ಈ ಕಾರ್ಯಕ್ರಮದಲ್ಲಿ ವೀರೇಶ್ ಕೊಪ್ಪಳ, ಪ್ರವೀಣ್ ಮನು, ರವಿ ಬಿಸಗುಪ್ಪಿ, ವಿಠ್ಠಲ ಸಲಗರ, ಎಚ್.ಆರ್.ಲೋಹಿತ, ಆನಂದ್ ಕಿನ್ನಾಳ, ಮಹೇಂದ್ರ ಹಾಲವರ್ತಿ, ಸಿಂದಗಪ್ಪ ಹೊಸಳ್ಳಿ, ಮುದಿಯಪ್ಪ ಆದೋನಿ, ಗುರುಸಿದ್ದಪ್ಪ, ದ್ಯಾಮಣ್ಣ ಹೊಸಳ್ಳಿ ಹನುಮಂತ ಗೊರವರ, ಗವಿಸಿದ್ದರಡ್ಡಿ ಇದ್ದರು.