ಕನ್ನಡಪ್ರಭ ವಾರ್ತೆ ಸೊರಬ
ತಾಲೂಕಿನ ಶಾಂತಗೇರಿ ಗ್ರಾಮದ ತಾವರೆಕೆರೆ ಅಂಗಳದಲ್ಲಿ ಗ್ರಾಮಸ್ಥರ ಆಶ್ರಯದಲ್ಲಿ ಪರಿಸರ ಜಾಗೃತಿ ಟ್ರಸ್ಟ್ ಹಾಗೂ ಪರ್ಯಾವರಣ ಗತಿವಿಧಿ ಸಂಘಟನೆಗಳು ಹಮ್ಮಿಕೊಂಡಿದ್ದ ವಿಶ್ವ ಜಲದಿನ ಕಾರ್ಯಕ್ರಮದಲ್ಲಿ ಕೆರೆಪೂಜೆ ನಡೆಸಿ ಮಾತನಾಡಿ ಜಲಮೂಲಗಳಾದ ಕೆರೆ, ನದಿ, ಕೊಳವೆ ಬಾವಿ ಬತ್ತದಂತೆ ನೋಡಿಕೊಳ್ಳಬೇಕಿದೆ. ಮನುಷ್ಯ ತನ್ನ ಲಾಲಾಸೆಗೆ ಕಾಡು ನಾಶ ಮಾಡುವ ಕೃತ್ಯಕ್ಕೆ ಇಳಿದಿದ್ದಾನೆ. ಇದರಿಂದ ನಾಡು ಬರ ಎದುರಿಸುವಂತಾಗಿದೆ. ಅಳಿದುಳಿದ ಕಾಡಿನ ಸಂರಕ್ಷಣೆ ಎಲ್ಲರ ಹೊಣೆ ಎಂದ ಅವರು, ವಿಶ್ವದಾದ್ಯಂತ ಶನಿವಾರ ಜಲದಿನ ನಡೆಯುತ್ತಿದೆ. ಯಾವುದೋ ಸಿಮೆಂಟ್ ಹಾಸಿನ ನಡುವೆ ಜಲದಿನ ಆಚರಿಸುವುದಕ್ಕಿಂತ ಗ್ರಾಮಾಂತರ ಪ್ರದೇಶದ ಜಲಮೂಲದ ಸನಿಹ ಆಚರಿಸುವ ಜಲದಿನ ಆಚರಣೆಗೆ ಅರ್ಥ ಮೂಡುತ್ತದೆ ಎಂದರು.
ಗ್ರಾಮಸ್ಥರು ಕೆರೆ ಅತ್ಯಂತ ಸ್ವಚ್ಛವಾಗಿಟ್ಟು ಕಾಪಾಡಿಕೊಂಡು ಬಂದಿದ್ದಾರೆ. ಕೆರೆಯ ರಕ್ಷಣೆಗೆ ಕಾಳಜಿ ಇದೆ. ಕೆರೆಯ ಮೌಲ್ಯ, ಉಪಯೋಗಗಳ ಬಗ್ಗೆ ಅರಿವು ಮೂಡಿಸಿ ಕಾಯ್ದುಕೊಳ್ಳುವ ಮೂಲಕ ಮುಂಪೀಳಿಗೆಗೆ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.ಪರ್ಯಾವರಣದ ಹಾಗೂ ಪರಿಸರ ಜಾಗೃತಿ ಟ್ರಸ್ಟ್ ಉಪಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ ಕೆರೆಯ ಇತಿಹಾಸದ ಬಗ್ಗೆ ವಿವರ ನೀಡಿ, ಆಚರಣೆಗಳು ಕೇವಲ ಆಚರಣೆಗಷ್ಟೆ ಸೀಮಿತವಾಗದೆ ಜೀವನದ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾದ ಜಲ ಸಂರಕ್ಷಣೆ, ಜಲ ರಕ್ಷಣೆಗೆ ಪೂರಕವಾದ ಅರಣ್ಯ ರಕ್ಷಣೆಗೆ ಎಲ್ಲರೂ ಮುಂದಾಗಬೇಕು ಎಂದರು.
ಹಿರಿಯ ವಕೀಲ ನಾಗಪ್ಪ ಮಾತನಾಡಿ, ಜೀವ ಜಲದ ರಕ್ಷಣೆಗೆ ಮುಂದಾಗದಿದ್ದರೆ ಶೀಘ್ರದಲ್ಲೇ ಜಲಕ್ಷಾಮ ಎದುರಿಸ ಬೇಕಾದ ಸ್ಥಿತಿ ಬಂದೆರಗುತ್ತದೆ. ಇರುವ ಅರಣ್ಯ ರಕ್ಷಣೆಯ ಜೊತೆಗೆ ಅವಕಾಶವಿದ್ದಲ್ಲಿ ಗಿಡ ನೆಡಿ ಎಂದರು.