ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ: ಶಿವಾಜಿ ದೊಡ್ಡಬಳ್ಳಾಪುರ

KannadaprabhaNewsNetwork |  
Published : Jun 13, 2024, 12:52 AM IST
ಪರಿಸರದ ಪ್ರಜ್ಞೆಯನ್ನು ಪ್ರತಿಯೊಬ್ಬರಲ್ಲೂ ಮೂಡಿಸಬೇಕಾಗಿದೆ : ಶಿವಾಜಿ | Kannada Prabha

ಸಾರಾಂಶ

ಪ್ರತಿಯೊಬ್ಬರು ನಿಸರ್ಗದತ್ತವಾಗಿರುವ ಗುಡ್ಡ, ಬೆಟ್ಟ, ಮರ-ಗಿಡಗಳನ್ನು ಸಂರಕ್ಷಿಸಬೇಕು. ಆಯಕಟ್ಟಿನ ತಾಣಗಳಲ್ಲಿ ಹೆಚ್ಚು ಗಿಡಗಳನ್ನು ನೆಡುವ ಮೂಲಕ ಪರಿಸರದ ಪ್ರಜ್ಞೆ ಮೂಡಿಸಬೇಕು ಎಂದು ಪರ್ಯಾವರಣ ಸಂರಕ್ಷಣಾ ಗತಿ ವಿಧಿ ಪ್ರಾಂತ್ಯ ಸಂಯೋಜಕ ಶಿವಾಜಿ ದೊಡ್ಡಬಳ್ಳಾಪುರ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಪ್ರತಿಯೊಬ್ಬರು ನಿಸರ್ಗದತ್ತವಾಗಿರುವ ಗುಡ್ಡ, ಬೆಟ್ಟ, ಮರ-ಗಿಡಗಳನ್ನು ಸಂರಕ್ಷಿಸಬೇಕು. ಆಯಕಟ್ಟಿನ ತಾಣಗಳಲ್ಲಿ ಹೆಚ್ಚು ಗಿಡಗಳನ್ನು ನೆಡುವ ಮೂಲಕ ಪರಿಸರದ ಪ್ರಜ್ಞೆ ಮೂಡಿಸಬೇಕು ಎಂದು ಪರ್ಯಾವರಣ ಸಂರಕ್ಷಣಾ ಗತಿ ವಿಧಿ ಪ್ರಾಂತ್ಯ ಸಂಯೋಜಕ ಶಿವಾಜಿ ದೊಡ್ಡಬಳ್ಳಾಪುರ ತಿಳಿಸಿದರು.

ನಗರದ ನಿವೃತ್ತ ನೌಕರರ ಸಂಘದಲ್ಲಿ ಮಾಸಿಕ ಸಭೆ ಅಂಗವಾಗಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂದು ಭಾವಿಸಿ ಸಂರಕ್ಷಣೆಗೆ ಮುಂದಾಗಬೇಕಿದೆ. ಹುಟ್ಟುಹಬ್ಬ, ಮದುವೆ ಸಮಾರಂಭಗಳ ನೆನಪಿಗಾಗಿ ಗಿಡಗಳ ವಿತರಿಸಿ ಹಾಗೂ ನೆಟ್ಟು ಪೋಷಣೆ ಮಾಡಬೇಕು ಎಂದರು.ಆರ್ಥಿಕ ಸಮಾಲೋಚಕ ಪಿ. ರೇಖಾ ಮಾತನಾಡಿ, ನಿವೃತ್ತಿಯ ನಂತರವೂ ಪ್ರತಿ ವರ್ಷ ತೆರಿಗೆ ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಕೇಂದ್ರ ಸರ್ಕಾರದ ಹಲವು ವಿಮಾ ಯೋಜನೆಗಳು ಚಾಲ್ತಿಯಲ್ಲಿದ್ದು ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.ಸಂಘದ ಅಧ್ಯಕ್ಷ ಜಿ.ಟಿ. ಶಂಕರೇಗೌಡ ಮಾತನಾಡಿ, ಜಗತ್ತಿನಲ್ಲಿ ಅರ್ಥಪೂರ್ಣವಾಗಿ ಜೀವನ ಸಾಗಿಸುವುದಕ್ಕೆ ಅಗತ್ಯವಾದ ಸಂಪನ್ಮೂಲಗಳನ್ನು ನಾವೆ ಸೃಷ್ಟಿಸಿಕೊಳ್ಳಬೇಕು. ನಮ್ಮ ಪರಿಸರವನ್ನು ನಾವೇ ದುರುಪಯೋಗ ಮಾಡಿಕೊಳ್ಳುವುದನ್ನು ಬಿಡಬೇಕು ಎಂದರು. ಸಿ. ಚನ್ನಬಸವಯ್ಯ, ಶಂಷಾದ್ ಬೇಗಂ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ದಾಸೋಹ ದಾನಿಗಳನ್ನು ಸನ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷ ಕೆ.ಎಂ. ರಾಜಣ್ಣ, ಪ್ರಧಾನ ಕಾರ್ಯದರ್ಶಿ ಗುರುಸ್ವಾಮಿ, ಖಜಾಂಚಿ ಸೋಮಶೇಖರ್, ಸಹಕಾರ ಸಂಘದ ಅಧ್ಯಕ್ಷ ವಿ.ಎನ್. ಮಹದೇವಯ್ಯ, ಸದಸ್ಯರಾದ ನಂ. ಶಿವಗಂಗಪ್ಪ, ವಿಶ್ವನಾಥಯ್ಯ, ಎಚ್.ಜಿ. ನರಸಿಂಹಮೂರ್ತಿ, ಮಲ್ಲಪ್ಪಾಚಾರ್, ಸರ್ವಮಂಗಳಮ್ಮ, ಡಿ.ಎಸ್. ಲೋಕೇಶ್, ಎಚ್.ಎಸ್. ಮಂಜಪ್ಪ, ದಾಸೋಹ ದಾನಿ ಈಚನೂರು ಸತ್ಯನಾರಾಯಣ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನ್ಯಕೋಮಿನವನ ಜತೆ ಮದುವೆ: ಮೊಮ್ಮಗಳ ಶಿಶು ಕೊಂ*ದ ಅಜ್ಜಿ!
ಕಾಳಸಂತೆಯಲ್ಲಿ ಎಲ್ಪಿಜಿ ಸೇಲ್‌ ಮೇಲೆ ನಿಗಾ - ಅಧಿಕಾರಿಗಳಿಗೆ ಸಿಎಸ್‌ ಸೂಚನೆ