ಪರಿಸರ ರಕ್ಷಣೆ ಎಲ್ಲ ನಾಗರಿಕರ ಜವಾಬ್ದಾರಿ: ತೀರ್ಥಕುಮಾರಿ ವೆಂಕಟೇಶ್‌

KannadaprabhaNewsNetwork |  
Published : Jun 06, 2024, 12:32 AM IST
ಬೇಲೂರು  ಫೋಟೋವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಸಿರು ಭೂಮಿ  ಪ್ರತಿಷ್ಠಾನ,ಗ್ರೀನರಿ ಟ್ರಸ್ಟ್ ವತಿಯಿಂದ ಬೇಲೂರಿನ 6 ನೇ ವಾರ್ಡ್ನನ ಉದ್ಯಾನವನದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. | Kannada Prabha

ಸಾರಾಂಶ

ಪರಿಸರ ರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕರ ಜವಬ್ದಾರಿಯಾಗಿದ್ದು, ಕೇವಲ ಗಿಡ ನೆಟ್ಟು ಹೋಗುವುದಲ್ಲದೆ ಅದನ್ನು ಪೋಷಣೆ ಮಾಡುವ ಕೆಲಸ ಮಾಡಬೇಕು ಎಂದು ಹಸಿರು ಭೂಮಿ ಪ್ರತಿಷ್ಠಾನದ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಕರೆನೀಡಿದರು. ಬೇಲೂರಲ್ಲಿ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಸಿರು ಭೂಮಿ ಪ್ರತಿಷ್ಠಾನದ ಅಧ್ಯಕ್ಷೆ । ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಬೇಲೂರು

‘ನಮ್ಮ ಭೂಮಿ ನಮ್ಮ ಭವಿಷ್ಯ’ ಎಂಬ ವೇದವಾಖ್ಯದೊಂದಿಗೆ ಪರಿಸರ ರಕ್ಷಣೆ ಮಾಡುವುದು ಪ್ರತಿಯೊಬ್ಬರ ನಾಗರೀಕರ ಜವಬ್ದಾರಿಯಾಗಿದ್ದು, ಕೇವಲ ಗಿಡ ನೆಟ್ಟು ಹೋಗುವುದಲ್ಲದೆ ಅದನ್ನು ಪೋಷಣೆ ಮಾಡುವ ಕೆಲಸ ಮಾಡಬೇಕು ಎಂದು ಹಸಿರು ಭೂಮಿ ಪ್ರತಿಷ್ಠಾನದ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಕರೆನೀಡಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಸಿರು ಭೂಮಿ ಪ್ರತಿಷ್ಠಾನ, ಗ್ರೀನರಿ ಟ್ರಸ್ಟ್ ವತಿಯಿಂದ ಬೇಲೂರಿನ 6ನೇ ವಾರ್ಡ್‌ನ ಉದ್ಯಾನದಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿ, ‘ಪ್ರತಿವರ್ಷದಂತೆ ಈ ವರ್ಷವೂ ಕೂಡ ನಮ್ಮ ಹಸಿರು ಭೂಮಿ ಪ್ರತಿಷ್ಠಾನ ಹಾಗೂ ಗ್ರೀನರಿ ಟ್ರಸ್ಟ್ ಸಹಯೋಗದೊಂದಿಗೆ ಇಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸುತ್ತಿದ್ದು ಇದರ ಪ್ರಮುಖ ಉದ್ದೇಶ ‘ನಮ್ಮ ಭೂಮಿ ನಮ್ಮ ಭವಿಷ್ಯ’ ಎಂಬ ವೇದವಾಖ್ಯದೊಂದಿರೆ ಪರಿಸರ ರಕ್ಷಣೆ ಮಾಡುವುದು ಪ್ರತಿಯೊಬ್ಬರ ನಾಗರೀಕರ ಜವಬ್ದಾರಿಯಾಗಿದ್ದು, ಕೇವಲ ಗಿಡ ನೆಟ್ಟು ಹೋಗುವುದಲ್ಲದೆ ಅದನ್ನು ಪೋಷಣೆ ಮಾಡುವ ಕೆಲಸ ಮಾಡಬೇಕು. ಮನೆಯಲ್ಲಿ ಹಾಗೂ ಶಾಲೆಗಳಲ್ಲಿ ಮಕ್ಕಳಿಗೆ ಪರಿಸರದ ಬಗ್ಗೆ ಅರಿವು ಮೂಡಿಸಬೇಕು’ ಎಂದು ಸಲಹೆ ನೀಡಿದರು.

‘ಮನುಷ್ಯ ತನ್ನ ದುರಾಸೆಗಾಗಿ ಮರಗಿಡಗಳನ್ನು ಕಡಿದು ಪರಿಸರ ನಾಶಮಾಡುತ್ತಿದ್ದ ಇದರಿಂದ ತಾಪಮಾನ ಹೆಚ್ಚಾಗಿ ಹವಾಮಾನ ವೈಪರೀತ್ಯ ಏರುಪೇರಾಗುತ್ತಿದ್ದು ಅಕಾಲಿಕ ಮಳೆಗಳು ಬಂದು ಜನಜೀವನ ಅಸ್ತವ್ಯಸ್ತ ಆಗುತ್ತಿದೆ. ಮಾನವನ ಆರೋಗ್ಯದ ಮೇಲೆ ಕೆಟ್ಟ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ನಾವು ಮರಗಿಡಗಳನ್ನು ಬೆಳೆಸಿ ಉತ್ತಮ ಪರಿಸರ ನೀಡಬೇಕು’ ಎಂದು ತಿಳಿಸಿದರು.

ಗ್ರೀನರಿ ಟ್ರಸ್ಟ್ ಅಧ್ಯಕ್ಷ ವಿಶ್ವ ಮಾತನಾಡಿ, ಪರಿಸರ ದಿನಾಚರಣೆ ಕೇವಲ ಒಂದು ದಿನದ ಆಚರಣೆಯಾಗದೆ ವರ್ಷಪೂರ್ತಿ ಆಚರಿಸಬೇಕು. ಪರಿಸರ ಸಂರಕ್ಷಣೆ ಎಲ್ಲರ ಹೊಣೆಯಾಗಿದ್ದು ಅದನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕು. ಮುಂದಿನ ಪೀಳಿಗೆಗೂ ಮಾದರಿಯಾಗಬೇಕು ಎಂದು ತಿಳಿಸಿದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಚಂದ್ರಮೌಳಿ ಮಾತನಾಡಿ, ನಾಗರಿಕತೆ ಮುಂದುವರಿದಂತೆ ಮಾನವನ ಸ್ವಾರ್ಥಕ್ಕೆ ಗಿಡ ಮರ ಕಾಡುಗಳೆಲ್ಲಾ ನಾಶವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿಗಳು ಹಸಿವಿನಿಂದ ನಗರಕ್ಕೆ ಲಗ್ಗೆ ಇಡುತ್ತಿರುವುದು ಕಂಡಬರುತ್ತಿದೆ. ಹೀಗಾದರೆ ಮುಂದೆ ಪ್ರಾಣಿಗಳನ್ನು ಕೇವಲ ಮೃಗಾಲಯದಲ್ಲಿ ಮಾತ್ರ ಕಾಣಲು ಸಾಧ್ಯ. ಈಗಿಂದಲೇ ಜಾಗೃತರಾಗಿ ಗಿಡಗಳನ್ನು ನೆಟ್ಟರೆ ಮುಂದೆ ಪರಿಸರ ಉಳಿಸಲು ಸಾಧ್ಯ’ ಎಂದರು.

ದೇಶಭಕ್ತ ಬಳಗದ ಅಧ್ಯಕ್ಷ ಡಾ.ಸಂತೋಷ್, ಪುರಸಭೆ ಸದಸ್ಯೆ ಸೌಮ್ಯ ಸುಬ್ರಹ್ಮಣ್ಯ, ಹಸಿರು ಭೂಮಿ ಪ್ರತಿಷ್ಠಾನ ಸದಸ್ಯೆ ಸೌಭಾಗ್ಯ ಅಂತೋಣಿ, ಲಾವಣ್ಯ ನಾಗರಾಜ್, ನರಸಿಂಹಸ್ವಾಮಿ, ಇತರರು ಹಾಜರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ