ಡಿ.೫-೬ರಂದು ಮಹಾಕಾವ್ಯಗಳ ಗಮಕ, ಸಂಗೀತ ಸಂಭ್ರಮ

KannadaprabhaNewsNetwork |  
Published : Dec 03, 2025, 01:15 AM IST
ಡಿ.೫-೬ರಂದು ಮಹಾಕಾವ್ಯಗಳ ಗಮಕ, ಸಂಗೀತ ಸಂಭ್ರಮ | Kannada Prabha

ಸಾರಾಂಶ

ಮಹಾ ಕಾವ್ಯಗಳ ಮಹತ್ವದ ಕುರಿತು ಇಂದಿನ ಯುವಕರಿಗೆ, ಸಾಹಿತ್ಯಾಸಕ್ತರಿಗೆ, ವಿದ್ಯಾರ್ಥಿಗಳಿಗೆ ಜಾಗೃತಿ, ಅರಿವು ಮೂಡಿಸುವ ವಿಶಿಷ್ಟ ಗಮಕ ಸಂಗೀತ ಕಾರ್ಯಕ್ರಮ ಡಿ.೫ ಮತ್ತು ೬ರಂದು ಮಂಡ್ಯ ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಹಾ ಕಾವ್ಯಗಳ ಮಹತ್ವದ ಕುರಿತು ಇಂದಿನ ಯುವಕರಿಗೆ, ಸಾಹಿತ್ಯಾಸಕ್ತರಿಗೆ, ವಿದ್ಯಾರ್ಥಿಗಳಿಗೆ ಜಾಗೃತಿ, ಅರಿವು ಮೂಡಿಸುವ ವಿಶಿಷ್ಟ ಗಮಕ ಸಂಗೀತ ಕಾರ್ಯಕ್ರಮ ಡಿ.೫ ಮತ್ತು ೬ರಂದು ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಲಾಗಿದೆ ಎಂದು ಶ್ರೀರಂಜಿನಿ ಕಲಾವೇದಿಕೆಯ ಸಿ.ಪಿ.ವಿದ್ಯಾಶಂಕರ್ ಹೇಳಿದರು.

ಆದಿಕವಿ ಪಂಪನಿಂದ ಆರಂಭವಾಗಿ ರನ್ನ, ಜನ್ನ, ರತ್ನಾಕರವರ್ಣಿ, ಕುಮಾರವ್ಯಾಸ, ಲಕ್ಷ್ಮೀಶ, ಕುವೆಂಪು, ಡಿವಿಜಿ, ವಿ.ಕೃ.ಗೋಕಾಕ್ ಜಿಲ್ಲೆಯ ಶ್ರೇಷ್ಠ ಕವಗಳಾದ ಪುತಿನ, ಸುಜನಾ, ಡಾ.ಲತಾ ರಾಜಶೇಖರ್ ವಿರಚಿತ ಬುದ್ಧ ದರ್ಶನ ಕಾವ್ಯಗಳನ್ನು ಮಂಡ್ಯ, ಮೈಸೂರು, ಹಾಸನ, ತುಮಕೂರು, ಬೆಂಗಳೂರು ಜಿಲ್ಲೆಗಳ ಪ್ರಖ್ಯಾತ ಗಮಕಿಗಳು ಮಂಡ್ಯದ ಶಾಲಾ ವಿದ್ಯಾರ್ಥಿಗಳಿಗೆ, ಯುವಜನರಿಗೆ ಪರಿಚಯ ಮಾಡಿಕೊಡಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮವನ್ನು ಶಾಸಕ ಪಿ.ರವಿಕುಮಾರ್ ಉದ್ಘಾಟಿಸುವರು, ಅಧ್ಯಕ್ಷತೆಯನ್ನು ಮೈಸೂರು ಜಿಲ್ಲಾ ಸುಗಮ ಸಂಗೀತ ಪರಿಷತ್ ಅಧ್ಯಕ್ಷ ಡಾ.ವಿ.ನಾಗರಾಜ್ ಭೈರಿ ಅಧ್ಯಕ್ಷತೆ ವಹಿಸುವರು. ಕಾವ್ಯಗಳ ಕುರಿತ ಅವಲೋಕನವನ್ನು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ನಡೆಸಿಕೊಡುವರು ಎಂದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ಸಂಭ್ರಮ ಫಾರ್ಮಸಿ ಕಾಲೇಜಿನ ಅಧ್ಯಕ್ಷ ಸಿ.ಸ್ವಾಮಿ, ಪಿಎಲ್‌ಡಿ ಬ್ಯಾಂಕ್ ಮಾಜಿ ನಿರ್ದೇಶಕ ಶಿವಲಿಂಗೇಗೌಡ, ಜೈ ಕರ್ನಾಟಕ ಪರಿಷತ್ ಅಧ್ಯಕ್ಷ ಎಸ್.ನಾರಾಯಣ್, ಪುತಿನ ಟ್ರಸ್ಟ್ ಸದಸ್ಯ ಡಾ.ನಂದೀಶ್ ಭಾಗವಹಿಸುವರು. ಡಿ.೬ರಂದು ಸಮಾರೋಪ ಸಮಾರಂಭ ನಡೆಯಲಿದೆ ಎಂದರು.

ಗೋಷ್ಠಿಯಲ್ಲಿ ಪ್ರೊ.ಎಸ್.ಬಿ.ಶಂಕರೇಗೌಡ, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಎಂ.ವಿನಯ್‌ಕುಮಾರ್, ನಾರಾಯಣ್ ಇದ್ದರು.

ಡಿ.೬ರಂದು ಬಹು ಜನಾಂದೋಲನ ಸಮಾರಂಭ

ಕನ್ನಡಪ್ರಭ ವಾರ್ತೆ ಮಂಡ್ಯ

ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದಿಂದ ಬಹು ಜನಾಂದೋಲನ ಸಮಾರಂಭ ಡಿ.೧೨ರಂದು ಬೆಳಗ್ಗೆ ೧೧ ಗಂಟೆಗೆ ನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ದಸಂಸ ರಾಜ್ಯ ಉಪಾಧ್ಯಕ್ಷ ವೆಂಕಟಗಿರಿಯಯ್ಯ ಹೇಳಿದರು. ಉದ್ಘಾಟನೆಯನ್ನು ವೆಂಕಟಗಿರಿಯಯ್ಯ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಂ.ಅನಿಲ್‌ಕುಮಾರ್ ವಹಿಸುವರು. ಜಿಲ್ಲಾ ಉಪಾಧ್ಯಕ್ಷ ಬಿ.ಆನಂದ್, ವೈ.ಥಾಮಸ್ ಬೆಂಜಮಿನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜು ಪುಷ್ಪಾರ್ಚನೆ ಮಾಡುವರು ಮುಖ್ಯ ಅತಿಥಿಗಳಾಗಿ ಸಂಪನ್ಮೂಲ ವ್ಯಕ್ತಿ ಶರಾವತಿ, ಸುಷ್ಮಿತಾ, ಮೀನಾಕ್ಷಿ ಇತರರು ಪಾಲ್ಗೊಳ್ಳುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

10 ಪ್ಯಾರಾದಲ್ಲಿ ಕೇಂದ್ರ ವಿರುದ್ಧ ಟೀಕಾ ಪ್ರಹಾರ
ಬೇಡಿಕೆಗೆ ತಕ್ಕಷ್ಟು ಬರುತ್ತಿಲ್ಲ ಮೈಸೂರು ರೇಷ್ಮೆ ಸೀರೆ