ಜಾತಿ ವ್ಯವಸ್ಥೆ ನಿರ್ಮೂಲನೆಯಿಂದ ಸಮಾನತೆ: ಡಾ. ನಾಗಲಕ್ಷ್ಮೀ

KannadaprabhaNewsNetwork |  
Published : May 26, 2026, 02:45 AM IST
ಜೈ ಭೀಮ್‌ | Kannada Prabha

ಸಾರಾಂಶ

“ಜಾತಿ ವ್ಯವಸ್ಥೆ ನಿರ್ಮೂಲನೆಯಾದಾಗ ಮಾತ್ರ ನಿಜವಾದ ಸಮಾನತೆ ಸಾಧ್ಯ. ಇಡೀ ಜಗತ್ತಿನಲ್ಲಿ ಒಂದೇ ಮಾನವ ಜಾತಿ ಇದೆ,” ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಹೇಳಿದರು.

ಕಾರ್ಕಳ: “ಜಾತಿ ವ್ಯವಸ್ಥೆ ನಿರ್ಮೂಲನೆಯಾದಾಗ ಮಾತ್ರ ನಿಜವಾದ ಸಮಾನತೆ ಸಾಧ್ಯ. ಇಡೀ ಜಗತ್ತಿನಲ್ಲಿ ಒಂದೇ ಮಾನವ ಜಾತಿ ಇದೆ,” ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಹೇಳಿದರು. ಭಾನುವಾರ ನಗರದ ಬಂಡಿಮಠದಲ್ಲಿ ನಡೆದ ಕರ್ನಾಟಕ ಜೈ ಭೀಮ್ ಯುವಸೇನಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಹೆಣ್ಣು ಮಕ್ಕಳು ಆತ್ಮವಿಶ್ವಾಸದಿಂದ ಬದುಕಿನಲ್ಲಿ ಸಾಧನೆ ಮಾಡಬೇಕು ಎಂದು ಕರೆ ನೀಡಿದ ಅವರು, ಅಂತರ್ಜಾತಿ ವಿವಾಹಗಳ ಮೂಲಕ ಜಾತಿ ಮುಕ್ತ ಸಮಾಜ ನಿರ್ಮಾಣ ಸಾಧ್ಯ. ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಮಹಿಳೆಯರು ಧೈರ್ಯವಾಗಿ ಧ್ವನಿ ಎತ್ತಬೇಕು ಎಂದು ಹೇಳಿದರು.

ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗಳನ್ನು ಆಲಿಸಿ, ಸರ್ಕಾರದ ಯೋಜನೆಗಳು ಹಾಗೂ ದೌರ್ಜನ್ಯಕ್ಕೆ ದೂರು ನೀಡುವ ವಿಧಾನಗಳ ಕುರಿತು ಅಧಿಕಾರಿಗಳ ಮೂಲಕ ಮಾಹಿತಿ ನೀಡಲಾಯಿತು.

ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಮಾತನಾಡಿ, “ಸಮಾನತೆ ಪಡೆದುಕೊಳ್ಳಬೇಕಾದ ಹಕ್ಕು,” ಎಂದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಪ್ರದೀಪ್ ಕುಮಾರ್, ಜಾನ್ ಆರ್. ಡಿಸೋಜಾ, ಸತೀಶ್ ಆರ್. ಮೂಡುಬಿದಿರೆ, ಶ್ರೀಲತಾ, ಸಮದ್ ಖಾನ್, ಉಷಾ, ತಿಮ್ಮಪ್ಪ, ಪ್ರತಿಮಾ ರಾಣೆ, ಕುಮಾರ್ ನಾಯ್ಕ್, ಶಾಂತಿ ಉಪಸ್ಥಿತರಿದ್ದರು. ಎಸ್.ಪಿ. ಅಶೋಕ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಲಕಿ ಶ್ರಾವ್ಯ ಅವರನ್ನು ಧೈರ್ಯಕ್ಕಾಗಿ ಸನ್ಮಾನಿಸಲಾಯಿತು. ನಿವೃತ್ತ ಯೋಧ ಆನಂದ್ ಕಬ್ಬಿನಾಲೆ, ಕ್ರೀಡಾ ಸಾಧಕರಾದ ಸಾರ್ವಿಕ್ ಹಾಗೂ ಧನ್ಯಶ್ರೀ ಅವರನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ಬ್ಯಾಗ್, ಛತ್ರಿ ಹಾಗೂ ಪುಸ್ತಕಗಳನ್ನು ವಿತರಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಾಣಿ ಸ್ವಾಗತಿಸಿದರು. ಸವಿತಾ ವರದಿ ವಾಚಿಸಿದರು. ನಳಿನಿ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೌಶಲ್ಯಗಳ ಸಮರ್ಪಕ ಬಳಕೆ ಮಾಡಿಕೊಳ್ಳಿ: ಡಾ.ಮಾರುತಿ ಪಾಟೋಳಿ
ಬೈಕ್‌ ಆಟೋ ಡಿಕ್ಕಿ, ಒಂದೇ ಕುಟುಂಬದ ಮೂವರ ಸಾವು