ರಾಣಿಬೆನ್ನೂರು: ಇಂದಿನ ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವ ಮಾದಕ ವ್ಯಸನ ನಿರ್ಮೂಲನೆಯಾಗಬೇಕು ಎಂದು 2ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಮಂಜುನಾಥ ಎಂ. ಹೇಳಿದರು.
ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ಮಾದಕ ವಸ್ತುಗಳ ವ್ಯಸನಗಳಿಗೆ ಬಲಿಯಾಗದೆ ಸ್ವಯಂ ನಿಯಂತ್ರಣ ವಹಿಸಿಕೊಂಡು ಈ ದುಶ್ಚಟದಿಂದ ಮುಕ್ತರಾಗಬೇಕು ಎಂದರು. ತಾಲೂಕು ಆರೋಗ್ಯಾಧಿಕಾರಿ ಡಾ. ರಾಜೇಶ್ವರಿ ಕದರಮಂಡಲಗಿ, ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿ ದೇವೇಂದ್ರಪ್ಪ ಡಿ.ಎಸ್., ಹಿರಿಯ ಆರೋಗ್ಯ ನೀರಿಕ್ಷಣಾಧಿಕಾರಿ ನಾಗರಾಜ ಕುಡಪಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕಾಲೇಜಿನ ಪ್ರಾ. ಪ್ರಕಾಶ ಬಸಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಮಾದಕ ವ್ಯಸನ ತಡೆ ಮತ್ತು ಕಾನೂನು ಕ್ರಮಗಳ ಕುರಿತು ನ್ಯಾಯವಾದಿ ವಿಠ್ಠಲ ಪುಟಾಣಿಕರ ಉಪನ್ಯಾಸ ನೀಡಿದರು. ಶ್ರೀಕಾಂತ ಕುಂಚೂರ, ಬೆಣ್ಣಿ, ಗಗನ, ಶರತಕುಮಾರ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಪ್ಯಾನಲ್ ನ್ಯಾಯವಾದಿಗಳು ಹಾಜರಿದ್ದರು. ಕಾರ್ಯಕ್ರಮದ ಅಂಗವಾಗಿ ನಗರದಲ್ಲಿ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ಜರುಗಿತು.