ಕಾರಟಗಿ ಪುರಸಭೆ ಸ್ಥಾಯಿ ಸಮಿತಿಗೆ ಈಶಪ್ಪ ಅಧ್ಯಕ್ಷ

KannadaprabhaNewsNetwork |  
Published : Dec 24, 2024, 12:49 AM IST
ಕಾರಟಗಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಎಚ್.ಈಶಪ್ಪ ಅಮರಪ್ಪ ಅವರನ್ನುಸದಸ್ಯರು  ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಇಲ್ಲಿನ ಪುರಸಭೆ ಆಡಳಿತ ಮಂಡಳಿ ಸ್ಥಾಯಿ ಸಮಿತಿಗೆ ಅಧ್ಯಕ್ಷರಾಗಿ ೧೬ನೇ ವಾರ್ಡಿನ ಸದಸ್ಯ ಎಚ್.ಈಶಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

7 ಸದಸ್ಯರ ಅವಿರೋಧ ಆಯ್ಕೆಕನ್ನಡಪ್ರಭ ವಾರ್ತೆ ಕಾರಟಗಿ

ಇಲ್ಲಿನ ಪುರಸಭೆ ಆಡಳಿತ ಮಂಡಳಿ ಸ್ಥಾಯಿ ಸಮಿತಿಗೆ ಅಧ್ಯಕ್ಷರಾಗಿ ೧೬ನೇ ವಾರ್ಡಿನ ಸದಸ್ಯ ಎಚ್.ಈಶಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕಚೇರಿ ಸಭಾಂಗಣದಲ್ಲಿ ಸ್ಥಾಯಿ ಸಮಿತಿ ರಚನೆ ಹಾಗೂ ಸಮಿತಿಗೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸೋಮವಾರ ನಡೆಯಿತು. ಎಲ್ಲ ಸದಸ್ಯರು, ಅಧ್ಯಕ್ಷರನ್ನು ಸಹ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಪುರಸಭೆಯ ೨೩ ಸದಸ್ಯರು ಸೇರಿ ಸ್ಥಾಯಿ ಸಮಿತಿಗೆ ಒಟ್ಟು ೭ ಜನರನ್ನು ಆಯ್ಕೆ ಮಾಡಿದರು. ಆ ಪೈಕಿ ಸದಸ್ಯರಾಗಿ ದೊಡ್ಡಬಸಪ್ಪ ಬೂದಿ, ಕೆ.ಶ್ರೀನಿವಾಸ್ ರಾವ್, ಸುಜಾತ ನಾಗರಾಜ, ಎಂ.ಆನಂದ, ಕೆ.ಎಚ್. ಸಂಗನಗೌಡ, ರಮೇಶ ತಿಪ್ಪಣ್ಣ ನಾಯಕ್ ಮತ್ತು ಎಚ್. ಈಶಪ್ಪ ಅಮರಪ್ಪ ಸದಸ್ಯರಾಗಿ ಆಯ್ಕೆಯಾದರು.

ಬಳಿಕ ಸ್ಥಾಯಿ ಸಮಿತಿ ಸದಸ್ಯರೆಲ್ಲ ಸೇರಿ ಎಚ್.ಈಶಪ್ಪ ಅವರನ್ನು ಅವಿರೋಧವಾಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು. ಈಶಪ್ಪ ಎರಡನೇ ಬಾರಿಗೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ನಂತರ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಎಚ್.ಈಶಪ್ಪ ಮಾತನಾಡಿ, ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಶ್ರಮಿಸುತ್ತೇವೆ. ಮುಖ್ಯವಾಗಿ ಜನರ ಮೂಲ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಹೇಳಿದರು.

ಪುರಸಭೆ ಅಧ್ಯಕ್ಷೆ ರೇಖಾ ಚಂದ್ರಶೇಖರ ಆನೆಹೊಸೂರು, ಉಪಾಧ್ಯಕ್ಷೆ ದೇವಮ್ಮ ಗಂಗಪ್ಪ, ಮುಖ್ಯಾಧಿಕಾರಿ ಸುರೇಶ್ ಶೆಟ್ಟರ್, ಸದಸ್ಯರಾದ ಹಿರೆಬಸಪ್ಪ ಸಜ್ಜನ್, ಸೌಮ್ಯ ಮಹೇಶ ಕಂದಗಲ್, ಅರುಣಾದೇವಿ ರಾಜು ದೇವಿಕ್ಯಾಂಪ್, ಕೆ. ಸೋಮಶೇಖರ, ಫಕೀರಪ್ಪ ದೊಡ್ಡಮನಿ, ರಮೇಶ್ ನಾಯಕ, ಸುರೇಶ್ ಭಜಂತ್ರಿ, ಹುಸೇನ್‌ಬಿ, ಸುಜಾತಾ ನಾಗರಾಜ್, ಲಕ್ಷ್ಮೀದೇವಿ ಸೇರಿ ಇತರರಿದ್ದರು.

ನಂತರ ಪುರಸಭೆಯಿಂದ ಸ್ಥಾಯಿ ಸಮಿತಿ ಸದಸ್ಯರನ್ನು ಸನ್ಮಾನಿಸಲಾಯಿತು. ಈ ವೇಳೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ನಾಗರಾಜ ಅರಳಿ, ಉದ್ಯಮಿಗಳಾದ ವಾಸುದೇವ ಶ್ರೇಷ್ಠಿ, ಶರಣಪ್ಪ ಯಾಡ್ಕಿ, ರಾಜು ದೇವಿಕ್ಯಾಂಪ್ ಈಶಪ್ಪ ಅವರನ್ನು ಸನ್ಮಾನಿಸಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ