ಮಣಿಪಾಲ ಕಸ್ತೂರ್ಬಾ, ಸಹ ಆಸ್ಪತ್ರೆಗಳಲ್ಲಿ ಇಎಸ್‌ಐಎಸ್ ಸೇವೆ ಲಭ್ಯ

KannadaprabhaNewsNetwork |  
Published : Feb 27, 2026, 03:00 AM IST
ಪೊಟೋ೨ಸಿಪಿಟಿ೧: ತಾಲೂಕಿನ ಹೊಂಗನೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ವಿಜಯನಗರದ ಅರಸು ಸಮುದಾಯ ಭವನದ ಉದ್ಘಾಟನಾ ಸಮಾರಂಭದಲ್ಲಿ ಸಂಸದ ಡಾ.ಸಿಎನ್.ಮಂಜುನಾಥ್ ಮಾತನಾಡಿದರು. | Kannada Prabha

ಸಾರಾಂಶ

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು ಉದ್ಯೋಗಿಗಳ ರಾಜ್ಯ ವಿಮಾ ಯೋಜನೆ (ಇಎಸ್‌ಐಎಸ್) ಅಡಿಯಲ್ಲಿ ದ್ವಿತೀಯ ಹಂತದ ಚಿಕಿತ್ಸಾ ಸೇವೆಗಳನ್ನು ನೀಡುವ ಒಪ್ಪಂದ (ಎಂಓಯು) ನವೀಕರಿಸಿದೆ.

ಮಣಿಪಾಲ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು ಉದ್ಯೋಗಿಗಳ ರಾಜ್ಯ ವಿಮಾ ಯೋಜನೆ (ಇಎಸ್‌ಐಎಸ್) ಅಡಿಯಲ್ಲಿ ದ್ವಿತೀಯ ಹಂತದ ಚಿಕಿತ್ಸಾ ಸೇವೆಗಳನ್ನು ನೀಡುವ ಒಪ್ಪಂದ (ಎಂಓಯು) ನವೀಕರಿಸಿದೆ. ಈ ನವೀಕರಣದೊಂದಿಗೆ ಇಎಸ್‌ಐಎಸ್ ಫಲಾನುಭವಿಗಳು ಫೆ.25ರಿಂದ ನಗದು ರಹಿತ ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದು ಆಸ್ಪತ್ರೆ ಪ್ರಕಟಣೆ ತಿಳಿಸಿದೆ.

ಕೆಲವು ಆಡಳಿತಾತ್ಮಕ ಕಾರಣಗಳಿಂದ ಒಪ್ಪಂದದ ನವೀಕರಣ ತಾತ್ಕಾಲಿಕವಾಗಿ ಬಾಕಿಯಾಗಿತ್ತು. ಇದೀಗ ಸಂಬಂಧಿತ ಪ್ರಾಧಿಕಾರಗಳಿಂದ ಅನುಮೋದನೆ ದೊರೆತಿರುವುದರಿಂದ ಸೇವೆಗಳು ಪುನರಾರಂಭಗೊಂಡಿವೆ. ಇಎಸ್‌ಐಎಸ್ ಫಲಾನುಭವಿಗಳು ತಮ್ಮ ಸಂಬಂಧಿತ ಆಸ್ಪತ್ರೆಗಳಿಂದ ಶಿಫಾರಸು (ರೆಫರಲ್) ಪತ್ರವನ್ನು ಪಡೆದು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ, ಕಾರ್ಕಳದ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ ಮತ್ತು ಕಟೀಲಿನ ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆಗಳಲ್ಲಿ ಈ ಸೌಲಭ್ಯವನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ, ರೆಫರಲ್ ದಾಖಲೆಗಳನ್ನು ಪಡೆಯಲು ಮತ್ತು ದಾಖಲಾತಿ ಸಂಬಂಧಿತ ಹೆಚ್ಚಿನ ಸಹಾಯಕ್ಕಾಗಿ ಫಲಾನುಭವಿಗಳು ತಮ್ಮ ಹತ್ತಿರುವ ಆಸ್ಪತ್ರೆಗಳನ್ನು ಸಂಪರ್ಕಿಸಬೇಕು ಎಂದು ತಿಳಿಸಲಾಗಿದೆ,

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೆರಿಯಶಾಂತಿ, ಅಡ್ಡಹೊಳೆಯಲ್ಲಿ ಆನೆ ದಾಟು ಕಾಮಗಾರಿ ಪೂರ್ಣ
ಶಿರೋಮಣಿ ಪ್ರಶಸ್ತಿಯಿಂದ ಸಿದ್ದಕಟ್ಟೆ ಸಹಕಾರ ಸಂಘದ ಹೆಸರು ರಾಜ್ಯಾದ್ಯಂತ ಪಸರಿಸಿದೆ: ಸಂದೇಶ್ ಶೆಟ್ಟಿ