ಮಹಿಳೆಯರ ಯೋಗಕ್ಷೇಮಕ್ಕೆ ಅತ್ಯಗತ್ಯ: ಸುಗಂಧ

KannadaprabhaNewsNetwork |  
Published : May 30, 2026, 04:00 AM IST
ಅಗತ್ಯ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಯಮಕನಮರಡಿ: ಋತುಸ್ರಾವ ಎನ್ನುವುದು ಪ್ರತಿಯೊಬ್ಬ ಮಹಿಳೆ ಮತ್ತು ಹದಿಹರೆಯದ ಹುಡುಗಿಯರ ಆರೋಗ್ಯ ಘನತೆ ಮತ್ತು ಸುರಕ್ಷತೆಯ ಮೂಲಭೂತ ಅವಶ್ಯಕತೆಯಾಗಿದೆ. ಮುಟ್ಟಿನ ದಿನಗಳಲ್ಲಿ ಸೂಕ್ತ ಸ್ವಚ್ಚತೆ ಕಾಪಾಡಿಕೊಳ್ಳದಿದ್ದರೆ ಬ್ಯಾಕ್ಟಿರಿಯಾಗಳ ಉತ್ಪತ್ತಿ ಹೆಚ್ಚಾಗಿ ಗಂಭೀರ ಆರೋಗ್ಯ ಸಮಸ್ಯೆಗಳು ಹರಡುವ ಸಾಧ್ಯತೆ ಇದೆ ಎಂದು ಹಿಡಕಲ್ ಡ್ಯಾಂ ನ ಶಕ್ತಿ ಸದನದ ಸಲಹಾಗಾರ್ತಿ ಸುಗಂಧಾ ಅಳ್ಳಟ್ಟಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಯಮಕನಮರಡಿ: ಋತುಸ್ರಾವ ಎನ್ನುವುದು ಪ್ರತಿಯೊಬ್ಬ ಮಹಿಳೆ ಮತ್ತು ಹದಿಹರೆಯದ ಹುಡುಗಿಯರ ಆರೋಗ್ಯ ಘನತೆ ಮತ್ತು ಸುರಕ್ಷತೆಯ ಮೂಲಭೂತ ಅವಶ್ಯಕತೆಯಾಗಿದೆ. ಮುಟ್ಟಿನ ದಿನಗಳಲ್ಲಿ ಸೂಕ್ತ ಸ್ವಚ್ಚತೆ ಕಾಪಾಡಿಕೊಳ್ಳದಿದ್ದರೆ ಬ್ಯಾಕ್ಟಿರಿಯಾಗಳ ಉತ್ಪತ್ತಿ ಹೆಚ್ಚಾಗಿ ಗಂಭೀರ ಆರೋಗ್ಯ ಸಮಸ್ಯೆಗಳು ಹರಡುವ ಸಾಧ್ಯತೆ ಇದೆ ಎಂದು ಹಿಡಕಲ್ ಡ್ಯಾಂ ನ ಶಕ್ತಿ ಸದನದ ಸಲಹಾಗಾರ್ತಿ ಸುಗಂಧಾ ಅಳ್ಳಟ್ಟಿ ತಿಳಿಸಿದರು.ಮಹಿಳಾ ಕಲ್ಯಾಣ ಸಂಸ್ಥೆಯ ಶಕ್ತಿ ಸದನ ಹಾಗು ಗ್ರಾಮ ಪಂಚಾಯತಿ ಹೋಸಪೇಟಯ ಸಂಯುಕ್ತ ಆಶ್ರಯದಲ್ಲಿ ಋತು ನೈರ್ಮಲ್ಯ ದಿನಾಚರಣೆಯ ಅಂಗವಾಗಿ ಸಂಜೀವಿನಿ ಒಕ್ಕೂಟದ ಮಹಿಳೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗು ಶಾಲಾ ಶಿಕ್ಷಕರಿಗೆ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಋತು ಚಕ್ರದ ಅವಧಿಯಲ್ಲಿ ದೈಹಿಕ ಹಾಗು ಮಾನಸಿಕ ಆರೋಗ್ಯವನ್ನು ಉತ್ತಮವಾಗಿಡಬೇಕು ಸಮತೋಲಿತ ಆಹಾರ ಪದ್ಧತಿಯನ್ನು ಅನುಸರಿಸಿ ಸದೃಢರಾಗಿರಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ನೀಲಕಂಠ ಕುಲಕರ್ಣಿ, ಸ್ವ ಸಹಾಯ ಸಂಘದ ಎಂಬಿಕೆ ಪೂರ್ಣಿಮಾ ಜುಮಾಯಿ, ಮಹಾನಂದಾ ಗೋಕಾರ, ಪವಿತ್ರಾ ಗೋಕಾವಿ ಹಾಗೂ ಮಂದಾಕನಿ ಹಟ್ಟಿ, ಸಂಜೀವಿನಿ ಒಕ್ಕೂಟದ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನಸಂಖ್ಯೆ ಆಧರಿಸಿ ಮೂಲಸೌಕರ್ಯ ಒದಗಿಸಲು ಆದ್ಯತೆ
ಸಿದ್ದು ನ್ಯಾಮಗೌಡ ಸೌಹಾರ್ದ ಬ್ಯಾಂಕ್‌ಗೆ ₹5 ಕೋಟಿ ಲಾಭ