ಮಂಗಳೂರಿನ ಮಂಗಳಾದೇವಿಯ ಜಿಲ್ಲಾ ಆರೋಗ್ಯ ಕೇಂದ್ರ, ಪಶು ವೈದ್ಯಕೀಯ ಆಸ್ಪತ್ರೆಯ ಉದ್ಘಾಟನೆ ಹುಟ್ಟು ಹಾಕಿದ ಶಿಷ್ಟಾಚಾರದ ವಿವಾದ ಮತ್ತೆ ಸೋಮವಾರ ಮಂಗಳೂರಲ್ಲಿ ನಡೆದ ದ.ಕ. ಜಿಲ್ಲಾ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಮುಂದುವರಿಯಿತು. ಸಭೆಯ ಅಧ್ಯಕ್ಷತೆ ವಹಿಸಿದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹಾಗೂ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮಧ್ಯೆ ಬಿರುಸಿನ ಮಾತಿನ ಚಕಮಕಿಗೆ ಸಾಕ್ಷಿಯಾಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರಿನ ಮಂಗಳಾದೇವಿಯ ಜಿಲ್ಲಾ ಆರೋಗ್ಯ ಕೇಂದ್ರ, ಪಶು ವೈದ್ಯಕೀಯ ಆಸ್ಪತ್ರೆಯ ಉದ್ಘಾಟನೆ ಹುಟ್ಟು ಹಾಕಿದ ಶಿಷ್ಟಾಚಾರದ ವಿವಾದ ಮತ್ತೆ ಸೋಮವಾರ ಮಂಗಳೂರಲ್ಲಿ ನಡೆದ ದ.ಕ. ಜಿಲ್ಲಾ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಮುಂದುವರಿಯಿತು. ಸಭೆಯ ಅಧ್ಯಕ್ಷತೆ ವಹಿಸಿದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹಾಗೂ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮಧ್ಯೆ ಬಿರುಸಿನ ಮಾತಿನ ಚಕಮಕಿಗೆ ಸಾಕ್ಷಿಯಾಯಿತು. ''''''''ನನಗೆ ಯಾರೋ ಬಂದು ಆಮಂತ್ರಣ ಪತ್ರ ಕೊಟ್ಟಿದ್ದಾರೆ. ಮೊದಲ ಉದ್ಘಾಟನೆ ಆಮಂತ್ರಣ ಪತ್ರಿಕೆಯಲ್ಲಿ ನಿಮ್ಮ, ಸ್ಪೀಕರ್ ಹಾಗೂ ಎಲ್ಲರ ಫೋಟೊ ಇತ್ತು. ಹಾಗಾಗಿ ಅದು ಅಧಿಕೃತ ಎಂದು ನಾನು ಉದ್ಘಾಟನೆಗೆ ಹೋಗಿದ್ದೆ. ಆದರೆ ಎರಡನೇ ಕಾರ್ಯಕ್ರಮದ ಬಗ್ಗೆ ನನಗೆ ಅಧಿಕೃತ ಆಮಂತ್ರಣ ನೀಡಿಲ್ಲ. ಆ ಕಾರ್ಯಕ್ರಮದಲ್ಲಿ ನೀವು ನನ್ನ ವಿರುದ್ಧ ಮಾತನಾಡಿದ್ದೀರಿ'''''''' ಎಂದು ಶಾಸಕ ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತಪಡಿಸಿದರು.
ಆಹ್ವಾನ ಪತ್ರಿಕೆ ಕೊಟ್ಟವರು ಯಾರು ಎಂದು ಪಾಲಿಕೆ ಆಯುಕ್ತರಲ್ಲಿ ಸಚಿವರು ವಿಚಾರಿಸಿದರು. ಮೊದಲ ಉದ್ಘಾಟನೆ ಅಧಿಕೃತವಲ್ಲ, ನಾವು ಅಧಿಕೃತ ಆಹ್ವಾನ ಪತ್ರವನ್ನು ಶಾಸಕರಿಗೆ ತಲಪಿಸಿದ್ದೇವೆ ಎಂದು ಆಯುಕ್ತರು ಸ್ಪಷ್ಟಪಡಿಸಿದರು. ಮೂರು ಕಟ್ಟಡ ಉದ್ಘಾಟನೆ ಇದ್ದರೂ ನನಗೆ ಮಾಹಿತಿ ಕೊಟ್ಟಿಲ್ಲ, ನನ್ನಲ್ಲಿ ದಿನಾಂಕ ಕೇಳಿಲ್ಲ, ಇಷ್ಟು ದೊಡ್ಡ ಕಾರ್ಯಕ್ರಮವನ್ನು ನಿಗದಿ ಮಾಡಬೇಕಾದರೆ ಅದರ ಹಿಂದೆ ಯಾರಾದರೂ ಇರಬೇಕಲ್ವ, ಇಲ್ಲವಾದರೆ ನಿಮಗೆ ಮಾತ್ರ ಆಹ್ವಾನ ಪತ್ರಿಕೆ ಬಂದಿದ್ದು ಏನಾದರೂ ಪವಾಡವೇ ಎಂದು ಸಚಿವರು ತಿರುಗೇಟು ನೀಡಿದರು.
ಇದರಿಂದ ಕೆರಳಿದ ಶಾಸಕರು, ಈ ರೀತಿ ಮಾತನಾಡಬೇಡಿ, ನಾನು ಇಲ್ಲಿ ಸದಸ್ಯ. ನನ್ನ ವಿರುದ್ಧ ಆರೋಪ ಮಾಡಿದ್ದೀರಿ ಅದನ್ನು ಸಾಬೀತು ಮಾಡಿ ಎಂದರು.
ಮಾಡೋದೆಲ್ಲ ಮಾಡಿ ಈಗ ನಾಟಕ ಮಾಡಬೇಡಿ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.