ಗದಗ: ವಿಶೇಷ ಅಗತ್ಯವುಳ್ಳ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿದರೆ ಅವರಲ್ಲಿಯೂ ವಿಶೇಷ ಪ್ರತಿಭೆ, ಸಾಧನೆ ಹೊರಹೊಮ್ಮಲು ಸಾಧ್ಯ ಎಂದು ವ್ಯಾಪಾರಸ್ಥ ಸಂಕೇತ ಹೆಬಸೂರ ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ತುಕಾರಾಮಸಿಂಗ್ ಜಮಾದಾರ, ಇದು ಪುಣ್ಯದ ಕೆಲಸ, ಇಂತಹ ಕಾರ್ಯ ಮಾಡಲು ಅವಕಾಶ ಸಿಗುವುದೇ ಭಾಗ್ಯ ಎನ್ನಬೇಕು. ಸುದೀರ್ಘ ಅವಧಿಯವರೆಗೆ ಯಾವುದೇ ಫಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿಸಿದ ಸಂತೃಪ್ತ ಭಾವನೆ ನನ್ನದಾಗಿದೆ ಎಂದರು. ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ, ದೇಶಭಕ್ತಿಯ ಕಾರ್ಯಕ್ರಮಗಳು ಜನಮನ ಸೆಳೆದವು. ಡಿ.ಸಿ. ಪಾವಟೆ ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕಾರ್ಯದರ್ಶಿ ಜಯರಾಜ ಮುಳಗುಂದ ಸ್ವಾಗತಿಸಿದರು. ಡಾ. ಉಮೇಶ ಹಾದಿ ಹಾಗೂ ಬಸವರಾಜ ಪಟ್ಟಣಶೆಟ್ಟಿ ಪರಿಚಯಿಸಿದರು. ಮುಖ್ಯೋಪಾಧ್ಯಾಯ ಮಲ್ಲಪ್ಪ ಹಕ್ಕಿ ವರದಿ ವಾಚಿಸಿ, ನಿರೂಪಿಸಿದರು. ಮಲ್ಲಿಕಾರ್ಜುನ ನಾಗಲಾಪೂರ ಸೇವಾ ಭಾರತಿ 25 ವಾರ್ಷಿಕೋತ್ಸವದ ಮಾಹಿತಿ ನೀಡಿದರು. ಜಗದೀಶ ಹಡಪದ ವಂದಿಸಿದರು. ಸಾಧಕ ವಿದ್ಯಾರ್ಥಿಗಳಾದ ಪೂಜಾ ಭಗವತಿ, ನುಮಾನ ಮಜ್ಜಗಿ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಸೇವಾ ಭಾರತಿಯ ಶ್ರೀಧರ ನಾಡಗೇರ, ಆಹ್ವಾನಿತ ಸದಸ್ಯರಾದ ಮಾಜಿ ಸೈನಿಕ ಸುಧೀರಸಿಂಹ ಘೋರ್ಪಡೆ ವಕೀಲರು, ಬಸವರಾಜ ನಾಗಲಾಪೂರ, ಮಾಜಿ ಸೈನಿಕ ಸುಭಾಸಚಂದ್ರ ಪೆಂಟಾ, ಜೀತೇಂದ್ರ ಶಹಾ, ಜಯಶ್ರೀ ಭಾವರೆ, ವೀಣಾ ಕೊಲ್ಹಾಪುರೆ, ರೇಣುಕಾ ದಾಸರ, ಆರ್‌ಡಿಪಿಆರ್ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಪಾಲಕ ಪೋಷಕರು ಪಾಲ್ಗೊಂಡಿದ್ದರು.