ನೂರು ಎಫ್‍ಐಆರ್ ಹಾಕಿದರೂ ಜಗ್ಗುವುದಿಲ್ಲ: ಕೆ.ಎಸ್.ಈಶ್ವರಪ್ಪ

KannadaprabhaNewsNetwork |  
Published : Dec 11, 2024, 12:46 AM IST
ಪೊಟೋ: 10ಎಸ್‌ಎಂಜಿಕೆಪಿ02ಶಿವಮೊಗ್ಗದ ಪತ್ರಿಕಾಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಮಾತನಾಡಿದರು. | Kannada Prabha

ಸಾರಾಂಶ

ಶಿವಮೊಗ್ಗ: ವಕ್ಫ್‌ ವಿಚಾರದಲ್ಲಿ ಸಾಧು-ಸಂತರ ನೇತೃತ್ವದಲ್ಲಿ ದಂಗೆ ಹೇಳುವ ಕಾಲ ಬರುತ್ತದೆ ಎಂದು ಹೇಳಿದ್ದೆ, ನಾನೆಲ್ಲೂ ಕೊಲ್ಲಿ ಎಂದು ಕರೆ ನೀಡಿಲ್ಲ. ಆದರೂ ಕೋಮು ಪ್ರಚೋದಿತ ಭಾಷಣದ ಆರೋಪದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ನನಗೆ ಎರಡು ಜಾಮೀನು ರಹಿತ ವಾರೆಂಟ್ ಬಂದಿವೆ. ಹಿಂದುತ್ವವನ್ನು ರಕ್ಷಣೆ ಮಾಡುವ ವಿಚಾರದಲ್ಲಿ ತಮ್ಮ ವಿರುದ್ಧ ಇಂತಹ ನೂರು ಎಫ್‍ಐಆರ್ ಹಾಕಿದರೂ, ಜಗ್ಗುವುದಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಶಿವಮೊಗ್ಗ: ವಕ್ಫ್‌ ವಿಚಾರದಲ್ಲಿ ಸಾಧು-ಸಂತರ ನೇತೃತ್ವದಲ್ಲಿ ದಂಗೆ ಹೇಳುವ ಕಾಲ ಬರುತ್ತದೆ ಎಂದು ಹೇಳಿದ್ದೆ, ನಾನೆಲ್ಲೂ ಕೊಲ್ಲಿ ಎಂದು ಕರೆ ನೀಡಿಲ್ಲ. ಆದರೂ ಕೋಮು ಪ್ರಚೋದಿತ ಭಾಷಣದ ಆರೋಪದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ನನಗೆ ಎರಡು ಜಾಮೀನು ರಹಿತ ವಾರೆಂಟ್ ಬಂದಿವೆ. ಹಿಂದುತ್ವವನ್ನು ರಕ್ಷಣೆ ಮಾಡುವ ವಿಚಾರದಲ್ಲಿ ತಮ್ಮ ವಿರುದ್ಧ ಇಂತಹ ನೂರು ಎಫ್‍ಐಆರ್ ಹಾಕಿದರೂ, ಜಗ್ಗುವುದಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ವಿರುದ್ಧ ಪೊಲೀಸರು ಸುಮೊಟೊ ಕೇಸ್ ಹಾಕಿದ್ದಾರೆ. ಕಾಂಗ್ರೆಸ್‌ನಿಂದಲೋ ಅಥವಾ ಜಿಲ್ಲಾ ಪೊಲೀಸ್ ಇಲಾಖೆಯ ಸ್ವಯಂ ಪ್ರೇರಣೆಯೋ ಯಾರ ಕುಮ್ಮಕ್ಕಿನಿಂದ ಕೇಸ್ ದಾಖಲಾಗಿದೆ ಎಂಬ ಬಗ್ಗೆ ತಿಳಿದಿಲ್ಲ. ಇಷ್ಟಕ್ಕೂ ನಾನು ಏನು ತಪ್ಪು ಮಾಡಿದ್ದೇನೆ ? ಸಾವಿರಾರು ವರ್ಷದ ಹಿಂದಿನ ಎಲ್ಲ ಆಸ್ತಿಯನ್ನು ವಕ್ಫ್ ಎಂದು ನಮೂದು ಮಾಡಲಾಗಿದೆ. ಇದನ್ನು ಪ್ರಶ್ನಿಸಿ ರೈತರು ಹಾಗೂ ಹಿಂದೂ ದೇವಾಲಯಗಳ ಪರವಾಗಿ ಮಾತನಾಡಿದ್ದು, ತಪ್ಪಾ ಎಂದು ಕಿಡಿಕಾರಿದರು.ವಕ್ಫ್ ವಿರುದ್ಧ ನಾವೆಲ್ಲ ಮಾತನಾಡಿದ ಬಳಿಕ ಸರ್ಕಾರ ನೋಟಿಸ್ ಕೊಟ್ಟ ಎಲ್ಲಾ ಪ್ರಕರಣಗಳಲ್ಲಿ ಹಿಂತೆಗೆದುಕೊಂಡಿದ್ದೇವೆ ಎಂದು ಹೇಳಿದೆ. ಆದರೆ, ಕಲುಬುರಗಿಯ ಆಳಂದ ತಾಲೂಕಿನ ಬೀರಲಿಂಗೇಶ್ವರ ದೇವಸ್ಥಾನವನ್ನು ಮಾತ್ರ ವಕ್ಫ್‌ನಿಂದ ಬಿಡಿಸಿಕೊಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಆದೇಶ ನೀಡಿದೆ. ಅದು ಬಿಟ್ಟರೆ ರಾಜ್ಯದ ಎಲ್ಲಿಯೂ ವಕ್ಫ್‌ ಒತ್ತುವರಿ ಪ್ರಕರಣವನ್ನು ಹಿಂತೆಗೆದುಕೊಂಡ ಉದಾಹರಣೆ ಇಲ್ಲ. ಇದೇ ಕಾರಣಕ್ಕೆ ನಾನು ರಾಜ್ಯದ ಜನ ದಂಗೆ ಏಳಬಹುದು ಎಂದಿದ್ದೆ. ಮುಸ್ಲಿಂರ ವಿರುದ್ಧ ದಂಗೆ ಏಳಬಹುದು ಎಂದು ಎಚ್ಚರಿಕೆ ನೀಡಿದ್ದೆ. ಅದಕ್ಕೆ ಕೇಸ್ ಹಾಕಿದ್ದಾರೆ. ಆದರೆ ಮಲ್ಲಿಕಾರ್ಜುನ ಖರ್ಗೆ ಅವರು ಆರ್‌ಎಸ್‌ಎಸ್‌ ಅವರನ್ನು ಕೊಲ್ಲಿ ಎಂದು ಕರೆ ನೀಡಿದರೂ, ಅವರ ಮೇಲೆ ಯಾಕೆ ಕೇಸ್ ಹಾಕಿಲ್ಲ ಎಂದು ಪ್ರಶ್ನಿಸಿದರು.ಎಸ್ಪಿ ಅವರು ನಾನು ನೀಡಿರುವ ಹೇಳಿಕೆಯನ್ನು ನೋಡಲಿ. ಅಶಾಂತಿ ನಿರ್ಮಿಸುವ ಪ್ರಯತ್ನ ಮಾಡಿಲ್ಲ. ಆದರೂ ಅವರು ಯಾರನ್ನೊ ತೃಪ್ತಿಪಡಿಸಲು ಕೇಸ್ ಹಾಕಿದ್ದಾರೆ ಎಂದ ಅವರು, ನಾನು ಇದೇ ರೀತಿ ಮಾತನಾಡುತ್ತೇನೆ. ದೇಶ, ಧರ್ಮದ್ರೋಹ ಮಾಡುವವರ ವಿರುದ್ಧ ನಿರಂತರ ಹೋರಾಟ ಮಾಡುತ್ತೇನೆ ಎಂದು ಗುಡುಗಿದರು.ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಹಾಲಿಂಗಯ್ಯ ಶಾಸ್ತ್ರಿ, ರಾಷ್ಟ್ರ ಭಕ್ತ ಬಳಗದ ಮುಖಂಡರಾದ ಬಾಲು, ಜಾಧವ್, ಅರ್ಚಕರಾದ ರುದ್ರಯ್ಯ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತಿವೇಗ ಎಂದರೆ ನಿರ್ಲಕ್ಷ್ಯದ ಚಾಲನೆ ಅಲ್ಲ: ಹೈಕೋರ್ಟ್‌
‘ಜಾಹೀರಾತಲ್ಲಿ ಗಾಂಧೀಜಿ ಬಳಕೆ ಗಾಂಧೀಜಿಯರ ಮೌಲ್ಯಗಳ ಹತ್ಯೆ’