ಬಲಿದಾನವಾದರೂ ಸರಿ ಪಲಾಯನ ಮಾಡಲಾರೆ: ಅರುಣ್ ಕುಮಾರ್ ಪುತ್ತಿಲ

KannadaprabhaNewsNetwork |  
Published : Jun 10, 2025, 05:44 AM IST
ಬಲಿದಾನವಾದರೂ ಸರಿ ಪಲಾಯನ ಮಾಡಲಾರೆವೆಂಬ ನಿಲುವನ್ನು ಸರಕಾರಕ್ಕೆ ತಿಳಿಸಬಯಸುತ್ತೇನೆ  ಎಂದು ಹಿಂದೂ ನಾಯಕ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪ್ರವರ್ತಕ ಅರುಣ್ ಕುಮಾರ್ ಪುತ್ತಿಲ | Kannada Prabha

ಸಾರಾಂಶ

ಬಲಿದಾನವಾದರೂ ಸರಿ ಪಲಾಯನ ಮಾಡಲಾರೆವೆಂಬ ನಿಲುವನ್ನು ಸರ್ಕಾರಕ್ಕೆ ತಿಳಿಸಬಯಸುತ್ತೇನೆ ಎಂದು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪ್ರವರ್ತಕ ಅರುಣ್ ಕುಮಾರ್ ಪುತ್ತಿಲ ಪ್ರಕಟಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಪ್ರಸಕ್ತ ಸಿದ್ದರಾಮಯ್ಯ ನೇತೃತದ ರಾಜ್ಯ ಸರ್ಕಾರ ಮುಸ್ಲಿಂ ತುಷ್ಟೀಕರಣ ನೀತಿಯನ್ನು ಅತೀ ಎನಿಸುವಷ್ಟು ಅನುಸರಿಸುತ್ತಿದ್ದು, ಹಿಂದೂ ದಮನಕಾರ್ಯವನ್ನು ಪೊಲೀಸ್ ಬಲ ಪ್ರಯೋಗಿಸಿ ನಡೆಸುತ್ತಿದೆ. ಅದಕ್ಕಾಗಿ ಹಿಂದೂ ನಾಯಕರನ್ನು ಗಡಿಪಾರು, ಮಧ್ಯರಾತ್ರಿ ಮನೆ ಭೇಟಿ, ಸುಳ್ಳು ಕೇಸು ದಾಖಲು ಮೊದಲಾದ ಹಿಂಸೆಯನ್ನು ನೀಡಲಾರಂಭಿಸಿದೆ. ಆದರೆ ಬಲಿದಾನವಾದರೂ ಸರಿ ಪಲಾಯನ ಮಾಡಲಾರೆವೆಂಬ ನಿಲುವನ್ನು ಸರ್ಕಾರಕ್ಕೆ ತಿಳಿಸಬಯಸುತ್ತೇನೆ ಎಂದು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪ್ರವರ್ತಕ ಅರುಣ್ ಕುಮಾರ್ ಪುತ್ತಿಲ ಪ್ರಕಟಿಸಿದ್ದಾರೆ.ಶನಿವಾರ ರಾತ್ರಿ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗ್ರೇಶ್ವರ ದೇವಾಲಯದಲ್ಲಿ ನಡೆದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.ಮತಾಂಧರು ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಕೊಂದಾಗ ಆತನಿಗೆ ರೌಡಿ ಹಣೆಪಟ್ಟಿ ಕಟ್ಟಿ ಹತ್ಯೆಯನ್ನು ಕಡೆಗಣಿಸಲಾಯಿತು. ಅದೇ ವೇಳೆ ಮುಸ್ಲೀಂ ಸಮುದಾಯದ ವ್ಯಕ್ತಿಯನ್ನು ಕೊಂದಾಗ ಸರ್ಕಾರ ಆತನಿಗೆ ಮುಗ್ಧತೆಯ ಹಣೆಪಟ್ಟಿ ಕಟ್ಟಿ ಇಡೀ ಹಿಂದೂ ಸಮುದಾಯದ ನಾಯಕರನ್ನು ಬಗೆ ಬಗೆಯಲ್ಲಿ ಹಿಂಸಿಸಲು ಮುಂದಾಗುತ್ತಿದೆ. ತುಷ್ಟೀಕರಣದ ಈ ನೀತಿ ಸರ್ಕಾರಕ್ಕೆ ದುಬಾರಿಯಾಗಲಿದೆ ಎಂದು ಎಚ್ಚರಿಸಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ೧೦೦ನೇ ವರ್ಷಾಚರಣೆಯ ಅಂಗವಾಗಿ ೧೦೦ ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಈ ಬಾರಿ ಟ್ರಸ್ಟ್ ವತಿಯಿಂದ ನಡೆಸಲಾಗುವುದೆಂದು ಘೋಷಿಸಿದರು.ಡಾ. ಬಿಲ್ಲಂಪದವು ಮಹಾಲಿಂಗ ಭಟ್ ಉಪನ್ಯಾಸ ನೀಡಿದರು, ಉದ್ಯಮಿ ಹೇರಂಭ ಶಾಸ್ತ್ರಿ ಮಾತನಾಡಿದರು.

ಶ್ರೀ ರಾಮ ಭಟ್ ಪಾತಾಳ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶಶಿಧರ ಎಂ., ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ ಅಧ್ಯಕ್ಷ ಸುನಿಲ್ ದಡ್ಡು, ಪುತ್ತಿಲ ಸೇವಾ ಟ್ರಸ್ಟ್ ಅಧ್ಯಕ್ಷ ಮಹೇಂದ್ರ ವರ್ಮ ಪಡ್ಪು, ಉದ್ಯಮಿ ನಟೇಶ್ ಪೂಜಾರಿ ಮಾತನಾಡಿದರು.

ಟ್ರಸ್ಟ್ ಗೌರವಾಧ್ಯಕ್ಷ ಡಿ.ಚಂದಪ್ಪ ಮೂಲ್ಯ, ಜಯಂತ ಪೊರೋಳಿ ಹಾಜರಿದ್ದರು. ಹರೀಶ್ ಉಪಾಧ್ಯಾಯ ಪೌರೋಹಿತ್ಯದಲ್ಲಿ ಶನಿಪೂಜೆ ನಡೆಯಿತು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ