- ಕಾರಾಗೃಹದಲ್ಲಿ ಕಾನೂನು ಅರಿವು- ನೆರವು ಕಾರ್ಯಕ್ರಮದಲ್ಲಿ ನ್ಯಾ. ಮಹಾವೀರ ಸಲಹೆ
ಕನ್ನಡಪ್ರಭ ವಾರ್ತೆ ದಾವಣಗೆರೆ ಕಾನೂನು ಸೇವಾ ಪ್ರಾಧಿಕಾರದ ಕಾಯ್ದೆಯಡಿ ವಿಚಾರಣಾಧೀನ ಕೈದಿಗಳಿಗೆ ಉಚಿತ ಮತ್ತು ಗುಣಮಟ್ಟದ ಕಾನೂನು ಸೇವೆಗಳನ್ನು ಕಡ್ಡಾಯವಾಗಿ ಒದಗಿಸಲಾಗುವುದು ಎಂದು ಹಿರಿಯ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ್ ಎಂ. ಕರೆಣ್ಣನವರ್ ಹೇಳಿದರು.
ನಗರದ ಜಿಲ್ಲಾ ಕಾರಾಗೃಹದಲ್ಲಿ ಸೋಮವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಅವರು ಉದ್ಘಾಟಿಸಿ ಮಾತನಾಡಿದರು.ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಮಟ್ಟದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳಿಂದ ಈ ಸೇವೆಗಳನ್ನು ಒದಗಿಸಲಾಗಿದೆ. ಉಚಿತ ಕಾನೂನು ನೆರವು ಎಲ್ಲ ವಿಚಾರಣಾಧೀನ ಕೈದಿಗಳು, ಅವರು ಅರ್ಹತಾ ಮಾನದಂಡಗಳನ್ನು ಪೂರೈಸಿದಲ್ಲಿ ಅಥವಾ ಮಹಿಳೆಯರು, ಮಕ್ಕಳು ಇತ್ಯಾದಿ ವಿಶೇಷ ವರ್ಗಕ್ಕೆ ಸೇರಿದ್ದರೆ, ಉಚಿತ ಕಾನೂನು ನೆರವು ಪಡೆಯಲು ಅರ್ಹರಾಗಿರುತ್ತಾರೆ ಎಂದರು.
ಕರ್ನಾಟಕ ಕಾರಾಗೃಹ ನಿಯಮಾವಳಿಗಳು ವಿಚಾರಣಾಧೀನ ಕೈದಿಗಳನ್ನು ಶಿಕ್ಷೆಗೆ ಗುರಿಯಾದ ಕೈದಿಗಳಿಂದ ಪ್ರತ್ಯೇಕವಾಗಿ ಇಡುವುದು ಮತ್ತು ಅವರಿಗೆ ಸೂಕ್ತ ವಸತಿ, ಆಹಾರ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದನ್ನು ಕಡ್ಡಾಯವಾಗಿದೆ. ವಕೀಲರನ್ನು ಭೇಟಿ ಮಾಡುವ ಸೌಲಭ್ಯವು ಇದರಲ್ಲಿ ಒಂದು ಪ್ರಮುಖ ಹಕ್ಕು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಎ.ಡಿ.ಆರ್ ಕಟ್ಟಡ, ಹಳೇ ನ್ಯಾಯಾಲಯಗಳ ಸಂಕೀರ್ಣ, ದಾವಣಗೆರೆ-577002. ದೂ: 08192-296364, ಇ-ಮೇಲ್: ** dlsadavangere4@gmail.com ** ವೆಬ್ ಸೈಟ್: ** https://districts.ecourts.gov.in/davangere ** ಇಲ್ಲಿಗೆ ಸಂಪರ್ಕಿಸಬಹುದು ಎಂದರು.
- - -
- ಮಹಾವೀರ್ ಎಂ. ಕರೆಣ್ಣನವರ್, ಸದಸ್ಯ ಕಾರ್ಯದರ್ಶಿ.
-10ಕೆಡಿವಿಜಿ31.ಜೆಪಿಜಿ: