ಕಡೂರುಅಮೆರಿಕದ ಪ್ರಜೆಯಾಗಿದ್ದರೂ ಭಾರತೀಯ ಸಂಸ್ಕೃತಿ, ಸನಾತನ ಧರ್ಮ ಹಾಗೂ ನರಸಿಂಹ ದೇವರ ಆರಾಧನೆಯಲ್ಲಿ ಅಪಾರ ಶ್ರದ್ಧಾಭಕ್ತಿ ಹೊಂದಿರುವ ಗೊರಿಕ್ ಧ್ರುವ ಅವರು ಕಡೂರು ತಾಲೂಕಿನ ದೊಡ್ಡಪಟ್ಟಣಗೆರೆಯ ಐತಿಹಾಸಿಕ ಯೋಗಾ ನರಸಿಂಹ ದೇವಸ್ಥಾನಕ್ಕೆ 12ಕ್ಕೂ ಹೆಚ್ಚು ವಿದೇಶಿ ಭಕ್ತರೊಂದಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ದೀಪಾವಳಿ ಅಂಗವಾಗಿ ದೇವಸ್ಥಾನಕ್ಕೆ ಭೇಟಿ । ಯೋಗಾ ನರಸಿಂಹ, ಭೂದೇವಿ ಹಾಗೂ ಶ್ರೀದೇವಿ ವಿಗ್ರಹಗಳಿಗೆ ಸ್ವತಃ ಪಂಚಾಮೃತ ಅಭಿಷೇಕ
ವಿಶೇಷ ವರದಿಕನ್ನಡಪ್ರಭ ವಾರ್ತೆ, ಕಡೂರುಅಮೆರಿಕದ ಪ್ರಜೆಯಾಗಿದ್ದರೂ ಭಾರತೀಯ ಸಂಸ್ಕೃತಿ, ಸನಾತನ ಧರ್ಮ ಹಾಗೂ ನರಸಿಂಹ ದೇವರ ಆರಾಧನೆಯಲ್ಲಿ ಅಪಾರ ಶ್ರದ್ಧಾಭಕ್ತಿ ಹೊಂದಿರುವ ಗೊರಿಕ್ ಧ್ರುವ ಅವರು ಕಡೂರು ತಾಲೂಕಿನ ದೊಡ್ಡಪಟ್ಟಣಗೆರೆಯ ಐತಿಹಾಸಿಕ ಯೋಗಾ ನರಸಿಂಹ ದೇವಸ್ಥಾನಕ್ಕೆ 12ಕ್ಕೂ ಹೆಚ್ಚು ವಿದೇಶಿ ಭಕ್ತರೊಂದಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.ದೀಪಾವಳಿ ಅಂಗವಾಗಿ ಮಂಗಳವಾರ ದೇವಸ್ಥಾನಕ್ಕೆ ಆಗಮಿಸಿದ ಧ್ರುವ ತ್ರಿಕೂಟ ದೇವಸ್ಥಾನದಲ್ಲಿರುವ ಯೋಗಾ ನರಸಿಂಹ, ಭೂದೇವಿ ಹಾಗೂ ಶ್ರೀದೇವಿಯ ವಿಗ್ರಹಗಳಿಗೆ ಸ್ವತಃ ಪಂಚಾಮೃತ ಅಭಿಷೇಕ ನೆರವೇರಿಸಿದರು. ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳು, ಅಲಂಕಾರ ಹಾಗೂ ಮಂಗಳಾರತಿ ಬಳಿಕ ಗ್ರಾಮಸ್ಥರೊಂದಿಗೆ ಕುಳಿತು ದೇವಸ್ಥಾನದ ಐತಿಹಾಸಿಕ ಮಹತ್ವ ಮತ್ತು ಅಭಿವೃದ್ಧಿಯ ಕುರಿತು ಚರ್ಚಿಸಿದರು.ನಂತರ ಸಮೀಪದ ಮತ್ತೊಂದು ಐತಿಹಾಸಿಕ ಕ್ಷೇತ್ರ ಮಚ್ಚೇರಿಯ ಸೌಮ್ಯ ಯೋಗಾನರಸಿಂಹ ದೇವಸ್ಥಾನಕ್ಕೂ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ದೊಡ್ಡಪಟ್ಟಣಗೆರೆ ಅಂಗಡಿ ದಿನೇಶ್, ಶ್ರೀನಾಥ್, ಲಕ್ಷ್ಮೀನಾರಾಯಣ ಯುವಕ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
.....
ನರಸಿಂಹ ಕ್ಷೇತ್ರಗಳ ಹುಡುಕಾಟದಲ್ಲಿ ವಿಶ್ವಪರ್ಯಟನೆ!ಅಮೆರಿಕ ಮೂಲದ ಗೊರಿಕ್ ಧ್ರುವ ಅವರ ತಂದೆ ಡೆನಿಸ್ (ಧರ್ಮಾತ್ಮ), ತಾಯಿ ಡಯಾನಾ (ದ್ವಿಜಪ್ರಿಯಾ). ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ (ಇಸ್ಕಾನ್) ಸಂಸ್ಥಾಪಕ ಶ್ರೀಲ ಪ್ರಭುಪಾದರ ವಿಚಾರಧಾರೆಗಳಿಂದ ಪ್ರೇರಿತರಾಗಿ ತಂದೆ-ತಾಯಿ ಹಿಂದೂ ಧರ್ಮವನ್ನು ಸ್ವೀಕರಿಸಿದ್ದರು. ಅವರ ಪ್ರಭಾವದಿಂದ ಬಾಲ್ಯದಿಂದಲೇ ಹಿಂದೂ ಧರ್ಮ ಮತ್ತು ಭಾರತೀಯ ಸಂಸ್ಕೃತಿ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಧ್ರುವ, ವಿಶೇಷವಾಗಿ ನರಸಿಂಹ ದೇವರ ಆರಾಧನೆಯಲ್ಲಿ ತೊಡಗಿಸಿಕೊಂಡರು.ನರಸಿಂಹ ದೇವರ ಮೇಲಿನ ಭಕ್ತಿಯಿಂದ ಭಾರತಾದ್ಯಂತ ಪ್ರವಾಸ ಕೈಗೊಂಡ ಅವರು, 600ಕ್ಕೂ ಹೆಚ್ಚು ಐತಿಹಾಸಿಕ ನರಸಿಂಹ ದೇವಸ್ಥಾನಗಳಿಗೆ ಭೇಟಿ ನೀಡಿ ಅಲ್ಲಿನ ಇತಿಹಾಸ, ಧಾರ್ಮಿಕ ಹಿನ್ನೆಲೆ, ವಾಸ್ತುಶಿಲ್ಪ ಹಾಗೂ ಪೂಜಾ ಪದ್ಧತಿಗಳ ಕುರಿತು ಅಧ್ಯಯನ ಮಾಡಿದ್ದಾರೆ. ಈ ಅಪರೂಪದ ಅನುಭವ ಮತ್ತು ಸಂಶೋಧನೆ ಫಲವಾಗಿ 4 ಬೃಹತ್ ಪುಸ್ತಕ ಸಂಪುಟ ಗಳನ್ನು ರಚಿಸಿದ್ದಾರೆ.ಚಿಕ್ಕಮಗಳೂರು ಜಿಲ್ಲೆಯ ಹಿರೇಮಗಳೂರು, ಮಚ್ಚೇರಿ, ತಂಗಲಿ ಹಾಗೂ ದೊಡ್ಡಪಟ್ಟಣಗೆರೆ ಸೇರಿದಂತೆ ಹಲವು ನರಸಿಂಹ ದೇವಸ್ಥಾನಗಳ ಸಚಿತ್ರ ಮಾಹಿತಿಯೂ ಈ ಕೃತಿಗಳಲ್ಲಿ ದಾಖಲಾಗಿದೆ.
...ಬಾಕ್ಸ್....
ನಾಲ್ಕು ಮಹತ್ವದ ಕೃತಿಗಳುಧ್ರುವ ರಚಿಸಿರುವ ನರಸಿಂಹ ದಿ ಲಾಸ್ಟ್ ಟೆಂಪಲ್ಸ್ ಕೃತಿಯಲ್ಲಿ ದೇಶದಲ್ಲಿ ನಾಶವಾಗಿರುವ 108 ನರಸಿಂಹ ದೇವಸ್ಥಾನಗಳ ವಿವರಗಳಿವೆ. ನರಸಿಂಹ ದಿ ಮಿಸ್ಟೀರಿಯಸ್ ಕಲ್ಟರ್ ಕೃತಿಯಲ್ಲಿ ರಾಜರು ಆರಾಧಿಸುತ್ತಿದ್ದ ನರಸಿಂಹನ ಕಲಾಕೃತಿಗಳು ಮತ್ತು ಪೂಜಾ ಪದ್ಧತಿಗಳ ಮಾಹಿತಿ ಇದೆ. ನರಸಿಂಹ ದಿ ಗ್ರೇಟ್ ಸೋಲ್ಸ್ ಕೃತಿಯಲ್ಲಿ ಮಧ್ವಾಚಾರ್ಯ, ರಾಮಾನುಜಾಚಾರ್ಯ ಸೇರಿದಂತೆ ನರಸಿಂಹನ ಆರಾಧಕರ ಪರಿಚಯವಿದೆ. ನರಸಿಂಹ ದಿ ಗಾಡ್ ಆಫ್ ಯೋಗ ಕೃತಿಯಲ್ಲಿ ದಕ್ಷಿಣ ಭಾರತದ ನರಸಿಂಹ ದೇವಸ್ಥಾನಗಳ ಇತಿಹಾಸ ದಾಖಲಿಸಿದ್ದಾರೆ.ಅಮೆರಿಕದ ಫ್ಲೋರಿಡಾದಲ್ಲಿರುವ ತಮ್ಮ ಭಕ್ತಿ ವೇದಾಂತ ಗುರುಕುಲದಲ್ಲಿ ವಿವಿಧ ದೇಶಗಳ ನೂರಾರು ವಿದ್ಯಾರ್ಥಿಗಳಿಗೆ ಸಂಸ್ಕೃತ, ಪೂಜಾ ವಿಧಾನ, ಸಂಗೀತ ಹಾಗೂ ನೃತ್ಯ ಸೇರಿದಂತೆ ಭಾರತೀಯ ಸಂಸ್ಕೃತಿ ಶಿಕ್ಷಣ ನೀಡುತ್ತಿದ್ದಾರೆ. ನರಸಿಂಹ ಫೌಂಡೇಷನ್ ಮೂಲಕ ನರಸಿಂಹ ದೇವರ ಆರಾಧನೆ ಮತ್ತು ಧಾರ್ಮಿಕ ಚಟುವಟಿಕೆ ನಡೆಸುತ್ತಿದ್ದಾರೆ.ಧ್ರುವ ಅವರ ಪತ್ನಿ ಗೀತಾ (ಸಾಂಡ್ರಾ), ಮಗಳು ಜ್ಯೋತಿ ಹಾಗೂ ಮಗ ಪ್ರಾಣವಾಯು ಕೂಡ ಹಿಂದೂ ಧರ್ಮದ ಅನುಯಾಯಿಗಳಾಗಿದ್ದು, ಸಾಂಪ್ರದಾಯಿಕವಾಗಿ ನಿತ್ಯ ಪೂಜೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಗೀತಾ ಈ ಹಿಂದೆ ಹಲವು ಹಾಲಿವುಡ್ ಚಿತ್ರಗಳಲ್ಲಿ ಅಭಿನಯಿಸಿದ್ದು, ಪ್ರಸ್ತುತ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಕುಟುಂಬ ಸಮೇತ ಆಗಾಗ ಭಾರತಕ್ಕೆ ಭೇಟಿ ನೀಡುವ ಅವರು, ನೂರಾರು ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೂ ಸದ್ದಿಲ್ಲದೆ ನೆರವಾಗುತ್ತಿದ್ದಾರೆ.... ಬಾಕ್ಸ್ ...ದೊಡ್ಡಪಟ್ಟಣಗೆರೆ ದೇವಸ್ಥಾನದ ಅಭಿವೃದ್ಧಿಗೂ ಧ್ರುವ ಆಸಕ್ತಿಈ ಹಿಂದೆ ಬೆಂಗಳೂರು ಇಸ್ಕಾನ್ ಅಧ್ಯಕ್ಷ ಮಧುಪಂಡಿತ ದಾಸ್ ಅವರೊಂದಿಗೆ ದೊಡ್ಡಪಟ್ಟಣಗೆರೆ ಯೋಗಾನರಸಿಂಹ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಧ್ರುವ, ದೇವಸ್ಥಾನದ ಅರ್ಚಕರಿಗೆ ಇಸ್ಕಾನ್ ನಿಂದ ಮಾಸಿಕ ಸಂಭಾವನೆ ದೊರೆಯುವ ವ್ಯವಸ್ಥೆ ಕಲ್ಪಿಸಿದ್ದರು. ಇದೀಗ ದೇವಸ್ಥಾನಕ್ಕೆ ಅಗತ್ಯ ಮೂಲಸೌಕರ್ಯ ಒದಗಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ನೆರವಾಗುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ. ಐತಿಹಾಸಿಕ ದೇವಸ್ಥಾನಗಳ ಸಂರಕ್ಷಣೆ ಮತ್ತು ಧಾರ್ಮಿಕ ಪರಂಪರೆ ಉಳಿವಿಗೆ ವಿದೇಶದಲ್ಲಿದ್ದುಕೊಂಡು ಧ್ರುವ ತೋರುತ್ತಿರುವ ಆಸಕ್ತಿ ಗಮನಾರ್ಹ......ಕೋಟ್.....
ಸನಾತನ ಧರ್ಮದಿಂದ ವಿಶ್ವಶಾಂತಿ ಸಾಧ್ಯನರಸಿಂಹ ಎಂದರೆ ಸನಾತನ ಧರ್ಮ ರಕ್ಷಕ. ಪ್ರಪಂಚಕ್ಕೆ ಯೋಗ ಗುರು. ಅನ್ಯಾಯ ಮಾಡದೆ ಧರ್ಮಮಾರ್ಗದಲ್ಲಿ ನಡೆಯುವವರ ಯೋಗಕ್ಷೇಮ ನೋಡಿಕೊಳ್ಳುವ ದಿವ್ಯ ಚೇತನ. ಹಿಂದೂ ಸನಾತನ ಧರ್ಮದ ಪರಿಚಯ ಇಡೀ ಪ್ರಪಂಚಕ್ಕೆ ಆಗಬೇಕು ಆಗ ವಿಶ್ವ ಶಾಂತಿ ಸ್ಥಾಪನೆಯಾಗುವುದು ಖಚಿತ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.