ಏಕಾಂತದಲ್ಲಿದ್ದರೂ ತೇಜಸ್ವಿ ಅವರ ಸಾಹಿತ್ಯ ಜನಪರವಾಗಿತ್ತು: ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್

KannadaprabhaNewsNetwork |  
Published : Oct 20, 2026, 01:15 AM IST
19ಕೆಎಂಎನ್ ಡಿ18 | Kannada Prabha

ಸಾರಾಂಶ

ತೇಜಸ್ವಿಯವರು ಮಲೆನಾಡಿನ ಮೂಡಿಗೆರೆಯ ತೋಟದ ಜಗುಲಿ ಮೇಲೆ ಕುಳಿತು ಅವರು ಇಡೀ ಜಗತ್ತಿನ ವಿಸ್ಮಯ. ವಿಜ್ಞಾನ ಮತ್ತು ಪ್ರಕೃತಿ ನಿಗೂಢತೆಯನ್ನು ಸಂಗ್ರಹಿಸಿದ ರೀತಿ ಅನನ್ಯವಾದದ್ದು. ತಮ್ಮ ಸಾಹಿತ್ಯದ ಮೂಲಕ ಓದುಗರಿಗೆ ವಿಶ್ವವನ್ನೇ ಪರಿಚಹಿಸುವ ಕೆಲಸ ಮಾಡಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತೇಜಸ್ವಿಯವರು ಐಷಾರಾಮಿ ಜೀವನವನ್ನು ಧಿಕ್ಕರಿಸಿ ಕಾಡಿನ ಸಂತನಾಗಿ ಏಕಾಂತದಲ್ಲಿದ್ದರೂ ತೇಜಸ್ವಿ ಅವರ ಸಾಹಿತ್ಯ ಜನಪರವಾಗಿತ್ತು ಎಂದು ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.

ಪಟ್ಟಣದ ಕಸಾಪ ಭವನದಲ್ಲಿ ತೇಜಸ್ವಿ ಬಳಗದಿಂದ ನಡೆದ ತೇಜಸ್ವಿ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿ, ಮಲೆನಾಡಿನ ಮೂಡಿಗೆರೆಯ ತೋಟದ ಜಗುಲಿ ಮೇಲೆ ಕುಳಿತು ಅವರು ಇಡೀ ಜಗತ್ತಿನ ವಿಸ್ಮಯ. ವಿಜ್ಞಾನ ಮತ್ತು ಪ್ರಕೃತಿ ನಿಗೂಢತೆಯನ್ನು ಸಂಗ್ರಹಿಸಿದ ರೀತಿ ಅನನ್ಯವಾದದ್ದು. ತಮ್ಮ ಸಾಹಿತ್ಯದ ಮೂಲಕ ಓದುಗರಿಗೆ ವಿಶ್ವವನ್ನೇ ಪರಿಚಹಿಸುವ ಕೆಲಸ ಮಾಡಿದರು.

ಸುರ್ಯೋದಯ, ಚಂದ್ರೋದಯ ದೇವರ ದಯೆ ಕಾಣೋ ಎಂದು ಕುವೆಂಪು ಬರೆದರು. ಜೀವನದುದ್ದಕ್ಕೂ ಮೌಢ್ಯವನ್ನು ಧಿಕ್ಕಿರಿಸಿ ವೈಚಾರಿಕತೆಯನ್ನು ಪ್ರತಿಪಾದಿಸಿದರು. ತೇಜಸ್ವಿ ಅವರು ತಮ್ಮ ತಂದೆಯನ್ನು ಅತ್ಯಂತ ನಯವಾಗಿ ಪಕ್ಕಕಿಟ್ಟು ತಮ್ಮದೆಯೇ ಆದ ಹಾದಿಯನ್ನು ಕಂಡುಕೊಂಡರು ಎಂದರು.

ಲೇಖಕ ದಂತಗೋಪುರದಲ್ಲಿ ಇರಬಾರದು. ಸುತ್ತಲಿ ವಿದ್ಯಮಾನಗಳಿಗೆ ಪ್ರತಿಕ್ರಿಯಿಸಬೇಕು. ತೇಜಸ್ವಿ ಅವರು ಬರೀ ಸಾಹಿತ್ಯಕ್ಕೆ ಜೋತು ಬೀಳದೆ ಛಾಯಾಗ್ರಹಣ, ಗಣಕ ತಂತ್ರಾಂಶ, ಮೀನುಶಿಕಾರಿ ಸಿತಾರ್ ಅಭ್ಯಾಸ ಪರಿಸರ ಕಾಳಜಿ ಸೇರಿದಂತೆ ಹಲವು ವೈವಿಧ್ಯತೆಗಳಿಗೆ ಮುಖ ಮಾಡಿದ್ದರು. ಗಣಕ ತಂತ್ರಾಂಶದ ಬಗ್ಗೆ ತೇಜಸ್ವಿ ಕಂಡಿದ್ದ ಕನಸ್ಸು ಇಂದಿಗೂ ನನಸಾಗದಿಲ್ಲದಿರುವುದಕ್ಕೆ ವಿಷಾದಿಸಿದರು.

ಇದೇ ವೇಳೆ ಪುರುಷೋತ್ತಮ್ ಅವರ ವೀಣಾ ವಾದನದ ಮೂಲಕ ಗಮನಸೆದರು. ಸಾಮಾಜಿಕ ಜಾಲತಾಣಗಳು ಹುಸಿ ರೋಮಾಂಚನ, ಸುಳ್ಳು ವದಂತಿಗಳಿಗೆ ಜೋತು ಬಿದ್ದು, ಸಮಾಜಮುಖಿ ಕೆಲಸಗಳಿಗೆ ಪ್ರಚಾರ ನೀಡುವಲ್ಲಿ ಹಿಂದೆ ಬಿದ್ದಿವೆ. ಅವು ಸಾಂಸ್ಕೃತಿಕ ಜಾಲತಾಣಗಳಾಗಿ ಉಳಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಗಾಂಧಿವಾದಿ ಡಾ.ಬಿ.ಸುಜಯ್ ಕುಮಾರ್ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ, ಧನ್ಯಕುಮಾರ್, ಅಭಿನಯ್, ಉಷಾರಾಣಿ ಸೇರಿದಂತೆ ಹಲವರು ಇದ್ದರು.

ಹಿರಿಯ ವಿದ್ಯಾರ್ಥಿಗಳಿಂದ ಗುರುವಂದನೆ, ಸ್ನೇಹಿತರ ಸಮ್ಮಿಲನ

ಪಾಂಡವಪುರ:ತಾಲೂಕಿನ ಜಕ್ಕನಹಳ್ಳಿ ಸರಕಾರಿ ಪ್ರೌಢಶಾಲೆಯ 2001-02ನೇ ಸಾಲಿನ ಹಿರಿಯ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹಿತರ ಸಮ್ಮಿಲನ ಕಾರ್ಯಕ್ರಮ ನಡಯಿತು.

ಗ್ರಾಮದ ಹೊಸ ವಲಯದಲ್ಲಿ ಲಕ್ಷ್ಮಿ ಫಾರ್ಮ್‌ಹೌಸ್‌ನಲ್ಲಿ ನಡೆದ ಕಾರ್‍ಯಕ್ರಮದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ತಮ್ಮ ಶಾಲಾ ದಿನಗಳ ಸವಿ ನೆನಪುಗಳನ್ನು ಮೆಲುಕು ಹಾಕಿದರು. ಬಳಿಕ ಶಿಕ್ಷಕರನ್ನು ಅಭಿನಂದಿಸಲಾಯಿತು.ಶಿಕ್ಷಕರಾದ ವೈ.ಎನ್.ರಾಮಸ್ವಾಮಿ ಅಯ್ಯಂಗರ್, ಟಿ.ಶ್ರೀನಿವಾಸಗೌಡ, ಲಕ್ಷ್ಮೀಬಾಯ್ ಕುಲ್ಕರ್ಣಿ, ನಿರ್ಮಲಾ ಹಾಗೂ ಬಲೇನಹಳ್ಳಿ ಶಂಕರ್ ಅವರನ್ನು ಸನ್ಮಾನಿಸಿ ಸೇವೆ ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಜಗದೀಶ್, ಎಚ್.ನಾಗರಾಜು, ಅರುಣ್, ಕಾಡೇನಹಳ್ಳಿ ಜಗದೀಶ್, ಮಲ್ಲಿಕಾರ್ಜುನ್, ನಳಿನಾ, ಭವ್ಯಾ, ಮಂಜುಳಾ, ಗೀತಾ ಕೆ ಪಿ, ಶಶಿಕಲಾ, ಸವಿತಾ, ಪ್ರಸನ್ನ, ಮೋಹನ್ ಹಾಗೂ ಚನ್ನಕೇಶವ, ಮಹೇಶ್ ಸೇರಿದಂತೆ ೨ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಗಣ್ಯರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅ.27ರಂದು ಅರ್ಹರಿಗೆ ನಿವೇಶನ ಹಂಚಿಕೆ: ಶಾಸಕ ದರ್ಶನ್ ಪುಟ್ಟಣ್ಣಯ್ಯ
ಕೃತಜ್ಞತೆ ಮರೆಯಾಗಿ ಲಾಭ, ನಷ್ಟದಲ್ಲೇ ಜನರು ಜೀವನ ಕಳೆಯುತ್ತಿದ್ದಾರೆ: ರವಿಕಾಂತೇಗೌಡ