ಕನ್ನಡಪ್ರಭ ವಾರ್ತೆ ಹಲಗೂರು
ಹಂಡನಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಗಣಪತಿ ಪ್ರತಿಷ್ಠಾಪನೆ ಹಾಗೂ ನಾಗದೇವತೆಗಳ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾತನಾಡಿ, ಶೀಘ್ರ ಸಿದ್ಧಿ ದಯಪಾಲಿಸುವವನು ಸಿದ್ಧಿ ವಿನಾಯಕ. ಇತರೆ ದೇವತೆಗಳು ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಾರೆ. ನಮ್ಮ ಬಾಳಿನ ಪಥದಲ್ಲಿ ಎಷ್ಟೇ ದುರ್ಗಮ ಕಷ್ಟಗಳು ಎದುರಾದರೂ ವಿಚಾಲಿತರಾಗದೆ ಪಯಣ ಮುಂದುವರಿಸಲು ಸಿದ್ಧಿ ವಿನಾಯಕ ಸಾಕಷ್ಟು ಸಿದ್ಧಿ ಬುದ್ಧಿ ಜ್ಞಾನ ನೀಡುತ್ತಾರೆ ಎಂದರು.
ನಾವು ವಿಚಲರಾಗದೆ ಒಳ್ಳೆಯ ಮಾರ್ಗದಲ್ಲೇ ನಡೆಯಬೇಕು. ಒಳ್ಳೆಯ ಕೆಲಸಗಳನ್ನು ಮಾಡಿದರೆ ಮಾತ್ರ ನಮಗೆ ದೇವರ ಅನುಗ್ರಹ ಸಿಗುತ್ತದೆ. ದೇವತೆಗಳು ಬಂದು ನಾವು ವಾಸಿಸುವ ಭೂಮಿಯಲ್ಲಿ ಇರಲು ಬಯಸುತ್ತಾರೆ. ನಾವು ಇಂತಹ ಪವಿತ್ರ ಭೂಮಿಯಲ್ಲಿ ಜನಿಸಿರುವುದು ನಮ್ಮ ತಂದೆ ತಾಯಿ ಪೂರ್ವಜರು ಮಾಡಿದ ಪುಣ್ಯ ಎಂದರು.ಭೂಮಿಯಲ್ಲಿ ಜೀವಿಸಲು ಮನುಷ್ಯ ನಿಷ್ಠೆ, ಶಿಸ್ತಿನಿಂದ ಇರುವುದು ಮುಖ್ಯ. ಒಳ್ಳೆಯ ರೀತಿಯಲ್ಲಿ ಬದುಕಲು ಅವಕಾಶವಿದೆ. ಭಕ್ತಿ ಮುಖಾಂತರ ಜ್ಞಾನವನ್ನು ಕೊಟ್ಟರೆ ಬುದ್ಧಿವಂತಿಕೆ ಹೃದಯವಂತಿಕೆ ನೀವು ಬಳಸಕೊಳ್ಳಬೇಕು. ಆಗ ನಿಮಗೆ ಗೌರವ ಸಿಗುತ್ತದೆ ನಿಮ್ಮ ಸ್ವಾಭಿಮಾನವು ಉಳಿಯುತ್ತದೆ ಎಂದರು.
ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಇಂಗ್ಲಿಷ್ ಭಾಷೆ ಪಟ್ಟಣಿಗರಿಗೆ ಮಾತ್ರ ಏಕೆ ಬೇಕು ಎಂದು ನಮ್ಮ ಹಳ್ಳಿ ಮಕ್ಕಳಿಗೂ ಇಂಗ್ಲಿಷ್ ಭಾಷೆ ಕಲಿಸಲು ಮಾತೃಭಾಷೆ ಉಳಿಸಲು ಹಲವು ಯೋಜನೆಗಳನ್ನು ಹಾಕಿಕೊಂಡು ಪಬ್ಲಿಕ್ ಶಾಲೆಗಳನ್ನು ಆರಂಭಿಸಿದರು ಎಂದರು.
ಇದೇ ವೇಳೆ ಸಿದ್ಧಿ ವಿನಾಯಕ ಸಂಘದ ಅಧ್ಯಕ್ಷರಾದ ಶಿವಲಿಂಗೇಗೌಡ ಗೌರವಾಧ್ಯಕ್ಷ ಚಿಕ್ಕಸ್ವಾಮಿ ಸೇರಿದಂತೆ ಇತರರಿಗೆ ಸ್ವಾಮೀಜಿಯವರು ಆಶೀರ್ವದಿಸಿ ಅಭಿನಂದಿಸಿದರು. ದೇವಸ್ಥಾನ ನಿರ್ಮಾಣಕ್ಕೆ ಭೂಮಿ ನೀಡಿದವರನ್ನು ಸನ್ಮಾನಿಸಲಾಯಿತು. ದೇವಸ್ಥಾನ ನಿರ್ಮಾಣಕ್ಕೆ ಸಹಕರಿಸಿದ ಗಣ್ಯರನ್ನು ಅಭಿನಂದಿಸಲಾಯಿತು.