ಭಾರತದ ಪ್ರತಿ ಪ್ರಜೆಯೂ ಅಂಬೇಡ್ಕರ್ ಕೊಡುಗೆ ಸ್ಮರಿಸಬೇಕಿದೆ: ಬಸವರಾಜ

KannadaprabhaNewsNetwork |  
Published : Apr 15, 2025, 12:48 AM IST
ಪೋಟೋ ಇದೆ. | Kannada Prabha

ಸಾರಾಂಶ

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನವನ್ನು ಭಾರತದ ಪ್ರತಿ ಪ್ರಜೆಯೂ ಅವರ ಕೊಡುಗೆಗಳನ್ನು ನೆನೆದು, ಅವರನ್ನು ಸ್ಮರಿಸಿ, ಗೌರವಿಸಬೇಕಾದ ದಿನವಾಗಿದೆ ಎಂದು ಗ್ರೇಡ್ 2 ತಹಸೀಲ್ದಾರ್‌ ಬಸವರಾಜ ಹೊಂಕಣದವರ ಹೇಳಿದರು.

ಕಲಘಟಗಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನವನ್ನು ಭಾರತದ ಪ್ರತಿ ಪ್ರಜೆಯೂ ಅವರ ಕೊಡುಗೆಗಳನ್ನು ನೆನೆದು, ಅವರನ್ನು ಸ್ಮರಿಸಿ, ಗೌರವಿಸಬೇಕಾದ ದಿನವಾಗಿದೆ ಎಂದು ಗ್ರೇಡ್ 2 ತಹಸೀಲ್ದಾರ್‌ ಬಸವರಾಜ ಹೊಂಕಣದವರ ಹೇಳಿದರು.

ಅವರು ಪಟ್ಟಣದ ನೌಕರರ ಭವನದಲ್ಲಿ ತಾಲೂಕು ಆಡಳಿತ, ತಾಪಂ, ಪಪಂ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಡಾ. ಬಿ.ಆರ್‌. ಅಂಬೇಡ್ಕರ್‌ ಅವರು ನೀಡಿದ ಕೊಡುಗೆಗಳು ಶೋಷಿತರಿಗೆ ಮಾತ್ರ ಸೀಮಿತವಾಗಿಲ್ಲ. ಮಹಿಳಾ ಸಮಾನತೆ, ಕಾರ್ಮಿಕ ಹಕ್ಕುಗಳು, ಅಲ್ಪಸಂಖ್ಯಾತರ ರಕ್ಷ ಣೆ ಅವರು ನೀಡಿದ ಕೊಡುಗೆಗಳು ಅಪಾರವಾಗಿವೆ. ಆರ್ಥಿಕ ತಜ್ಞರಾಗಿ ಭಾರತೀಯ ರಿಸರ್ವ್‌ ಬ್ಯಾಂಕಿನ ಸ್ಥಾಪನೆಗೆ ಅವರು ಕಾರಣರಾಗಿದ್ದಾರೆ. ಇದರಿಂದ ದೇಶದ ಅರ್ಥವ್ಯವಸ್ಥೆ ಸುಭದ್ರವಾಗಿದೆ ಎಂದರು.

ಶಿಕ್ಷಕಿ ಜ್ಯೋತಿ ಬಡಿಗೇರ ಅತಿಥಿ ಉಪನ್ಯಾಸ ನೀಡಿದರು. ತಹಸೀಲ್ದಾರ್ ಕಾರ್ಯಾಲಯದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ವಿವಿಧ ಕಲಾ ಮೇಳದೊಂದಿಗೆ ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ ತಹಸೀಲ್ದಾರ್ ಕಾರ್ಯಾಲಯದಿಂದ ತಾಲೂಕು ನೌಕರರ ಭವನದ ವರೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಈ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಸಮಾಜದ ಮುಖಂಡರನ್ನು ಸನ್ಮಾನಿಸಲಾಯಿತು.

ಈ ವೇಳೆ ತಾಪಂ ಇಓ ಪಿ.ವೈ. ಸಾವಂತ್, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎ.ಜೆ. ಯೋಗಪ್ಪನವರ, ಅಧಿಕಾರಿಗಳಾದ ಶ್ರೀದೇವಿ ಎಸ್, ಶಿವಪ್ಪ ಸಣ್ಣಮನಿ, ಜಗದೀಶ್ ವಿರಕ್ತಿಮಠ, ಮಲ್ಲಿಕಾರ್ಜುನ ಗಂಟಿ, ಬಿ. ಹೊನ್ನೂರಪ್ಪ, ಬಸವರಾಜ ಅಂಗಡಿ, ಸುರೇಶ್ ಗೋರಣ್ಣವರ್, ಮಂಜುನಾಥ್ ಮುರಳಿ, ಬಾಳು ಖಾನಾಪುರ, ಈರಣ್ಣ ಗೋಕುಲ, ಯಲ್ಲಪ್ಪ ಹುಲಮನಿ, ಮಾಲಾ ತುರಿಹಾಳ, ಲಕ್ಷ್ಮಿ ಮಾದರ, ರಮೇಶ್ ಸೋಲಾರಗೊಪ್ಪ, ಬಸವರಾಜ ಕಟ್ಟಿಮನಿ, ಶರೀಫ ಹರಿಜನ, ಯಲ್ಲಪ್ಪ ಮೇಲಿನಮನಿ, ಬಸವರಾಜ ಮಾದರ, ಮಂಗಲಪ್ಪ ಲಮಾಣಿ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''