ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ದೇಶದ ಪ್ರತಿಯೊಬ್ಬ ಪ್ರಜೆಯು ಕೂಡಾ ಮತದಾನದಿಂದ ದೂರ ಉಳಿಯದೇ ಮತದಾನದಲ್ಲಿ ಭಾಗಿಯಾಗಬೇಕು ಎಂದು ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎನ್. ಸದಾಶಿವಪ್ಪ ಹೇಳಿದರು.
ಹಾನಗಲ್ಲ: ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ದೇಶದ ಪ್ರತಿಯೊಬ್ಬ ಪ್ರಜೆಯು ಕೂಡಾ ಮತದಾನದಿಂದ ದೂರ ಉಳಿಯದೇ ಮತದಾನದಲ್ಲಿ ಭಾಗಿಯಾಗಬೇಕು ಎಂದು ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎನ್. ಸದಾಶಿವಪ್ಪ ಹೇಳಿದರು.
ಇಲ್ಲಿಯ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದ ಎನ್.ಎಸ್.ಎಸ್. ಕೋಶ ಮತ್ತು ಇತಿಹಾಸ ವಿಭಾಗದಿಂದ ಮತದಾನದ ಕುರಿತು ಜನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಪ್ರತಿಜ್ಞಾ ವಿಧಿ ಬೋಧಿಸಿ ಅವರು ಮಾತನಾಡಿದರು. ಪ್ರಜಾಪ್ರಭುತ್ವ ಹಬ್ಬವಾಗಿ ಚುನಾವಣೆಯಲ್ಲಿ ನಿಮ್ಮ ನಾಯಕನನ್ನು ಆಯ್ಕೆ ಮಾಡಲು ತಪ್ಪದೇ ಮತದಾನ ಮಾಡಬೇಕು. ಪ್ರಜ್ಞಾವಂತರು ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕು ಎಂದು ತಿಳಿಸಿದರು.ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಡಾ. ವಿಶ್ವನಾಥ ಬೊಂದಾಡೆ ಮಾತನಾಡಿ, ಶೇಕಡಾ ನೂರರಷ್ಟ್ಟು ಮತದಾನವಾಗುವುದರಿಂದ ಸದೃಢ ಪ್ರಜಾಪ್ರಭುತ್ವ ಕಟ್ಟಲು ಸಾಧ್ಯ. ಆ ದಿಸೆಯಲ್ಲಿ ಸಂವಿಧಾನಾತ್ಮಕ ಹಕ್ಕಾದ ಮತದಾನ ಕಾರ್ಯದಲ್ಲಿ ತಪ್ಪದೇ ಪಾಲ್ಗೊಳ್ಳುವಂತಾಗಬೇಕು. ಇಂದಿನ ಯುವ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವನ್ನು ನಿರ್ಮಿಸಬೇಕು. ನಮ್ಮ ಸುತ್ತ-ಮುತ್ತಲಿನ ಜನರಿಗೂ ಮತದಾನದ ಮಹತ್ವ ತಿಳಿಸಿಕೊಡಬೇಕು ಎಂಬ ಉದ್ದೇಶದಿಂದ ಈ ಅಭಿಯಾನವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.ಜಾಗೃತಿ ಜಾಥಾ: ನಗರದ ಶ್ರೀ ಕುಮಾರೇಶ್ವರ ಮಠದಿಂದ ಪ್ರಾರಂಭವಾದ ಮತದಾನದ ಜಾಗೃತಿ ಜಾಥಾ ತಾರಕೇಶ್ವರ ದೇವಸ್ಥಾನದವರೆಗೂ ನಡೆಯಿತು. ಸುಮಾರು ನೂರಕ್ಕು ಹೆಚ್ಚು ಪ್ರಶಿಕ್ಷಣಾರ್ಥಿಗಳಿಂದ ಜಾಥಾ ಉದ್ದಕ್ಕೂ ಮತದಾನದ ಘೋಷಣೆ ಕೂಗಿ ಜಾಗೃತಿ ಫಲಕಗಳ ಮೂಲಕ ಸಾರ್ವಜನಿಕರಲ್ಲಿ ಮತದಾನದ ಅರಿವು ಮೂಡಿಸಿದರು.''''''''ಉತ್ತಮ ನಾಳೆಗಾಗಿ ಮತ ಚಲಾಯಿಸಿ, ನಿಮ್ಮ ಮತ ನಿಮ್ಮ ಧ್ವನಿ, ಮತದಾನವು ಹಕ್ಕು ಸವಲತ್ತು ಅಲ್ಲ, ಜಾಗೃತ ಮತದಾರ ಸದೃಢ ಪ್ರಜಾಪ್ರಭುತ್ವ, ನಿಮ್ಮ ಮತ ಗೌಪ್ಯವಾಗಿರಲಿ, ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯ, ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ, ನನ್ನ ಮತ ಮಾರಾಟಕ್ಕಿಲ್ಲ, ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತ ಚುನಾವಣೆಗೆ ಸಹಕರಿಸಿ, ಚುನಾವಣೆ ಪ್ರಜಾಪ್ರಭುತ್ವದ ಭದ್ರ ಬುನಾದಿ, ಯಾವುದೇ ಆಸೆ ಆಮಿಷಗಳಿಗೆ ತುತ್ತಾಗದೆ ನಿರ್ಭೀತಿಯಿಂದ ಮತ ಚಲಾಯಿಸಿ, ಮತದಾರರ ಪಟ್ಟಿಯಲ್ಲಿ ಹೆಸರಿರುವುದನ್ನು ಖಚಿತ ಪಡಿಸಿಕೊಂಡು ಮತದಾನ ಮಾಡಿ'''''''' ಮೇ ೭ಕ್ಕೆ, ಕಡ್ಡಾಯವಾಗಿ ಓಟು ಒತ್ತು, ಎಂಬ ಘೋಷ ವಾಕ್ಯಗಳು ಅಭಿಯಾನದಲ್ಲಿ ಮೊಳಗಿದವು. ಹಾಗೆಯೇ ಮತದಾನದ ಕುರಿತು ಅಭಿಯಾನದ ಗೀತೆಗಳನ್ನು ಮತ್ತು ಜನ ಜಾಗೃತಿ ನಾಟಕಗಳನ್ನು ತಾರಕೇಶ್ವರ ದೇವಸ್ಥಾನದ ವೃತ್ತದಲ್ಲಿ ಪ್ರಶಿಕ್ಷಣಾರ್ಥಿಗಳು ಮನ ಮುಟ್ಟುವಂತೆ ಪ್ರಸ್ತುತಪಡಿಸಿದರು.ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ರುದ್ರೇಶ್ ಬಿ.ಎಸ್., ಡಾ. ರಾಘವೇಂದ್ರ ಮಾಡಳ್ಳಿ, ರೆಡ್ ರಿಬ್ಬನ್ ಕ್ಲಬ್ ಸಂಚಾಲಕರಾದ ಪ್ರೊ. ದಿನೇಶ ಆರ್., ಐಕ್ಯೂಎಸಿ ಸಂಚಾಲಕ ಡಾ. ಹರೀಶ್ ಟಿ.ಟಿ., ಪ್ರೊ.ಎಂ. ಬಿ. ನಾಯ್ಕ, ಡಾ. ಪ್ರಕಾಶ್ ಹುಲ್ಲೂರ್, ಡಾ. ಪ್ರಕಾಶ್ ಜಿ.ವಿ., ಡಾ. ಜೀತೇಂದ್ರ ಜಿ.ಟಿ., ಎಂ.ಎಂ. ನಿಂಗೋಜಿ, ಎಸ್.ಸಿ. ವಿರಕ್ತಮಠ, ಮಂಜಪ್ಪ ಪರಸಿಕ್ಯಾತಿ, ಮಾಲತೇಶ ಜಡೆದ, ಜಗದೀಶ ನಿಂಬಕ್ಕನವರ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.