ಪ್ರತಿ ಅಂತ್ಯ ಹೊಸ ಪ್ರಾರಂಭಕ್ಕೆ ದಾರಿ ಮಾಡಿಕೊಡುತ್ತದೆ: ಡಾ.ಸದಾನಂದ ಜಿ.ಹವನಗಿ

KannadaprabhaNewsNetwork |  
Published : Feb 15, 2025, 12:32 AM IST
ಕ್ಯಾಪ್ಷನ11ಕೆಡಿವಿಜಿ36, 37 ದಾವಣಗೆರೆಯ ಜಿಎಂಎಸ್ ಪ್ರಥಮ ದರ್ಜೆ ಕಾಲೇಜಿನ ನಡೆದ 7ನೇ ಪದವಿ ಪ್ರದಾನ ಸಮಾರಂಭವನ್ನು ಡಾ. ಸದಾನಂದ ಜಿ. ಹವನಗಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಪ್ರತಿ ಅಂತ್ಯ ಹೊಸ ಪ್ರಾರಂಭಕ್ಕೆ ದಾರಿ ಮಾಡಿಕೊಡುತ್ತದೆ. ಅಂತೆಯೇ ನೀವು ನಿಮ್ಮ ಜೀವನದ ಗೋಲ್ಡನ್ ಹಂತದಲ್ಲಿದ್ದೀರಿ. ನೀವು ಪದವಿ ಪೂರೈಸಿದ್ದೀರಿ. ಇದೀಗ ನಿಮ್ಮ ಮುಂದಿನ ಹಾದಿ ತೆರೆದಿದೆ ಎಂದು ಹುಬ್ಬಳ್ಳಿಯ ಐಬಿಎಂಆರ್ ಗ್ರೂಪ್ ಆಫ್ ಇನ್‌ಸ್ಟಿಟೂಷನ್ ಅಕಾಡೆಮಿಕ್ ಡೀನ್ ಡಾ.ಸದಾನಂದ ಜಿ.ಹವನಗಿ ಹೇಳಿದರು.

ಪದವಿ ಪ್ರದಾನ ಸಮಾರಂಭ

ದಾವಣಗೆರೆ: ಪ್ರತಿ ಅಂತ್ಯ ಹೊಸ ಪ್ರಾರಂಭಕ್ಕೆ ದಾರಿ ಮಾಡಿಕೊಡುತ್ತದೆ. ಅಂತೆಯೇ ನೀವು ನಿಮ್ಮ ಜೀವನದ ಗೋಲ್ಡನ್ ಹಂತದಲ್ಲಿದ್ದೀರಿ. ನೀವು ಪದವಿ ಪೂರೈಸಿದ್ದೀರಿ. ಇದೀಗ ನಿಮ್ಮ ಮುಂದಿನ ಹಾದಿ ತೆರೆದಿದೆ ಎಂದು ಹುಬ್ಬಳ್ಳಿಯ ಐಬಿಎಂಆರ್ ಗ್ರೂಪ್ ಆಫ್ ಇನ್‌ಸ್ಟಿಟೂಷನ್ ಅಕಾಡೆಮಿಕ್ ಡೀನ್ ಡಾ.ಸದಾನಂದ ಜಿ.ಹವನಗಿ ಹೇಳಿದರು.

ನಗರದ ಜಿಎಂಐಟಿ ಕಾಲೇಜು ಆವರಣದಲ್ಲಿರುವ ಜಿಎಂ ಹಾಲಮ್ಮ ಸಭಾಂಗಣದಲ್ಲಿ ಶ್ರೀಶೈಲ ಎಜುಕೇಷನಲ್ ಟ್ರಸ್ಟ್‌ನ ಜಿಎಂಎಸ್ ಅಕಾಡೆಮಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ನಡೆದ 7ನೇ ಪದವಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿ ಅಂತ್ಯಕ್ಕೂ ಹೊಸ ಪ್ರಾರಂಭವಿರುತ್ತದೆ. ನೀವು ಈಗಾಗಲೇ ಒಂದು ಡಿಗ್ರಿ ಕೋರ್ಸ್‌ಗೆ ಪ್ರವೇಶ ಪಡೆದಿದ್ದೀರಿ, ಅದನ್ನು ಮುಗಿಸಿಬಿಟ್ಟಿದ್ದೀರಿ. ಆದರೆ, ನೀವು ಹೊಸ ಅವಕಾಶಗಳನ್ನು ಹೇಗೆ ಉತ್ತಮ ರೀತಿಯಲ್ಲಿ ಬಳಸಿಕೊಳ್ಳುವಿರೋ, ಹಾಗೆ ನಿಮ್ಮ ಭವಿಷ್ಯ ಉಜ್ವಲಗೊಳ್ಳುತ್ತದೆ. ಜೀವನದ ಯಶಸ್ಸಿಗೆ ಕನಸು, ವಿನ್ಯಾಸ, ಆಸೆ, ನಿರ್ಧಾರ, ಶಿಸ್ತು ಬಹಳ ಪ್ರಮುಖವಾಗಿವೆ ಎಂದರು.

ಜಿಎಂ ವಿಶ್ವವಿದ್ಯಾಲಯದ ಕುಲಸಚಿವ ಡಾ.ಬಿ.ಎಸ್.ಸುನಿಲ್ ಕುಮಾರ, ಜಿಎಂ ವಿವಿ ಕುಲಾಧಿಪತಿ ಜಿ.ಎಂ.ಲಿಂಗರಾಜು, ಜಿಎಂ ವಿವಿ ಆಡಳಿತಾಧಿಕಾರಿ ವೈ.ಯು.ಸುಭಾಷ್ಚಂದ್ರ, ಜಿಎಂಎಸ್ ಅಕಾಡೆಮಿ ಪ್ರದ ಕಾಲೇಜಿನ ಎಎಒ ಜಿ.ಜೆ. ಶಿವಕುಮಾರ್, ವಿವಿಧ ವಿಭಾಗಗಳ ಮುಖ್ಯಸ್ಥರಾದ ಪ್ರೊ.ಎಂ.ರಮೀಜ್ ರಾಜಾ, ಪ್ರೊ.ಜಿ.ಸಿ.ರಾಜಶೇಖರ, ಪ್ರೊ.ಪಿ.ಎಚ್. ಸವಿತಾ, ಡಾ. ಅರುಣಾ ಚರಂತಿ ಮಠ್, ಪ್ರೊ. ಸೈದಾ ಅಂಜುಮ್, ಪ್ರೊ.ಸ್ವಾತಿ ಮಹೇಂದ್ರಕರ್, ಡಾ.ಎಚ್.ಎಸ್.ಶ್ವೇತಾ, ಆರ್.ಅನುರೂಪ ಕುಮಾರಿ, ಅಧ್ಯಾಪಕರು, ವಿದ್ಯಾರ್ಥಿಗಳು ಇದ್ದರು.

ಸಿಂಚನ ಎಂ ಆಚಾರ್ಯ ಪ್ರಾರ್ಥಿಸಿದರು. ಜಿಎಂಎಸ್ ಅಕಾಡೆಮಿ ಪ್ರದ ಕಾಲೇಜಿನ ಪ್ರಾಚಾರ್ಯೆ ಡಾ. ಶ್ವೇತಾ ಮರಿಗೌಡರ್ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ