ಜನಪದರು ಶರಣರನ್ನು ನಿತ್ಯ ನೆನೆಯುತ್ತಾರೆ: ಡಾ.ರಮೇಶ ತೇಲಿ

| Published : Oct 20 2025, 01:04 AM IST

ಸಾರಾಂಶ

ವಿಜಯಪುರ: ಜನಪದರು ಬೆಳಿಗ್ಗೆ ಎದ್ದ ಕೂಡಲೇ ಬಸವಾದಿ ಶರಣರನ್ನು ನೆನೆಯುತ್ತ ಕಾಯಕ ಪ್ರಾರಂಭಿಸುತ್ತಾರೆ. ಇದು ನಾವೆಲ್ಲ ಹೆಮ್ಮೆಪಡುವ ಸಂಗತಿ ಎಂದು ಪ್ರಾಧ್ಯಾಪಕ ಡಾ.ರಮೇಶ ತೇಲಿ ಅಭಿಪ್ರಾಯ ಪಟ್ಟರು.

ವಿಜಯಪುರ: ಜನಪದರು ಬೆಳಿಗ್ಗೆ ಎದ್ದ ಕೂಡಲೇ ಬಸವಾದಿ ಶರಣರನ್ನು ನೆನೆಯುತ್ತ ಕಾಯಕ ಪ್ರಾರಂಭಿಸುತ್ತಾರೆ. ಇದು ನಾವೆಲ್ಲ ಹೆಮ್ಮೆಪಡುವ ಸಂಗತಿ ಎಂದು ಪ್ರಾಧ್ಯಾಪಕ ಡಾ.ರಮೇಶ ತೇಲಿ ಅಭಿಪ್ರಾಯ ಪಟ್ಟರು.

ನಗರದ ಐಶ್ವರ್ಯ ಬಡಾವಣೆಯ ವರದಾಂಜನೇಯ ದೇವಸ್ಥಾನದಲ್ಲಿ ನಡೆದ 547ನೇ ಸತ್ಸಂಗ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಯಕ ಹಾಗೂ ದಾಸೋಹ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು, ಜನಪದರು ಶರಣರನ್ನು ನೆನೆಸಿದ್ದಾರೆ. ಬಸವಣ್ಣ, ಸಿದ್ದರಾಮೇಶ್ವರ, ಅಲ್ಲಮಪ್ರಭು, ಹಿಪ್ಪರಗಿಯ ಮಾಚಯ್ಯ, ಉಪ್ಪರಿಗೆಯ ಸಂಗಯ್ಯ, ಹಾವಿನಾಳದ ಕಲ್ಲಯ್ಯ, ಮೇದಾರಕ ಕೇತಯ್ಯ, ಗೋಲಗೇರಿಯ ಗೊಲ್ಲಾಳ ಮುಂತಾದ ಶರಣರನ್ನು ಕುರಿತು ಮನ ತುಂಬಿ ಹಾಡಿ, ಅವರ ಬದುಕಿನ ಚಿಂತನೆಗಳನ್ನು ನಮಗೆಲ್ಲ ತಿಳಿಸಿದ್ದಾರೆ. ಜನಪದ ಸಾಹಿತ್ಯ ಶ್ರಮ ಸಂಸ್ಕೃತಿಯ ಪ್ರತೀಕವಾಗಿದ್ದು, ಕಾಯಕದ ನೆಲೆಯಲ್ಲಿ ಅರಳಿದ ಹೂವಾಗಿದೆ ಎಂದರು.

ಅಶೋಕ ದೇಶಟ್ಟಿ ಮಾತನಾಡಿ, ಶರಣರು ನಮಗೆಲ್ಲ ಆದರ್ಶಪ್ರಾಯರು. ಅವರ ಬದುಕಿನ ಚಿಂತನೆಗಳು ಇಂದಿಗೂ ನೂತನವಾಗಿವೆ. ಇವರ ಕುರಿತು ಜನಪದರು ಭಕ್ತಿಯಿಂದ ನೆನೆಸಿದ್ದಾರೆ ಎಂದು ಹೇಳಿದರು.

ಸುನಿತಾ ಬಿರಾದಾರ ಪ್ರಾರ್ಥಿಸಿದರು. ಸಾಹಿತಿ ಡಾ.ಮಲ್ಲಿಕಾರ್ಜುನ ಮೇತ್ರಿ ಸ್ವಾಗತಿಸಿ, ಪರಿಚಯಿಸಿದರು. ವಿಶ್ರಾಂತ ಪ್ರಾಚಾರ್ಯ ಪ್ರೊ.ಎಂ.ಓ.ಶಿರೂರ ನಿರೂಪಿಸಿದರು.

ವರದಾಂಜನೇಯ ದೇವಸ್ಥಾನದ ಅಧ್ಯಕ್ಷ ಬಿ.ಎನ್.ಬಿರಾದಾರ, ಕೋಶಾಧ್ಯಕ್ಷ ಎಸ್.ಕೆ.ಬಿರಾದಾರ, ಅರ್ಚಕ ಮಲ್ಲಯ್ಯಸ್ವಾಮಿ ಹಿರೇಮಠ, ಎಂ.ಕೆ.ಬಿಸನಾಳ, ಅರವಿಂದ ಗೊಬ್ಬರ, ನಾನಾಗೌಡ ಪಾಟೀಲ, ಕಮಲಾಕರ ಕುಮಟಗಿ, ಶ್ರೀಶೈಲ ಬೆಲ್ಲದ, ಲಕ್ಷ್ಮಣ ಮೇತ್ರಿ, ಜಿ.ಡಿ.ಬಾಗೇವಾಡಿ, ಚಂದ್ರಶೇಖರ ಸರಸಂಬಿ, ಅಶೋಕ ಬನ್ನಟ್ಟಿ, ಬಿ.ವಿ.ಪಾಟೀಲ, ಜಯಪ್ರಕಾಶ ಅಂಬಲಿ, ಪಾಯಣ್ಣ ಪಡಸಲಗಿ ಉಪಸ್ಥಿತರಿದ್ದರು.